ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ಹರ್ಡಲ್ಸ್‌ಗೆ ಅರ್ಹತೆ ಪಡೆದ ಜ್ಯೋತಿ ಯರಾಜಿ; ಈ ಸಾಧನೆ ಮಾಡಿದ ಮೊದಲ ಭಾರತೀಯ
ಜುಲೈ 8 ಸೋಮವಾರ, ಭಾರತದ ಸ್ಟಾರ್ ಓಟಗಾರ್ತಿ ಜ್ಯೋತಿ ಯರಾಜಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಭಾರತದ ಹರ್ಡಲರ್ ಜ್ಯೋತಿ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್‌ಗೆ ಬರಲಿದ್ದಾರೆ.
ಈ ಮೂಲಕ ಜ್ಯೋತಿ ಅವರು ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯರಾಗಿದ್ದಾರೆ. ಮಹಿಳೆಯರ 100 ಮೀ ಹರ್ಡಲ್ಸ್ 1972 ರಿಂದ ಪ್ರತಿ ಒಲಿಂಪಿಕ್ಸ್‌ನ ಭಾಗವಾಗಿದೆ. ಆದರೆ ಭಾರತೀಯ ಅಥ್ಲೀಟ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

ಪ್ರಸ್ತುತ ರಾಷ್ಟ್ರೀಯ ದಾಖಲೆ ಹೊಂದಿರುವ ಜ್ಯೋತಿ, ಏಷ್ಯನ್ ಗೇಮ್ಸ್‌ನಲ್ಲಿ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಜ್ಯೋತಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಭಾವಶಾಲಿ ದೃಢತೆಯನ್ನು ಪ್ರದರ್ಶಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಈ ವರ್ಷದ ಆರಂಭದಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಮೊಟೊನೆಟ್ ಜಿಪಿಯಲ್ಲಿ ಹರ್ಡಲ್ಸ್ ಓಟದಲ್ಲಿ ಸಾಧಿಸಿದ 12.78 ಸೆಕೆಂಡುಗಳು ಜ್ಯೋತಿ ಅವರ ವೈಯಕ್ತಿಕ ಅತ್ಯುತ್ತಮ ಸಮಯ. ಇತ್ತೀಚೆಗೆ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವೊಂದರ ಜೊತೆಗೆ ಭಾರತದ ನೆಲದಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ.
ನೀತಾ ಅಂಬಾನಿ ಸಂತಸ
ಪ್ಯಾರಿಸ್ ಒಲಿಂಪಿಕ್ಸ್‌ಗೆ ಜ್ಯೋತಿ ಅವರು ಆರ್ಹತೆ ಪಡೆದಿರುವ ಬಗ್ಗೆ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. 'ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಹರ್ಡಲ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಅಥ್ಲೀಟ್ ಜ್ಯೋತಿ ಯರಾಜಿ ಬಗ್ಗೆ ನಮಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಿದೆ.
ಜ್ಯೋತಿ ಅವರ ಪ್ರಯಾಣ, ಸಮರ್ಪಣೆ ಮತ್ತು ಅದ್ಭುತ ಸಾಧನೆಗಳು ಕನಸುಗಳ ಶಕ್ತಿ ಹಾಗು ದಣಿವರಿಯದ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಜ್ಯೋತಿ ಭಾರತದ ಯುವಕರ ಚೈತನ್ಯ ಮತ್ತು ಪ್ರತಿಭೆಯ ಪ್ರತೀಕ ಎಂದು ನೀತಾ ಅಂಬಾನಿ ಹೊಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications