For Quick Alerts
ALLOW NOTIFICATIONS  
For Daily Alerts

ಆಗಸ್ಟ್ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ ಜಿಯೋ ಮಾರ್ಟ್ ಫ್ರೀಡಂ ರನ್

ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಯೋಮಾರ್ಟ್ ಪ್ರಸ್ತುತಿಯೊಂದಿಗೆ 'ಅಡಿಡಾಸ್' ಸಹಯೋಗದ 'ಜಿಯೋಮಾರ್ಟ್ ಫ್ರೀಡಂ ರನ್' ಆಯೋಜಿಸಿದೆ. ಆಗಸ್ಟ್ 13ರ ಭಾನುವಾರದಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದ ಗಂಗಾಧರ ಚೆಟ್ಟಿ ರಸ್ತೆಯ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ನಲ್ಲಿ ಈ ಫ್ರೀಡಂ ರನ್ ಆಯೋಜನೆಯಾಗಲಿದೆ.

'ನಿಮ್ಮ ಸ್ವಂತ ಓಟವನ್ನು ಓಡಿ, ನಿಮ್ಮ ಸ್ವಾತಂತ್ರ್ಯವನ್ನು ಆನಂದಿಸಿ' ಎಂಬ ಧ್ಯೇಯದೊಂದಿಗೆ ನಡೆಯಲಿರುವ ಓಟದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಳ್ಳಿ ಮತ್ತು ಓಟದ ಸ್ಥಳದಲ್ಲಿ ಸಮುದಾಯವನ್ನು ಸೇರಿಕೊಂಡು ಮೋಜಿನ ಭಾನುವಾರ ಆನಂದಿಸಿರಿ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Jio Mart Freedom Run to Take Place in Bengaluru on August 13

ಅಡಿಡಾಸ್ ಸಹಯೋಗದ 'ಜಿಯೋಮಾರ್ಟ್ ಫ್ರೀಡಂ ರನ್' ಎರಡು ವಿಭಾಗಗಳಲ್ಲಿ ಆಯೋಜನೆಯಾಗಲಿದೆ. ಬೆಳಗ್ಗೆ 6 ಗಂಟೆಯಿಂದ 10ಕೆ ಓಟದ ಸ್ಪರ್ಧೆ ನಡೆದರೆ ಬೆಳಗ್ಗೆ 7.15ರಿಂದ 5ಕೆ ಓಟ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಾರದಲ್ಲಿ ನಡೆಯಲಿರುವ ಈ ಕೂಟದಲ್ಲಿ ನೂರಾರು ಫಿಟ್‌ನೆಸ್ ಉತ್ಸಾಹಿಗಳು ಮತ್ತು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಯಾವುದೇ ಶುಲ್ಕವಿಲ್ಲದೆ 18 ವರ್ಷ ಮೇಲ್ಪಟ್ಟ ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸರಳವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಮತ್ತು ನಮ್ಮ ಮಹಾನ್ ರಾಷ್ಟ್ರದ ಒಗ್ಗಟ್ಟಿನ ಸಂಭ್ರಮ ಮತ್ತು ಗೌರವವನ್ನು ಜೀವನದ ಹುರುಪು, ಸಾಹಸ ಮತ್ತು ಸ್ವಾತಂತ್ರ್ಯದೊಂದಿಗೆ ಆಚರಿಸೋಣ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಅಡಿಡಾಸ್ ತನ್ನ ರನ್ಟಾಸ್ಟಿಕ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಈ ಕೂಟವನ್ನು ವಿಸ್ತರಿಸುತ್ತದೆ, ಅವರ ಡಿಜಿಟಲ್ ಫಿಟ್‌ನೆಸ್ ಸಮುದಾಯವನ್ನು ಈ ರನ್‌ಗೆ ಸೇರಲು ಮತ್ತು ಅವರ ಸಕ್ರಿಯ ವಾರಾಂತ್ಯಕ್ಕೆ ಸೇರಿಸಲು ಅನುವು ಮಾಡಿಕೊಡುತ್ತದೆ. ಓಟ ಪೂರ್ಣಗೊಂಡ ನಂತರ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಜೇತರು ಪದಕಗಳು, ಪ್ರಮಾಣಪತ್ರಗಳು ಮತ್ತು ಅತ್ಯಾಕರ್ಷಕ ಅಡಿಡಾಸ್ ಸರಕುಗಳನ್ನು ಪಡೆಯಲಿದ್ದಾರೆ. ಹೀಗಾಗಿ ಎಲ್ಲರೂ ತಡಮಾಡದೆ ಇಂದೇ ಹೆಸರು ನೋಂದಾಯಿಸಲು ಕೋರಲಾಗಿದೆ. ನೋಂದಣಿ ಲಿಂಕ್ ಇಲ್ಲಿದೆ: https://bit.ly/440hYGP
ದಿನಾಂಕ: 13 ಆಗಸ್ಟ್, ಭಾನುವಾರ, 2023
ಸಮಯ: ಬೆಳಗ್ಗೆ 4:45ಕ್ಕೆ ಓಟಗಾರರು ಹಾಜರಿರಬೇಕು.
ಸ್ಥಳ: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್, ಗಂಗಾಧರ ಚೆಟ್ಟಿ ರಸ್ತೆ, ಹಲಸೂರು ಕೆರೆ, ಬೆಂಗಳೂರು

Story first published: Monday, August 7, 2023, 22:07 [IST]
Other articles published on Aug 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+