ಚೆನ್ನೈ, ಜುಲೈ 20 : ಯೂನಿವರ್ಸಲ್ ಸ್ಟಾರ್ ನಟ ಕಮಲ್ ಹಾಸನ್ ಪ್ರೊ ಕಬಡ್ಡಿ ಲೀಗ್ ಐದನೇ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ ಸಹಮಾಲೀಕತ್ವದ ತಮಿಳ್ ತಲೈವಾಸ್ ತಂಡದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ತಲೈವಾಸ್ ತಂಡದ ಜೆರ್ಸಿಯನ್ನು ಬುಧವಾರ ಅನಾವರಣಗೊಳಿಸಿದ ಬಳಿಕ ಕಮಲ್ ಹಾಸನ್ ಮಾತನಾಡಿದರು. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಮಿಳು ಸಿನಿಮಾ ನಟರಾದ ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ತೇಜಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ 'ಕ್ರೀಡಾ ತಂಡದ ಭಾಗವಾಗಲು ನನಗೆ ಅತೀವ ಸಂತೋಷವಾಗಿದೆ' ಎಂದು ಕಮಲ್ ಹಾಸನ್ ಸಂತಸ ವ್ಯಕ್ತಪಡಿಸಿದರು.