Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WWE ರಿಂಗ್‌ನ ಲ್ಯೂಕ್ ಹಾರ್ಪರ್ ಖ್ಯಾತಿಯ ಜಾನ್ ಹ್ಯೂಬರ್ ನಿಧನ

Jon Huber, WWE’s Luke Harper, dies at the age of 41

ವಾಷಿಂಗ್ಟನ್: ಅಮೆರಿಕಾದ ವೃತ್ತಿಪರ ರಸ್ಲರ್, ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (WWE) ರಿಂಗ್‌ನಲ್ಲಿ ಲ್ಯೂಕ್ ಹಾರ್ಪರ್ ಎಂದೇ ಖ್ಯಾತರಾಗಿದ್ದ ದೈತ್ಯ ದೇಹಿ ಜಾನ್ ಹ್ಯೂಬರ್ (ಜೋನಾಥನ್ ಹ್ಯೂಬರ್ ಪೂರ್ತಿ ಹೆಸರು) ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.

WWE ಸ್ಟಾರ್‌ಗಳಾದ ಬ್ರೌನ್ ಸ್ಟ್ರೋಮನ್, ಬ್ರಿಯಾನ್ ವೈಟ್ ತಂಡದ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡು ರಂಜಿಸುತ್ತಿದ್ದ ಲ್ಯೂಕ್ ಹಾರ್ಪರ್‌ಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಯಿತ್ತು ಎನ್ನಲಾಗಿದೆ. ರಸ್ಲರ್ ಅಗಲಿಕೆಗೆ WWE ರಂಗ ಸಂತಾಪ ಸೂಚಿಸಿದೆ.

ರಸ್ಲಿಂಗ್‌ನಲ್ಲಿ ಲ್ಯೂಕ್ ಹಾರ್ಪರ್ ಅವರು ಡ್ಬ್ಲ್ಯೂಡಬ್ಲ್ಯೂಇ ಮತ್ತು ಎನ್‌ಎಕ್ಸ್‌ಟಿಯಲ್ಲಿ ಹೆಚ್ಚು ರಂಜಿಸಿ ಜನಪ್ರಿಯರಾಗಿದ್ದರು. ಲ್ಯೂಕ್ ಹಾರ್ಪರ್ ಸಾವಿಗೆ ಅವರ ಪತ್ನಿ ಅಮಂಡಾ ಸಂತಾಪ ಸೂಚಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 'ನನ್ನ ಬೆಸ್ಟ್ ಫ್ರೆಂಡ್‌ ಒಬ್ಬನನ್ನು ಇವತ್ತು ಕಳೆದುಕೊಂಡಿದ್ದೇನೆ,' ಎಂದು ಅಮಂಡಾ ಬರೆದಿದ್ದಾರೆ.

WWE ಸ್ಟಾರ್ ರಸ್ಲರ್‌ಗಳೆನಿಸಿರುವ ಕೇನ್, ಡೇನಿಯಲ್ ಬ್ರಿಯಾನ್, ದಿ ಶೀಲ್ಡ್, ಜಾನ್ ಸೆನಾ, ಟ್ರಿಪಲ್ ಎಚ್‌, ಹಲ್ಕ್ ಹೋಗನ್, ಡ್ರ್ಯೂ ಮ್ಯಾಕೆನ್ಟೈರ್, ಶೇಮಸ್, ಬ್ರೌನ್ ಸ್ಟ್ರೋಮನ್, ರ್‍ಯಾಂಡಿ ಆರ್ಟನ್ ಸೇರಿದಂತೆ ಅನೇಕ ಮಂದಿ ಲ್ಯೂಕ್ ಹಾರ್ಪರ್ ಸಾವಿಗೆ ಕಂಬನಿ ಮಿಡಿದ್ದಾರೆ.

Story first published: Sunday, December 27, 2020, 18:07 [IST]
Other articles published on Dec 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+