ISSF World Cup: ಮೂವರು ಶೂಟರ್ಸ್‌ಗೆ ಕೊರೊನಾ ಸೋಂಕು

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ವರ್ಲ್ಡ್ ಕಪ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮೂವರು ಶೂಟರ್‌ಗಳಿಗೆ ಕೊರೊನಾವೈರಸ್ ಪಾಸಿಟಿವ್ ಆಗಿರುವ ಸಂಗತಿ ವರದಿಯಾಗಿದೆ. ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ ಶನಿವಾರ ಈ ಮಾಹಿತಿ ನೀಡಿದೆ.
ಕೊರೊನಾವೈರಸ್ ಪಾಸಿಟಿವ್ ಬಂದಿರುವ ಮೂರೂ ಶೂಟರ್‌ಗಳು ಅವರವರ ಹೋಟೆಲ್‌ಗಳಲ್ಲಿ ಐಸೋಲೇಶನ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪಾಸಿಟಿವ್ ಬಂದಿರುವ ಈ ಮೂವರು ಶೂಟರ್‌ಗಳ ಜೊತೆ ರೂಮ್ ಶೇರ್ ಮಾಡಿಕೊಂಡಿದ್ದ ಶೂಟರ್‌ಗಳೂ ಕೂಡ ಕ್ವಾರಂಟೈನ್‌ಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಂಕಿಗೀಡಾಗಿರುವ ಶೂಟರ್‌ಗಳ ರೂಮ್‌ಮೇಟ್‌ಗಳು ಕೂಡ ಪರೀಕ್ಷೆಗೆ ಒಳಗಾದ ಬಳಿಕ ಕ್ವಾರಂಟೈನ್ ಪಾಲಿಸುತ್ತಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಸೋಂಕಿಗೀಡಾಗಿರುವ ಮೂರೂ ಶೂಟರ್‌ಗಳು ಭಾರತೀಯರು ಎಂದು ತಿಳಿದು ಬಂದಿದೆ.
ಗುರುವಾರ ಅಂತಾರಾಷ್ಟ್ರೀಯ ಮಟ್ಟದ ಟಾಪ್ ಶೂಟರ್ ಒಬ್ಬರಿಗೆ ಕೋವಿಡ್ 19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಆ ಬಳಿಕ ಅವರನ್ನು ಆಸ್ಪತ್ರೆಯಲ್ಲಿ ಐಸೊಲೇಶನ್‌ನಲ್ಲಿ ಇಡಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications