Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಈ ಇಬ್ಬರು ಭಾರತೀಯ ಅಥ್ಲೀಟ್ಸ್ ಒಲಿಂಪಿಕ್ಸ್‌ನಿಂದ ಔಟ್‌!

ಆಗಸ್ಟ್‌ 3 ಶನಿವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಎಂಟನೇ ದಿನವೂ ಭಾರತ ನಿರಾಸೆ ಅನುಭವಿಸಿದೆ. ಪುರುಷರ ವಿಭಾಗದಲ್ಲಿ ಭಾರತದ ಏಕೈಕ ಶಾಟ್‌ಪುಟ್ ಅಥ್ಲೀಟ್ ತಜಿಂದರ್ಪಾಲ್ ಸಿಂಗ್ ತೂರ್ ಮತ್ತು 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಅವರ ಒಲಿಂಪಿಕ್ ಅಭಿಯಾನ ಕೊನೆಗೊಂಡಿದೆ.

ಎರಡು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ ತಜಿಂದರ್ಪಾಲ್ ಸಿಂಗ್ ತೂರ್ ತಮ್ಮ ಗುಂಪಿನಲ್ಲಿ 15ನೇ ಸ್ಥಾನ ಮತ್ತು ಒಟ್ಟಾರೆ 29ನೇ ಸ್ಥಾನ ಪಡೆದರು. ಇದರೊಂದಿಗೆ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿದ ತಜಿಂದರ್ಪಾಲ್ ಸಿಂಗ್ ತೂರ್ ಫೈನಲ್‌ಗೆ ಮುನ್ನೆಡೆಯಲು ಸಾಧ್ಯವಾಗಲಿಲ್ಲ.

Jinderpal Singh Toor - Parul Chaudhary out of Paris Olympics 2024

ಇಟಲಿಯ ಲಿಯೊನಾರ್ಡೊ ಫ್ಯಾಬ್ರಿ ಅವರು 21.76 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಅಗ್ರಸ್ಥಾನ ಪಡೆದರೆ, 21.35 ರ ಒಲಿಂಪಿಕ್ ಅರ್ಹತಾ ಮಾನದಂಡವನ್ನು ಪೂರೈಸಿದ ಒಟ್ಟು 12 ಅಥ್ಲೀಟ್‌ಗಳು ಶಾಟ್‌ಪುಟ್‌ನ ಫೈನಲ್‌ಗೆ ತಲುಪಿದರು. ಶಾಟ್‌ಪುಟ್‌ನ ಫೈನಲ್‌ ಪಂದ್ಯ ಭಾನುವಾರ ನಡೆಯಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ ಅವರ ನೀರಸ ಪ್ರದರ್ಶನ ಎದ್ದು ಕಾಣಿಸಿತು. ಏಕೆಂದರೆ 18 ಮೀಟರ್ ಮಾರ್ಕ್‌ನ ಆಚೆಗೆ ಎಸೆಯಲು ತಜಿಂದರ್ಪಾಲ್ ವಿಫಲವಾದರು. ಇದು ಅವರ ವೈಯಕ್ತಿಕ ಅತ್ಯುತ್ತಮ 21.77 ಮೀಟರ್‌ಗಳು ಮತ್ತು ಈ ಋತುವಿನಲ್ಲಿ ಎಸೆದಿದ್ದ 20.38 ಮೀಟರ್‌ಗಳಿಗಿಂತ ಕಡಿಮೆ ಇತ್ತು.

ಈ ವರ್ಷ ಜೂನ್‌ನಲ್ಲಿ ಪಂಚಕುಲದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ ಪ್ರಾರಂಭವಾಗುವ ಒಂದು ದಿನದ ಮೊದಲು ತಜಿಂದರ್ಪಾಲ್ ತಮ್ಮ ಪಾದದ ನೋವಿನ ಬಗ್ಗೆ ದೂರು ನೀಡಿದ್ದರು.

ಆದರೆ ಸಂಪೂರ್ಣವಾಗಿ ಫಿಟ್‌ನಲ್ಲದಿದ್ದರೂ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ಬಳಿಕ ತಜಿಂದರ್ಪಾಲ್ ಅವರು ವಿಶ್ವ ರ‍್ಯಾಕಿಂಗ್ ಕೋಟಾ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದಿದ್ದರು.

ಪಾರುಲ್ ಚೌಧರಿ ಹೊರಗೆ

ಇದಲ್ಲದೇ ಮಹಿಳೆಯರ ವಿಭಾಗದಲ್ಲಿ ಹಾಂಗೌಝೌ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪಾರುಲ್ ಚೌಧರಿ 24ನೇ ಸ್ಥಾನ ಹಾಗೂ ಅಂಕಿತಾ 40ನೇ ಸ್ಥಾನ ಪಡೆದು ಅಂತಿಮ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಮಹಿಳೆಯರ 5000 ಮೀ ಓಟದಲ್ಲಿ, ಪಾರುಲ್ ತನ್ನ ರಾಷ್ಟ್ರೀಯ ದಾಖಲೆಯ ಸಮಯವನ್ನು ಸೆಕೆಂಡಿನ ಮೂರನೇ ಒಂದು ಭಾಗದಿಂದ ಕಳೆದುಕೊಂಡರು. 5 ನಿಮಿಷ 10.35 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆ ಹೊಂದಿರುವ ಪಾರುಲ್ 15:10.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೀಟ್ ನಂಬರ್ ಒನ್‌ನಲ್ಲಿ 14ನೇ ಸ್ಥಾನ ಗಳಿಸಿದರು.

ಅಂಕಿತಾ ಹೀಟ್ ನಂಬರ್ ಒನ್‌ನಲ್ಲಿ 20ನೇ ಮತ್ತು ಕೊನೆಯ ಸ್ಥಾನ ಗಳಿಸಿ ಒಟ್ಟಾರೆ 40ನೇ ಸ್ಥಾನ ಪಡೆದರು. ಹಾಲಿ ಒಲಿಂಪಿಕ್ 1500ಮೀ ಚಾಂಪಿಯನ್ ಕೀನ್ಯಾದ ಫೇಯ್ತ್ ಕಿಪ್ಯೆಗೊನ್ ಅರ್ಹತಾ ಸುತ್ತಿನಲ್ಲಿ 14:57.56 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನಕ್ಕೇರಿದರು.

ಪಾರುಲ್ ಅವರು 14:52.00 ಸೆಕೆಂಡುಗಳ ನೇರ ಪ್ರವೇಶ ಸಮಯವನ್ನು ದಾಟಲು ಸಾಧ್ಯವಾಗದ ಕಾರಣ ವಿಶ್ವ ರ‍್ಯಾಕಿಂಗ್ ಕೋಟಾದ ಮೂಲಕ 5000 ಮೀಟರ್‌ ಓಟಕ್ಕೆ ಅರ್ಹತೆ ಪಡೆದಿದ್ದರು. ಅಂಕಿತಾ ಕೂಡ ವಿಶ್ವ ರ‍್ಯಾಕಿಂಗ್ ಕೋಟಾ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

Story first published: Saturday, August 3, 2024, 11:59 [IST]
Other articles published on Aug 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+