Jacob Kiplimo: ಹಾಫ್ ಮ್ಯಾರಥಾನ್‌ನಲ್ಲಿ ಜಾಕೋಬ್ ಕಿಪ್ಲಿಮೊ ವಿಶ್ವ ದಾಖಲೆ
ಬಾರ್ಸಿಲೋನಾದಲ್ಲಿ ಉಗಾಂಡಾದ ಓಟಗಾರ ಜಾಕೋಬ್ ಕಿಪ್ಲಿಮೊ ಅವರು ವಿಶ್ವ ಅರ್ಧ-ಮ್ಯಾರಥಾನ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 2021ರ ಜಾಕೋಬ್ ಕಿಪ್ಲಿಮೊ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 24 ವರ್ಷದ ಜಾಕೋಬ್ ಕಿಪ್ಲಿಮೊ ಅವರು 21.0975 ಕಿಮೀ ಓಟವನ್ನು 57 ನಿಮಿಷಗಳೊಳಗೆ ಪೂರ್ಣಗೊಳಿಸಿ ಮೊದಲ ಅಥ್ಲೀಟ್ ಎನಿಸಿಕೊಂಡರು. ಈ ಮೂಲಕ ಕಳೆದ ವರ್ಷ ವೇಲೆನ್ಸಿಯಾದಲ್ಲಿ ಇಥಿಯೋಪಿಯಾದ ಯೋಮಿಫ್ ಕೆಜೆಲ್ಚಾ ನಿರ್ಮಿಸಿದ್ದ 57 ನಿಮಿಷ 30 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಮುರಿದ್ದಾರೆ. ಬಾರ್ಸಿಲೋನಾ ಹಾಫ್ ಮ್ಯಾರಥಾನ್ ಅನ್ನು 56 ನಿಮಿಷ 42 ಸೆಕೆಂಡುಗಳಲ್ಲಿ ಜಾಕೋಬ್ ಕಿಪ್ಲಿಮೊ ಮುಗಿಸಿದ್ದಾರೆ.
ಗಾಳಿಯಿಲ್ಲದ 13 ಡಿಗ್ರಿ ಸೆಲ್ಸಿಯಸ್‌ನ ಸೂಕ್ತ ಹವಾಮಾನ ಪರಿಸ್ಥಿತಿಯಲ್ಲಿ ಕಿಪ್ಲಿಮೊ ಓಡಿದರು. ಜಾಕೋಬ್ ಕಿಪ್ಲಿಮೊ ಪ್ರತಿ ಕಿಮೀಗೆ 2:45 ವೇಗದಲ್ಲಿ ಓಡಲು ಪ್ರಾರಂಭಿಸಿದರು. ಆದರೆ ಮೂರನೇ ಕಿಲೋಮೀಟರ್ ವೇಳೆಗೆ, ಅವರು ತಮ್ಮ ವೇಗವನ್ನು ಹೆಚ್ಚಿಸಲು ನಿರ್ಧರಿಸಿದರು. ನಿರೀಕ್ಷೆಗಿಂತ ವೇಗವಾಗಿ ಅವರು ಓಟವನ್ನು ಪೂರ್ಣಗೊಳಿಸಿದರು. ಅರ್ಧ-ಮ್ಯಾರಥಾನ್ ದಾಖಲೆಯ ಜೊತೆಗೆ, ಕಿಪ್ಲಿಮೊ 15 ಕಿಮೀ ಓಟವನ್ನು 40 ನಿಮಿಷ 7 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಿಪ್ಲಿಮೊ ಹೇಳಿದ್ದೇನು?
ಕೇವಲ 15 ವರ್ಷದವನಿದ್ದಾಗ ರಿಯೊದಲ್ಲಿ 5000 ಮೀಟರ್ ಓಟದಲ್ಲಿ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ ಕಿಪ್ಲಿಮೊ ಹಲಲವು ದಾಖಲೆಗಳನ್ನು ಮಾಡಿದ್ದಾರೆ. ಇದೀಗ ಹೊಸ ದಾಖಲೆಯನ್ನು ಸೃಷ್ಟಿಸಿರುವ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
'ನಾನು ಇಂದು ಮಾಡಿದ್ದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಉತ್ತಮ ಓಟವನ್ನು ಪೂಣಗೊಳಿಸುತ್ತೇನೆ ಎಂದುಕೊಂಡಿದೆ. ಆದರೆ ವಿಶ್ವ ದಾಖಲೆಯನ್ನು ಮುರಿಯುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಕಿಮೀಗಳು ಕಳೆದಂತೆ ಮತ್ತು ನಾನು ದಾಖಲೆಯ ವೇಗದಲ್ಲಿ ಹೋಗುತ್ತಿರುವುದನ್ನು ನೋಡಿದಾಗ, ಎಷ್ಟೇ ಕಷ್ಟವಾದರೂ ನಾನು ಆ ವೇಗವನ್ನು ಕಾಯ್ದುಕೊಳ್ಳಬೇಕು ಎಂದು ನಾನು ನನಗೆ ನಾನೇ ಹೇಳಿಕೊಂಡೆ' ಎಂದು ಕಿಪ್ಲಿಮೊ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications