ISSF World Cup: ವಿಜಯ್‌ವೀರ್-ತೇಜಸ್ವಿನಿಗೆ ಜೋಡಿಗೆ ಚಿನ್ನದ ಪದಕ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ವಿಶ್ವಕಪ್‌ನಲ್ಲಿ ಭಾರತದ ವಿಜಯ್‌ವೀರ್ ಸಿಧು ಮತ್ತು ತೇಜಸ್ವಿನಿ ಚಿನ್ನದ ಪದಕ ಗೆದ್ದಿದ್ದಾರೆ. 25 ಮೀ. ರ್‍ಯಾಪಿಡ್ ಫೈರ್ ಪಿಸ್ತೂಲ್ ಮಿಕ್ಸ್ಡ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ ಸೇರ್ಪಡೆಯಾಗಿದೆ.
ಡಾಕ್ಟರ್ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಜಯ್‌ವೀರ್ ಸಿಧು ಮತ್ತು ತೇಜಸ್ವಿನಿ ಜೋಡಿ ಭಾರತದ ಜೋಡಿಯೇ ಆದ ಗುರುಪ್ರೀತ್ ಸಿಂಗ್ ಮತ್ತು ಅಶೋಕ್ ಅಭಿದ್ಯ ಪಾಟಿಲ್ ಜೋಡಿಯನ್ನು 9-1ರ ಅಂತರದಲ್ಲಿ ಸೋಲಿಸಿತು.
ಕ್ವಾಲಿಫಿಕೇಶನ್ 2ರಲ್ಲಿ ಗುರ್‌ಪ್ರೀತ್ ಮತ್ತು ಪಾಟಿಲ್ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಈ ಜೋಡಿ 370 ಅಂಕ ಗಳಿಸಿತ್ತು. ಇದೇ ಸುತ್ತಿನಲ್ಲಿ 16ರ ಹರೆಯದ ತೇಜಸ್ವಿ ಮತ್ತು 18ರ ಹರೆಯದ ಸಿಧು 368 ಪಾಯಿಂಟ್ಸ್ ಗಳಿಸಿದ್ದರು.
ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ 13 ಚಿನ್ನ, 8 ಬೆಳ್ಳಿ, 6 ಕಂಚು ಸೇರಿ ಒಟ್ಟಿಗೆ 27 ಪದಕಗಳನ್ನು ಗೆದ್ದಿದೆ. ದ್ವಿತೀಯ ಸ್ಥಾನದಲ್ಲಿರುವ ಯುಎಸ್‌ಎ 3 ಚಿನ್ನ, 3 ಬೆಳ್ಳಿ, 1 ಕಂಚು ಸೇರಿ 7 ಪದಕಗಳನ್ನು ಜಯಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications