Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jaspal Rana: ಪದಕ ಗೆದ್ದ ಕ್ರೀಡಾಪಟುಗಳು ಪ್ರಶಸ್ತಿಗೆ ಏಕೆ ಅರ್ಜಿ ಸಲ್ಲಿಸಬೇಕು?; ಮನು ಭಾಕರ್ ಕೋಚ್ ಪ್ರಶ್ನೆ?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಮನು ಭಾಕರ್ ಅವರನ್ನು ಈ ವರ್ಷ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಏಕೆ ನಿರ್ಲಕ್ಷಿಸಲಾಯಿತು ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಮನು ಭಾಕರ್ ಹೆಸರನ್ನು ತದನಂತರ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನಾಮನಿರ್ದೇಶನ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂದು ಜನವರಿ 17 ರಂದು ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರು ಭಾರತದ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಮನು ಭಾಕರ್ ವೈಯಕ್ತಿಕ ಕೋಚ್ ಜಸ್ಪಾಲ್ ರಾಣಾ ಕೇಂದ್ರ ಕ್ರೀಡಾ ಸಚಿವಾಲಯವನ್ನು ಪ್ರಶ್ನಿಸಿದ್ದಾರೆ.

ಮೈಖೇಲ್ ಜೊತೆಗಿನ ಸಂದರ್ಶನದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಜಸ್ಪಾಲ್ ರಾಣಾ ಮಾತನಾಡಿದ್ದಾರೆ. ಈ ವೇಳೆ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಮನು ಭಾಕರ್ ಅವರನ್ನು ಕಡೆಗಣಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೇಶಕ್ಕಾಗಿ ಪದಕ ಗೆದ್ದಿರುವ ಕ್ರೀಡಾಪಟಗಳು ಪ್ರಶಸ್ತಿಗೆ ಏಕೆ ಅರ್ಜಿ ಸಲ್ಲಿಸಬೇಕು ಎಂದು ಜಸ್ಪಾಲ್ ರಾಣಾ ಪ್ರಶ್ನೆ ಮಾಡಿದ್ದಾರೆ.

Jaspal Rana questions why an athlete who has won medal for the country should apply for the award

ಈ ಬಾರಿ ಮನು ಭಾಕರ್ ಅವರನ್ನು ಕಡೆಗಣಿಸಿರುವುದು ಒಂದೇ ಪ್ರಕರಣವಲ್ಲ ಎಂದು ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡ್ವಿಯಾ ನಂತರ ಜಸ್ಪಾಲ್ ರಾಣಾ ಸಹಾ ಸ್ಪಷ್ಟಪಡಿಸಿದ್ದಾರೆ. ದೇಶಕ್ಕಾಗಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಗತ್ಯವಿದೆಯೇ?. ಮನು ಭಾಕರ್ ಯಾರು ಮತ್ತು ಆಕೆಯ ಅರ್ಹತೆಗಳೇನು ಎಂಬುದು ಸರ್ಕಾರ ನಡೆಸುತ್ತಿರುವವರಿಗೆ ತಿಳಿದಿಲ್ಲವೇ? ಈ ಅವಮಾನ ಆಕೆಯ ಯಶಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದಾಗ ಜಸ್ಪಾಲ್ ರಾಣಾ ಕೂಡ ಅಡೆತಡೆಗಳನ್ನು ಎದುರಿಸಿದ್ದರು.
ಒಬ್ಬ ಕ್ರೀಡಾಪಟು ಅಥವಾ ತರಬೇತುದಾರ ಎದುರಿಸಬೇಕಾದ ಎಲ್ಲಾ ಸವಾಲುಗಳ ಬಗ್ಗೆ ರಾಣಾ ತಿಳಿದುಕೊಂಡಿದ್ದಾರೆ.

Story first published: Friday, January 17, 2025, 12:03 [IST]
Other articles published on Jan 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+