ಕೊರೊನಾ ವೈರಸ್ ಭೀತಿ: ನಿಗದಿಯ ಪ್ರಕಾರವೇ ಒಲಿಂಪಿಕ್ಸ್ ನಡೆಸಲು ಬದ್ಧ ಎಂದ ಜಪಾನ್ ಕ್ರೀಡಾ ಸಚಿವ

ಜಗತ್ತಿನಾದ್ಯಂತ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಒಂದು ಕಡೆ ನಿಯಂತ್ರಣಕ್ಕೆ ಬರುತ್ತಿದೆ ಎಂದಾಗಲೆ ಮತ್ತೊಂದು ಭಾಗದಲ್ಲಿ ವೈರಸ್ ಹಬ್ಬುವ ಆತಂಕದ ವಾತಾವರಣವನ್ನುಂಟು ಮಾಡುತ್ತಿದೆ. ಈ ಮಧ್ಯೆ ಈ ಬಾರಿಯ ಒಲಿಂಪಿಕ್ಸ್ ಸಾಕಷ್ಟು ಗೊಂದಲದಿಂದ ಕೂಡಿದೆ.
ಈ ವಿಚಾರವಾಗಿ ಜಪಾನ್ ಕ್ರೀಡಾ ಸಚಿವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಜಪಾನ್ ನಿಗದಿತ ದಿನಾಂಕದಂದೇ ಒಲಿಂಪಿಕ್ಸ್ ನಡೆಸಲು ಬದ್ಧವಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ಗುರುವಾರ ಜಪಾನ್ ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಜಪಾನ್ ಕ್ರೀಡಾ ಸಚಿವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಒಲಿಂಪಿಕ್ಸ್ ಕೂಟವನ್ನು ರದ್ಧುಗೊಳಿಸುವುದು ಅಥವಾ ಮುಂದೂಡುವುದು ಕ್ರಿಡಾಪಟುಗಳ ದೃಷ್ಟಿಕೋನದಿಂದ ಒಳ್ಳೆಯ ನಿರ್ದಾರವಲ್ಲ, ಕ್ರೀಡಾಪಟುಗಳು ನಿರಾಳವಾಗಿ ತಮ್ಮ ಕ್ರೀಡೆಯತ್ತ ಗಮನಹರಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂಬ ಮಾತನ್ನು ಜಪಾನ್ ಕ್ರೀಡಾ ಸಚಿವ ಸಿಕೋ ಹಶಿಮೋಟೋ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದಾರೆ.
ಜಪಾನ್‌ನಾದ್ಯಂತ ಈವರೆಗೆ ಸಾವಿರಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣ ಧೃಡಪಟ್ಟಿದೆ. ಅದರಲ್ಲೂ ಬುಧವಾರ ಒಂದೇ ದಿನ 36 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಒಂದು ದಿನದಲ್ಲಿ ಜಪಾನ್‌ನಲ್ಲಿ ಪತ್ತೆಯಾದ ಅತಿ ಹೆಚ್ಚು ಪ್ರಕರಣವಾಗಿದೆ. ಇದಾದ ಮರುದಿನವೇ ಜಪಾನ್ ಕ್ರೀಡಾ ಸಚಿವರು ಈ ಹೇಳಿಕೆಯನ್ನು ನೀಡಿರುವುದು ವಿಶೇಷವೆನಿಸಿದೆ.
ಇನ್ನು ಬುಧವಾರ ಒಲಿಂಪಿಕ್ಸ್ ಸಿದ್ಧತಾ ಸಭೆಯ ನಡೆದಿತ್ತು. ಈ ಸಭೆಯಲ್ಲಿ 'ರದ್ಧತಿ' ಅಥವಾ 'ಮುಂದೂಡಿಕೆ' ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥೋಮಸ್ ಬಾಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications