
ಮ್ಯೂನಿಚ್, ಮೇ 28: ಜರ್ಮನಿಯ ಮ್ಯೂಜಿಚ್‌ನಲ್ಲಿ ಸೋಮವಾರ (ಮೇ 27) ನಡೆದ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಪೆಡರೇಷನ್ (ಐಎಸ್‌ಎಸ್‌ಎಫ್) ವಿಶ್ವಕಪ್ ನಲ್ಲಿ ಭಾರತದ ರಾಹಿ ಸರ್ನೋಬತ್ ಮತ್ತು ಸೌರಭ್ ಚೌಧರಿ ಬಂಗಾರ ಗೆದ್ದಿದ್ದಾರೆ.
ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಹಿ ಬಂಗಾರದೊಂದಿಗೆ 2022ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪುರುಷರ ವಿಭಾಗದ 10 ಮೀ. ಏರ್ ಪಿಸ್ತೂಲ್‌ನಲ್ಲಿ 17ರ ಹರೆಯದ ಸೌರಭ್ ಚಿನ್ನ ಗೆದ್ದಿದ್ದರು.
ಈ ಎರಡೂ ಬಂಗಾರ ಸೇರಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸುತ್ತಿರುವ ಮೂರನೇ ಚಿನ್ನದ ಪದಕವಿದು. 246.3 ಪಾಟಿಂಟ್ಸ್ ಪಡೆದ ಸೌರಭ್ ಚೌಧರಿ ಪ್ರಥಮ ಸ್ಥಾನದೊಂದಿಗೆ ತನ್ನದೇ ಹೆಸರಿನಲ್ಲಿದ್ದ 245 ಪಾಯಿಂಟ್ಸ್ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಭಾನುವಾರ (ಮೇ 26) ಅಪೂರ್ವಿ ಚಂದೇಲಾ ಅವರಿಗೂ ಬಂಗಾರ ಲಭಿಸಿತ್ತು.