Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ ಮುಂದೂಡಲು ಟ್ರಂಪ್ ಇತ್ತ ಸಲಹೆ ಬದಿಗಿಟ್ಟ ಜಪಾನ್

Japan Says Olympics on Track Despite Trumps Suggestion to Postpone

ಟೋಕಿಯೋ, ಮಾರ್ಚ್ 13: ಟೋಕಿಯೋ ಒಲಿಂಪಿಕ್ 2020 ನಡೆಸುವ ನಿರ್ಧಾರಕ್ಕೆ ಜಪಾನ್ ಗಟ್ಟಿಯಾಗಿದೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಹೈಡ್ ಸೂಗ ಹೇಳಿದ್ದಾರೆ. ಒಲಿಂಪಿಕ್ ಮುಂದೂಡುವಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಸಲಹೆಯ ಹೊರತಾಗಿಯೂ ಕ್ರೀಡಾಕೂಟ ನಡೆಯುವುದರಲ್ಲಿದೆ ಎಂದು ಸೂಗ ಮಾಹಿತಿ ನೀಡಿದ್ದಾರೆ.

ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಈ ಮೊದಲು ಮಾತುಕತೆ ನಡೆದಿದೆ ಎಂದು ಯೋಶಿಹೈಡ್ ಸೂಗ ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಸಲಹೆಯ ಬಗ್ಗೆ ಅಬೆ, ಸೂಗ ಜೊತೆ ಚರ್ಚೆ ನಡೆಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಸೂಗ ಸ್ಪಷ್ಟನೆ ನೀಡಿಲ್ಲ. ಒಟ್ಟಿನಲ್ಲಿ ಟ್ರಂಪ್ ಮತ್ತು ಅಬೆ ಮಧ್ಯೆ ಸುಮಾರು 50 ನಿಮಿಷಗಳ ಮಾತುಕತೆ ದೂರವಾಣಿ ಮೂಲಕ ನಡೆದಿದೆ ಎಂದಷ್ಟೇ ತಿಳಿಸಿದ್ದಾರೆ.

'ನಾನು ಜೊತೆಗಿದ್ದಾಗ ಅವರು (ಟ್ರಂಪ್-ಅಬೆ) ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರಯಾಣ ನಿರ್ಬಂಧಗಳ ಬಗ್ಗೆ ಏನೂ ಮಾತನಾಡಲಿಲ್ಲ,' ಎಂದು ಸೂಗ ವಿವರಿಸಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಆತಂಕ ಸೃಷ್ಟಿಸಿರುವುದರಿಂದ ಜಪಾನ್‌ ನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ಗೂ ಹೊಡೆತ ಬಿದ್ದಿದೆ. ಆದರೆ ಕ್ರೀಡಾಕೂಟ ನಡೆಸುವುದರಲ್ಲಿದ್ದೇವೆ ಎಂದು ಜಪಾನ್ ಈ ಮೊದಲೂ ಹೇಳಿತ್ತು.

ಅಂದ್ಹಾಗೆ, ಪುರಾತನ ಗ್ರೀಕ್‌ನ ಒಲಿಂಪಿಕ್ಸ್ ಸಂಪ್ರದಾಯದಂತೆ ಒಲಿಂಪಿಯಾದಲ್ಲಿ ನಡೆಯಲಿರುವ 2020ರ ಟೋಕಿಯೋ ಒಲಿಂಪಿಕ್ಸ್‌ ಜ್ಯೋತಿ ಬೆಳಗುವ ಕಾರ್ಯಕ್ರಮ ಈಗಾಗಲೇ ನಡೆದಿದೆ. ಆದರೆ ಈ ಕಾರ್ಯಕ್ರಮದಲ್ಲೂ ಹೆಚ್ಚಿನ ವೀಕ್ಷಕರು ಇರಲಿಲ್ಲ ಎಂದು ತಿಳಿದು ಬಂದಿದೆ.

Story first published: Friday, March 13, 2020, 13:25 [IST]
Other articles published on Mar 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+