Junior world wrestling championship: ರವೀಂದರ್‌ಗೆ ಬೆಳ್ಳಿ ಪದಕ

ಯುಎಫ್‌ಎ (ರಷ್ಯಾ): ರಷ್ಯಾದಲ್ಲಿ ನಡೆದ ಜೂನಿಯರ್ ವರ್ಲ್ಡ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ರಸ್ಲರ್ ರವೀಂದರ್ ಬೆಳ್ಳಿ ಪದಕ ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ರವೀಂದರ್ ಅವರು ಇರಾನ್ ಸ್ಪರ್ಧಿಯ ಎದುರು ಸೋಲುವುದರೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಹಿಳಾ 76 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬಿಪಾಶಾ ಫೈನಲ್‌ಗೆ ಪ್ರವೇಶಿಸುವ ಮೂಲಕ ಬಂಗಾರದ ಪದಕದಾಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಇದರಲ್ಲದೆ ಭಾರತೀಯ ಪುರುಷರಿಗೆ ಇನ್ನೂ ಮೂರು ಕಂಚಿನ ಪದಕಗಳು ಬಂದಿವೆ. ಪುರುಷರು ಫ್ರೀ-ಸ್ಟೈಲ್ ವಿಭಾಗದಲ್ಲಿ ಒಟ್ಟು 6 ಪದಕಗಳೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಭಾರತ ಯಶ್ (74 ಕೆಜಿ), ಪೃಥ್ವಿ ಬಾಬಾ ಸಹೇಬ್ ಪಟೇಲ್ (92 ಕೆಜಿ) ಮತ್ತು ಅನಿರುದ್ಧ್ (125 ಕೆಜಿ ವಿಭಾಗದಲ್ಲಿ) ಕಂಚಿನ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಗೌರವ್ ಬಲಿಯನ್ (79 ಕೆಜಿ) ಮತ್ತು ದೀಪಕ್ (97 ಕೆಜಿ) ಮಂಗಳವಾರ (ಆಗಸ್ಟ್ 17) ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು.
ಪುರುಷರ 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರವೀಂದರ್ ಅವರು ಫೈನಲ್‌ನಲ್ಲಿ ಇರಾನ್‌ನ ಬಲಿಷ್ಠ ರೆಹಮಾನ್ ಮೌಸಾ ಅಮೌಝದ್ಕಲಿ ಎದುರು ಶರಣಾದರು. ಈ ಅಮೌಝದ್ಕಲಿ ಅವರು ಕಳೆದ ಜೂನ್‌ನಲ್ಲಿ ನಡೆದಿದ್ದ ಯಾಸರ್ ದೋಗು ಸ್ಪರ್ಧೆಯಲ್ಲಿ ಬಂಗಾರ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications