Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISSF World Cup: ಚಿನ್ನಕ್ಕೆ ಗುರಿಯಿಟ್ಟ ಮನು ಭಾಕರ್-ಸೌರಭ್ ಚೌಧರಿ

ISSF World Cup: Manu Bhaker and Saurabh Chaudhary win gold

ನವದೆಹಲಿ, ಫೆಬ್ರವರಿ 27: ಭಾರತದ ಪ್ರತಿಭಾನ್ವಿತ ಶೂಟರ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಜೋಡಿ ನವದೆಹಲಿಯಲ್ಲಿ ನಡೆದ (ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್) ವಿಶ್ವಕಪ್ ಕೂಟದ 10 ಮೀಟರ್ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದಿದ್ದಾರೆ.

ಒಟ್ಟು 483.5 ಪಾಯಿಂಟ್ ಕಲೆ ಹಾಕಿದ ಭಾರತದ ಯುವ ಟೂಟರ್‌ಗಳ ಜೋಡಿ ಮೊದಲ ಸ್ಥಾನವನ್ನು ಗೆದ್ದುಕೊಂಡಿತು. ಟೂರ್ನಿಯಲ್ಲಿ ಭಾರತಕ್ಕೆ ಲಭಿಸುತ್ತಿರುವ ಮೂರನೇ ಬಂಗಾರದ ಪದಕವಿದು. ಇದಕ್ಕೂ ಮುನ್ನ ಅಪೂರ್ವಿ ಚಂದೇಲ, ಸೌರಭ್ ಚೌಧರಿ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ದೇಶಕ್ಕೆ ಚಿನ್ನದ ಪದಕ ತಂದಿದ್ದರು.

ಈ ವಿಭಾಗದ ಸ್ಪರ್ಧೆಯಲ್ಲಿ 477.7 ಅಂಕ ಗಳಿಸಿದ ಚೀನಾದ ರಾಂಕ್ಸಿನ್ ಜಿಯಾಂಗ್ ಮತ್ತು ಬೊವೆನ್ ಜಾಂಗ್ ಜೋಡಿ ಬೆಳ್ಳಿ ಜಯಿಸಿದರೆ, ಕೊರಿಯಾದ ಮಿನ್ಜುಂಗ್ ಕಿಮ್ ಮತ್ತು ಡೇಹನ್ ಪಾರ್ಕ್ 418.8 ಪಾಯಿಂಟ್‌ಗಳೊಂದಿಗೆ ಕಂಚಿಗೆ ತೃಪ್ತಿಪಟ್ಟರು.

Story first published: Wednesday, February 27, 2019, 17:34 [IST]
Other articles published on Feb 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+