WWE ಚಾಂಪಿಯನ್ ಶಿಪ್ ಕಳೆದುಕೊಂಡ ಭಾರತದ ಕುಸ್ತಿಪಟು
ನ್ಯೂಯಾರ್ಕ್, ನವೆಂಬರ್ 09: WWE ಸ್ಮಾಕ್ ಡೌನ್ ಲೈವ್ ನಲ್ಲಿ ಆದ ಬೆಳವಣಿಗೆ ನಂತರ ಭಾರತ ಮೂಲದ ಜಿಂದರ್ ಮಹಲ್ ತನ್ನ ಚಾಂಪಿಯನ್ ಶಿಪ್ ಕಳೆದುಕೊಳ್ಳಬೇಕಾಯಿತು.
ಈ ಮೂಲಕ ಜಿಂದರ್ ಮಹಲ್ ಅವರು ತಮ್ಮ ಚಾಂಪಿಯನ್ ಶಿಪ್ ಉಳಿಸಿಕೊಳ್ಳಲು ಎಜೆ ಸ್ಟೈಲಸ್ ವಿರುದ್ಧ ಸೆಣಸಬೇಕಾಗಿದೆ.

150 ದಿನಗಳ ಕಾಲ ಚಾಂಪಿಯನ್ ಶಿಪ್ ಬೆಲ್ಟ್ ಹೊಂದಿದ್ದ ಜಿಂದರ್ ಮಹಲ್ ಅವರು ಸಿಂಗ್ ಬ್ರದರ್ಸ್ ನೆರವಿನಿಂದ ಎಜೆ ಸ್ಟೈಲಸ್ ಮೇಲೆ ದಾಳಿ ಮಾಡಿ ಚಾಂಪಿಯನ್ ಶಿಪ್ ಉಳಿಸಿಕೊಂಡಿದ್ದರು.
ಆದರೆ, ಏಜೆ ಸ್ಟೈಲಸ್ ಕಳೆದ ವಾರ ಸ್ಮಾಕ್ ಡೌನ್ ಲೈವ್ ನಲ್ಲಿ ಜಿಂದರ್ ರನ್ನು ಸೋಲಿಸುವ ಮೂಲಕ WWE ನ ಹೊಸ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಇದರಿಂದಾಗಿ ಸರ್ವೈವರ್ ಸೀರಿಸ್ ಪಂದ್ಯಗಳ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ.
ಏಜೆ ಸ್ಟೈಲಸ್ ಅವರು ಈಗ ಯೂನಿವರ್ಸಲ್ ಚಾಂಪಿಯನ್ ಬ್ರಾಕ್ ಲೆಸ್ನರ್ ಅವರನ್ನು ಎದುರಿಸಿ ತಮ್ಮ ಚಾಂಪಿಯನ್ ಶಿಪ್ ಉಳಿಸಿಕೊಳ್ಳಬೇಕಾಗಿದೆ.
ಸರ್ವೈವರ್ ಸೀರಿಸ್ ನಲ್ಲಿ ಈ ಚಾಂಪಿಯನ್ ವಿರುದ್ಧ ಚಾಂಪಿಯನ್ ಪಂದ್ಯ ನಡೆಯಲಿದ್ದು, ನವೆಂಬರ್ 19ರ ಭಾನುವಾರ WWE ನೆಟ್ವರ್ಕ್ ನಲ್ಲಿ ನೇರ ಪ್ರಸಾರವಿರುತ್ತದೆ. 7 ET/4 PT.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Jinder Mahal lost WWE title
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications