ITTF Ranking 2024: ವೃತ್ತಿಜೀವನದ ಅತ್ಯುನ್ನತ ರ್‍ಯಾಕಿಂಗ್ ತಲುಪಿದ ಭಾರತದ ಟೇಬಲ್ ಟೆನಿಸ್ ತಾರೆ
ಮೇ 14 ಮಂಗಳವಾರ, ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್) ಸೋಮವಾರ ನೂತನ ರ್‍ಯಾಕಿಂಗ್ ಬಿಡುಗಡೆ ಮಾಡಿದೆ. ಭಾರತದ ಓರ್ವ ಆಟಗಾರ್ತಿ ಹೊರತುಪಡೆಸಿದರೆ ಉಳಿದ ಆಟಗಾರರು ಹೇಳಿಕೊಳ್ಳವಂತ ರ್‍ಯಾಕಿಂಗ್ ಪಡೆದಿಲ್ಲ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ತಾರೆ ಹಾಗು ಖೇಲ್ ರತ್ನ ಪ್ರಶಸ್ತಿ ವಿಜೇತೆ ಮನಿಕಾ ಬಾತ್ರಾ ಅವರು ತಮ್ಮ ವೃತ್ತಿಜೀವನದ ಅತ್ಯುನ್ನತ 24ನೇ ರ್‍ಯಾಕಿಂಗ್ ಅನ್ನು ಸಾಧಿಸಿದ್ದಾರೆ. ಇದಕ್ಕೂ ಮುನ್ನ 39ನೇ ಸ್ಥಾನದಲ್ಲಿದ್ದ ಮನಿಕಾ ಬಾತ್ರಾ 15 ಸ್ಥಾನಗಳನ್ನು ದಾಟಿ ಇದೀಗ 24ನೇ ಸ್ಥಾನಕ್ಕೆ ತಲುಪಿದ್ದಾರೆ.

ಈ ಮೂಲಕ ಮನಿಕಾ ಬಾತ್ರಾ ವಿಶ್ವ ರ್‍ಯಾಕಿಂಗ್‌ನಲ್ಲಿ ಅಗ್ರ-25 ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಪ್ಯಾಡ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 2019 ರಲ್ಲಿ ಜಿ ಸತ್ಯನ್ (ಪ್ರಸ್ತುತ 65 ರ್‍ಯಾಕಿಂಗ್) ಸಾಧಿಸಿದ ವಿಶ್ವ 24ನೇ ರ್‍ಯಾಕಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ಸಿಂಗಲ್ಸ್‌ನಲ್ಲಿ ಭಾರತೀಯರು ಸಾಧಿಸಿದ ಅತ್ಯುನ್ನತ ಶ್ರೇಣಿಯಾಗಿದೆ.
ಕಳೆದ ವಾರ ಸೌದಿ ಸ್ಮ್ಯಾಶ್ ಈವೆಂಟ್‌ನಲ್ಲಿ ಕ್ವಾರ್ಟರ್-ಫೈನಲ್ ತಲುಪಿದ ಬಳಿಕ ಮಣಿಕಾ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. 32ರ ಸುತ್ತಿನಲ್ಲಿ ಚೀನಾದ ಟಾಪ್ ಆಟಗಾರ್ತಿ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತೆ 2 ರ್‍ಯಾಕಿಂಗ್‌ನಲ್ಲಿರುವ ವಾಂಗ್ ಮನ್ಯು ವಿರುದ್ಧ ಗೆಲುವು ದಾಖಲಿಸಿದ್ದರು.
ನಂತರ ಜರ್ಮನಿಯ 14ನೇ ಶ್ರೇಯಾಂಕದ ನೀನಾ ಮಿಟ್ಟೆಲ್‌ಹೈಮ್ ಅವರನ್ನು ಸೋಲಿಸಿ ಕ್ವಾರ್ಟರ್-ಫೈನಲ್ ತಲುಪಿದ್ದರು. ಕ್ವಾರ್ಟರ್‌ನಲ್ಲಿ ಜಪಾನ್‌ನ 5ನೇ ಶ್ರೇಯಾಂಕದ ಹಿನಾ ಹಯಾಟಾ ವಿರುದ್ ಮಣಿಕಾ ಸೋತರು.
ಪುರುಷರ ಸಿಂಗಲ್ಸ್ ರ್‍ಯಾಕಿಂಗ್‌ನಲ್ಲಿ ಅನುಭವಿ ಅಚಂತ್ ಶರತ್ ಕಮಲ್ ಮೂರು ಸ್ಥಾನಗಳನ್ನು ಕಳೆದುಕೊಂಡು 40ನೇ ಸ್ಥಾನಕ್ಕೆ ಕುಸಿದಿದ್ದು, ಅತ್ಯುನ್ನತ ಶ್ರೇಯಾಂಕದ ಭಾರತರ ಪುರುಷ ಆಟಗಾರನಾಗಿ ಉಳಿದಿದ್ದಾರೆ. ಮಾನವ್ ಠಕ್ಕರ್ ಮತ್ತು ಹರ್ಮೀತ್ ದೇಸಾಯಿ ಕ್ರಮವಾಗಿ 62 ಮತ್ತು 63 ನೇ ಸ್ಥಾನದಲ್ಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಸುತೀರ್ಥಾ ಮುಖರ್ಜಿ ಮತ್ತು ಅಯಾಹಿಕಾ ಮುಖರ್ಜಿ ಒಂದು ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದರೆ, ಪುರುಷರ ಡಬಲ್ಸ್‌ನಲ್ಲಿ ಥಕ್ಕರ್ ಮತ್ತು ಮನುಷ್ ಶಾ ಮೂರು ಸ್ಥಾನ ಕುಸಿದು 15ನೇ ಸ್ಥಾನಕ್ಕೆ ತಲುಪಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಮತ್ತು ಸತ್ಯನ್ ಒಂದು ಸ್ಥಾನ ಕುಸಿದು 24ನೇ ಸ್ಥಾನಕ್ಕೆ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications