ಎಫ್-2 ರೇಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಜೇಹನ್ ದಾರುವಾಲ

ಸಖಿರ್ (ಬಹ್ರೆನ್): ಫಾರ್ಮುಲಾ 2 ರೇಸ್ ಇತಿಹಾಸದಲ್ಲಿ ಭಾರತದ ಡ್ರೈವರ್ ಜೇಹನ್ ದಾರುವಾಲ ಇತಿಹಾಸ ನಿರ್ಮಿಸಿದ್ದಾರೆ. ಫಾರ್ಮುಲಾ 2 ರೇಸ್‌ನಲ್ಲಿ ಗೆದ್ದ ಚೊಚ್ಚಲ ಭಾರತೀಯನಾಗಿ ದಾರುವಾಲ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ (ಡಿಸೆಂಬರ್ 7) ಬಹ್ರೆನ್‌ನಲ್ಲಿ ನಡೆದ ಸಖಿರ್ ಗ್ರ್ಯಾಂಡ್‌ಪ್ರಿಕ್ಸ್‌ನಲ್ಲಿ ದಾರುವಾಲ ಪ್ರಶಸ್ತಿ ಗೆದ್ದಿದ್ದಾರೆ.
ಫಾರ್ಮುಲಾ 2 ಚಾಂಪಿಯನ್ ಜರ್ಮನಿಯ ಮಿಕ್ ಷೂಮೇಕರ್ ಮತ್ತು ಬ್ರಿಟಿಷ್ ರೇಸರ್ ಡೇನಿಯಲ್ ಟಿಕ್ಟಮ್ ವಿರುದ್ಧದ ರೋಚಕ ಸ್ಪರ್ಧೆಯಲ್ಲಿ 22ರ ಹರೆಯದ ಭಾರತೀಯ ಜೇಹನ್ ದಾರುವಾಲ ಅವರು ಅಗ್ರ ಸ್ಥಾನಿಗರಾಗಿ ಗಮನ ಸೆಳೆದಿದ್ದಾರೆ.
ರೇಯೋ ರೇಸಿಂಗ್‌ಗೆ ಚಾಲಕರಾಗಿದ್ದ ದ್ವಿತೀಯ ಗ್ರಿಡ್ ನಲ್ಲಿ ಮುನ್ನಡೆ ಸಾಧಿಸಿದರು. ಅಲ್ಲಿ ತನ್ನದೇ ಗುಂಪಿನಲ್ಲಿದ್ದ ಡೇನಿಯಲ್ ಟಿಕ್ಟಮ್ ಅವರನ್ನು ಜೇಹನ್ ಹಿಂದಿಕ್ಕಿದ್ದರು. ಫಾರ್ಮುಲಾ 1ರ ಬೆಂಬಲ ಸ್ಪರ್ಧೆಯಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2020 ವರ್ಷವನ್ನು ಜೇಹನ್ ಉತ್ತಮ ರೀತಿಯಲ್ಲಿ ಕೊನೆಗೊಳಿಸಿದ್ದಾರೆ.
ಫೋರ್ಸ್ ಇಂಡಿಯಾ ಎಫ್ 1 ತಂಡದ ರಕ್ಷಕರಾಗಿದ್ದ ಜೇಹನ್ ಅವರು ಕಾರ್ಲಿನ್ ಮೋಟಾರ್ಸ್ಪೋರ್ಟ್ಸ್‌ನೊಂದಿಗೆ ಫಾರ್ಮುಲಾ-2 ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications