Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISSF World Cup: ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಸೌರಭ್ ಚೌಧರಿ

ISSF World Cup: Saurabh Chaudhary, Smashes World Record To Win Gold

ನವದೆಹಲಿ, ಫೆಬ್ರವರಿ 24: ನವದೆಹಲಿಯಲ್ಲಿರುವ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಪೆಡರೇಷನ್ (ಐಎಸ್‌ಎಸ್‌ಎಫ್‌) ವಿಶ್ವಕಪ್ ಕೂಟದ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ಸೌರಭ್ ಚೌಧರಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.

ಶನಿವಾರ (ಫೆಬ್ರವರಿ 23) ಅಪೂರ್ವಿ ಚಂದೇಲಾ ಬಂಗಾರ ಗೆದ್ದ ಬಳಿಕ ಭಾರತಕ್ಕೆ ಲಭಿಸಿದ ಕೂಟದ ಎರಡನೇ ಬಂಗಾರದ ಪದಕವಿದು. ಕಳೆದ ವರ್ಷ ಯೂತ್ ಒಲಿಂಪಿಕ್ಸ್ ನಲ್ಲಿ ಬಂಗಾರ ಗೆದ್ದಿದ್ದ 16ರ ಹರೆಯದ ಸೌರಭ್ ಸರ್ಬಿಯಾದ ದಮೀರ್ ಮಿಕೆಕ್ ಅವರನ್ನು ಹಿಮ್ಮೆಟ್ಟಿಸಿ ಬಂಗಾರಕ್ಕೆ ಕೊರಳೊಡ್ಡಿದರು.

ಒಟ್ಟು 245 ಪಾಯಿಂಟ್ ಗಳಿಸಿದ ಚೌಧರಿ ಅಗ್ರ ಸ್ಥಾನ ಕಾಯ್ದುಕೊಂಡರು. ಸೌರಭ್ ಈ ಸಾಧನೆ ವಿಶ್ವದಾಖಲೆಗೂ ಕಾರಣವಾಗಿದೆಯಲ್ಲದೆ 2020ರ ಟೋಕಿಯೋ ಒಲಿಂಪಿಕ್‌ಗೆ ಅರ್ಹತೆಯನ್ನೂ ತಂದುಕೊಟ್ಟಿದೆ. 239.3 ಅಂಕ ಕಲೆ ಹಾಕಿದ ಮಿಕೆಕ್ ದ್ವಿತೀಯ ಸ್ಥಾನ ಪಡೆದುಕೊಂಡರೆ, ಚೀನಾದ ವೈ ಪಾಂಗ್ (215) ಕಂಚಿನ ಪದಕ ತನ್ನದಾಗಿಸಿಕೊಂಡರು.

Story first published: Sunday, February 24, 2019, 16:46 [IST]
Other articles published on Feb 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+