For Quick Alerts
ALLOW NOTIFICATIONS  
For Daily Alerts

ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಐಶ್ವರ್ಯ್

ISSF World Cup Shooting: Indias Aishwary Pratap Singh won gold in mens 50m rifle

ಈಜಿಪ್ಟ್‌ನ ಕೈರೋದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಪುರುಷರ ವೈಯಕ್ತಿಕ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಒಲಿಂಪಿಯನ್ ಐಶ್ವರ್ಯ್ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಈ ಮೂಲಕ ಗುರುವಾರವೂ ಭಾರತ ಈ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಈ ವಿಶ್ವಕಪ್‌ನಲ್ಲಿ ಇದು ಭಾರತ ಗೆದ್ದುಕೊಂಡಿರುವ ಆರನೇ ಪದಕವಾಗಿದ್ದು 4ನೇ ಚಿನ್ನದ ಪದಕವಾಗಿದೆ. ಈ ಮೂಲಕ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ.

ಕಳೆದ ವರ್ಷ ಚಾಂಗ್ವಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿಯೂ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಚಿನ್ನ ಗೆದ್ದಿದ್ದರು. ಈ ಬಾರಿಯ ಫೈನಲ್‌ನಲ್ಲಿ 22 ವರ್ಷದ ತೋಮರ್ ಚಿನ್ನದ ಪದಕಕ್ಕಾಗಿ ನಡೆದ ಹಣಾಯಣಿಯಲ್ಲಿ ಆಸ್ಟ್ರಿಯಾದ ಅಲೆಕ್ಸಾಂಡರ್ ಸ್ಮಿರ್ಲ್ ಅವರನ್ನು ಎದುರಿಸಿದ್ದು 16-6 ಅಂತರದಿಂದ ಸುಲಭವಾಗಿ ಗೆದ್ದುಕೊಂಡಿದ್ದಾರೆ. ತೋಮರ್ ರ್ಯಾಂಕಿಂಗ್ ಸುತ್ತಿನಲ್ಲಿ ಒಟ್ಟು 406.4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸ್ಮಿರ್ಲ್ 407.9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು.

ಶೂಟೀಂಗ್ ವಿಶ್ವಕಪ್‌ನಲ್ಲಿ ಐಶ್ವರ್ಯ್ ಪ್ರತಾಪ್ ಸಿಂಗ್ ಗೆದ್ದುಕೊಂಡಿರುವ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ದಕ್ಷಿಣ ಕೊರಿಯಾದ ಚಾಗ್ವಾನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿಯೂ ಐಶ್ವರ್ಯ್ ಚಿನ್ನದ ಪದಕಕ್ಕೆ ಗುರಿಯಿಡುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಈ ಗೆಲುವಿನ ಬಳಿಕ ಮಾತನಾಡಿದ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ "ನಾನು ಈ ಹಿಂದೆ ಎರಡು ಬಾರಿ ಈ ಶ್ರೇಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಈ ಬಾರಿ ನಾನು ಪದಕ ಗೆಲ್ಲಲೇಬೇಲೆಂದು ನಿರ್ಧರಿಸಿದ್ದೆ" ಎಂದಿದ್ದಾರೆ. ಶ್ರೇಯಾಂಕ ಸುತ್ತಿನಲ್ಲಿ ನಿಧಾನದ ಆರಂಭವನ್ನು ಪಡೆದ ಬಗ್ಗೆ ಕೇಳಿದಾಗ, "ಅದು ನನ್ನ ಮನಸ್ಸಿಗೆ ಹೆಚ್ಚು ಪರಿಣಾಮ ಬೀರಲಿಲ್ಲ. ನಾನು ಹೇಳಿದಂತೆ ಗೆಲ್ಲುವ ಬಗ್ಗೆ ತುಂಬಾ ದೃಢವಾಗಿದ್ದೆ ಮತ್ತು ಮತ್ತು ಅದರ ಬಗ್ಗೆ ಆತ್ಮವಿಶ್ವಾಸದಿಂದ ಇದ್ದೆ. ಹಾಗಾಗಿ ಗೆಲುವು ಸಾಧ್ಯವಾಗಿದೆ" ಎಂದಿದ್ದಾರೆ.

ಇನ್ನು ಇದಕ್ಕೂ ಮುನ್ನ ಮೊದಲ ಪದಕ ಸ್ಪರ್ಧೆಯಲ್ಲಿ ಮಹಿಳೆಯರ 25 ಮೀ ಪಿಸ್ತೂಲ್‌ನಲ್ಲಿ 589 ಅಂಕಗಳೊಂದಿಗೆ ಶ್ರೇಯಾಂಕದ ಸುತ್ತಿಗೆ ಅರ್ಹತೆ ಪಡೆದಿದ್ದ ಭಾರತದ ರಿದಮ್ ಸಾಂಗ್ವಾನ್ ಫೈನಲ್ ಹಂತಕ್ಕೆ ಪ್ರವೇಶಿಸಲು ವಿಫಲವಾದರು. ಮಂಗಳವಾರ ನಡೆದ ಮೊದಲ ಪ್ರೆಸಿಶನ್ ಸುತ್ತಿನಲ್ಲಿ 295 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದರೂ ನಂತರ ರ್ಯಾಪಿಡ್ ಫೈರ್ ಸುತ್ತಿನಲ್ಲಿ 294 ರನ್ ಗಳಿಸಿ ಜರ್ಮನಿಯ ಡೊರೀನ್ ವೆನ್ನೆಕ್ಯಾಂಪ್ ಅವರಿಗಿಂತ ಹಿಂದುಳಿದರು.

Story first published: Thursday, February 23, 2023, 10:20 [IST]
Other articles published on Feb 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+