Jasprit Bumrah: ಕಣ್ಣು ಮಿಟುಕಿಸುವಷ್ಟರಲ್ಲಿ ಮುಶ್ಫಿಕರ್ ರಹೀಮ್ ವಿಕೆಟ್ ಉರುಳಿಸಿದ ಬುಮ್ರಾ
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಸೋಮವಾರ ಆರಂಭವಾಗಿದೆ. ಕಳೆದ ಮೂರು ದಿನಗಳಿಂದ ಕಾನ್ಪುರ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಔಟ್ ಫೀಲ್ಡ್ ಒದ್ದೆಯಾದ ಕಾರಣ ಪಂದ್ಯವನ್ನು ನಡೆಸಲು ಸಾಧ್ಯವಾಗಿರಲಿಲ್ಲ.
ಇಂದು (ಸೋಮವಾರ) ಆರಂಭವಾಗಿರುವ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಎಲ್ಲರ ಗಮನ ಸೆಳೆದಿದೆ. ಜಸ್ಪ್ರೀತ್ ಬುಮ್ರಾ ಅವರು ತಮ್ಮ ಬೌಲಿಂಗ್‌ನಲ್ಲಿ ಬಾಂಗ್ಲಾದೇಶದ ಅನಭವಿ ಮುಶ್ಫಿಕರ್ ರಹೀಮ್ (11) ವಿಕೆಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಮುಶ್ಫಿಕರ್ ರಹೀಮ್ ಕ್ರೀಸ್‌ನಲ್ಲಿದ್ದರೆ, ಬೃಹತ್ ಇನ್ನಿಂಗ್ಸ್ ಆಡುವುದರಲ್ಲಿ ಎರಡು ಮಾತಿಲ್ಲ. ಆದರೆ, ಜಸ್ಪ್ರೀತ್ ಬುಮ್ರಾ ಇದಕ್ಕೆ ಅವಕಾಶವನ್ನು ನೀಡದೆ ಮುಶ್ಫಿಕರ್ ರಹೀಮ್ ಅವರನ್ನು ಆಟದಿಂದ ವಜಾಗೊಳಿಸಿದ್ದಾರೆ. ಮುಶ್ಫಿಕರ್ ಕಳೆದುಕೊಳ್ಳುವ ಮೂಲಕ ದೊಡ್ಡ ಇನ್ನಿಂಗ್ಸ್ ಕಟ್ಟುವ ಲೆಕ್ಕಚಾರ ಹಾಕಿಕೊಂಡಿದ ಬಾಂಗ್ಲಾದೇಶಕ್ಕೆ ನಿರಾಸೆಯಾಗಿದೆ. ಮುಷ್ಫಿಕರ್ ರಹೀಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬುಮ್ರಾ ಬೌಲಿಂಗ್ ಚಮತ್ಕಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಕೆಟ್ ಪಡೆದಿದ್ದೇಗೆ?
ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಔಟಾದ ಬಳಿಕ ಕ್ರೀಸ್‌ಗೆ ಬಂದ ಮುಶ್ಫಿಕರ್ ರಹೀಮ್ ನೆಲೆಯೂರಲು ತಯಾರಾಗುತ್ತಿದ್ದರು. ದಾಳಿಗಿಳಿದ ಜಸ್ಪ್ರೀತ್ ಬುಮ್ರಾ 41ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಮುಂದಾದರು. ಈ ವೇಳೆ ಮುಶ್ಫಿಕರ್ ಸ್ಟ್ರೈಕ್‌ನಲ್ಲಿದ್ದರು. 41ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮೊದಲ ಎಸೆತದಲ್ಲಿ ಮುಶ್ಫಿಕರ್ ಬೌಂಡರಿ ಬಾರಿಸಿದರು. ಇದಾದ ನಂತರ ಎರಡನೇ ಎಸೆತದಲ್ಲಿ ಬುಮ್ರಾ ಬೆಂಕಿ ಚೆಂಡನ್ನು ಎಸೆದರು.
ಬುಮ್ರಾ ಅವರ ಈ ಎಸೆತಕ್ಕೆ ಮುಶ್ಫಿಕರ್ ರಹೀಮ್ ಬಳಿ ಉತ್ತರ ಇರಲಿಲ್ಲ. ಎರಡನೇ ಎಸೆತದಲ್ಲಿ ಬುಮ್ರಾ ಹಾಕಿದ ಇನ್ ಸ್ವಿಂಗ್ ಚೆಂಡನ್ನು ಮುಶ್ಫಿಕರ್ ಗುರುತಿಸಲು ಸಾಧ್ಯವಾಗಲಿಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ನೇರವಾಗಿ ಚೆಂಡು ಮುಶ್ಫಿಕರ್ ಅವರ ಆಫ್ ಸ್ಟಂಪ್‌ಗೆ ಬಡಿಯಿತು. ಈ ಚೆಂಡನ್ನು ಎದುರಿಸಲೂ ಮುಶ್ಫಿಕರ್ ಮುಂದಾಗಲಿಲ್ಲ.
ನಾಯಕನ ನೆಚ್ಚಿನ ಬೌಲರ್
ಭಾರತ ತಂಡಕ್ಕೆ ಮೂರು ಮಾದರಿ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರು ಪ್ರಮುಖ ಬೌಲರ್ ಆಗಿದ್ದಾರೆ.
ನಾಯಕ ರೋಹಿತ್ ಶರ್ಮಾ ಅವರ ನೆಚ್ಚಿನ ಬೌಲರ್ ಆಗಿರುವ ಬುಮ್ರಾ ತಂಡಕ್ಕೆ ವಿಕೆಟ್ ಅವಶ್ಯತೆ ಇರುವಾಗೆಲ್ಲ ತೆಗೆದುಕೊಟ್ಟಿದ್ದಾರೆ. ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 402 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಪೈಪೋಟಿ ನೀಡುವ ಯಾವುದೇ ಬೌಲರ್ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications