ಭಾರತಕ್ಕೆ ವಿಶ್ವಕಪ್ ಹಾದಿ ಕಠಿಣ: ರಾಹುಲ್ ದ್ರಾವಿಡ್
ಮುಂಬೈ ಜ. 29: ಮುಂಬರುವ ವಿಶ್ವಕಪ್ ಭಾರತಕ್ಕೆ ಕಠಿಣ ಸವಾಲು ನೀಡಲಿದ್ದು, ವಿಜಯ ಸುಲಭ ಸಾಧ್ಯವಲ್ಲ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಮಹೆಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಿಚ್ ಗೆ ಸರಿಯಾಗಿ ಹೊಂದಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.[ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸೂಪರ್ ಓವರ್]

ಭಾರತ ತನ್ನ ಸ್ಪಿನ್ ಅಸ್ತ್ರದಿಂದಲೇ ಸಾಧನೆ ಮಾಡಬೇಕಿದೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಆಡಿದ ತಂಡ ಉತ್ತಮ ಆಟವನ್ನೇನೂ ಪ್ರದರ್ಶನ ನೀಡಲಿಲ್ಲ ಎಂಬುದು ಎಲ್ಲರಿಗೆ ತಿಳಿದಿದೆ. ಭಾರತದ ಸ್ಪಿನ್ ಶಕ್ತಿಯ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಪಿಚ್ ಗಳು ವಿಭಿನ್ನವಾಗಿ ವರ್ತಿಸುತ್ತಿವೆ. ಅಡಿಲೇಡ್ ನಿಧಾನ ಗತಿಯ ಬೌಲಿಂಗ್ ಗೆ ನೆರವಾಗುತ್ತಿದ್ದರೆ, ಬ್ರಿಸ್ಬೇನ್ ವೇಗದ ಬೌಲಿಂಗ್ ಗೆ ನೆರವಾಗುತ್ತಿದೆ. ಹಾಗಾಗಿ ಸೂಕ್ತ ಹೊಂದಾಣಿಕೆಯೊಂದಿಗೆ ತಂಡ ಕಣಕ್ಕಿಳಿಯಬೇಕಾಗುತ್ತಿದೆ ಎಂದು ದ್ರಾವಿಡ್ ಸಲಹೆ ನೀಡಿದ್ದಾರೆ. ಕ್ವಾಟರ್ ಫೈನಲ್ ಗೆ ಏರಲು ಭಾರತ ಶ್ರಮ ವಹಿಸಬೇಕಾದದ್ದು ಅಗತ್ಯ ಹೇಳಿದ್ದಾರೆ.[ಐಸಿಸಿ ವಿಶ್ವಕಪ್ ಅಪ್ಲಿಕೇಷನ್ ಇಳಿಸಿಕೊಳ್ಳೋದು ಹೇಗೆ?]
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ಥಾನ, ದಕ್ಷಿಣ ಆಫ್ಅರಿಕಾ ಮತ್ತು ಶ್ರೀಲಂಕಾ ಟ್ರೋಫಿ ಎತ್ತಿ ಹಿಡಿಯುವ ಸಾಮರ್ಥ್ಯ ಹೊಂದಿವೆ. ಉತ್ತಮ ಸಂಯೋಜನೆ ಮತ್ತು ಪ್ರದರ್ಶನದಿಂದ ಮಾತ್ರ ಭಾರತ ಎದುರಾಳಿಗಳನ್ನು ಮಣಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications