Paralympics 2024: ಕಂಚಿನ ಪದಕದ ಹೋರಾಟವನ್ನು 33 ಸೆಕೆಂಡುಗಳಲ್ಲಿ ಗೆದ್ದ ಭಾರತದ ಕಪಿಲ್
ಗುರುವಾರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಪದಕದ ಬೇಟೆಯನ್ನು ನಡೆಸಿದ್ದಾರೆ. ಪುರುಷರ ಜಿ 1 60 ಕೆಜಿ ಜುಡೋ ಅಥ್ಲೀಟ್ ಕಪಿಲ್ ಪರ್ಮಾರ್ ಅಮೋಘ ಪ್ರದರ್ಶನ ನೀಡಿದ್ದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಪ್ರಸಕ್ತ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪಡೆದ 25ನೇ ಪದಕವಾಗಿದೆ.
ಕಪಿಲ್ ಪರ್ಮಾರ್ ಅವರು ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಇವರು 0-10 ಅಂಕಗಳಿಂದ ಇರಾನ್ ಅಥ್ಲೀಟ್ ಸೆಯದ್ ಮೇಸಂ ಬನಿತಾಬ ಖೋರಮ್ ಅಬಾದಿ ವಿರುದ್ಧ ಸೋಲು ಎದುರಿಸಿದರು. ಹೀಗಾಗಿ ಕಪಿಲ್ ಕಂಚಿನ ಪದಕದ ಹೋರಾಟದಲ್ಲಿ ಕಣಕ್ಕೆ ಇಳಿಯಬೇಕಾಯಿತು. ಈ ಹೋರಾಟದಲ್ಲಿ ಕಪಿಲ್ 10-0ಯಿಂದ ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತಕ್ಕೆ 25ನೇ ಪದಕ
ಭಾರತ ಇದುವರೆಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 25ಕ್ಕೂ ಹೆಚ್ಚು ಪದಕವನ್ನು ಗೆಲ್ಲುವ ಗುರಿಯನ್ನು ಹೊಂದಿತ್ತು. ತಾವು ಹಾಕಿಕೊಂಡಿದ್ದ ಗುರಿಯನ್ನು ಭಾರತದ ಅಥ್ಲೀಟ್‌ಗಳು ಮುಟ್ಟಿದ್ದಾರೆ. ಈ ವರೆಗೆ ಭಾರತ 5 ಚಿನ್ನ, 9 ಬೆಳ್ಳಿ, 11 ಕಂಚು ಪಡೆದು, 14ನೇ ಸ್ಥಾನದಲ್ಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದಿದ್ದತು. ಈಗ ಭಾರತ ತನ್ನ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿದೆ.
ಭಾರತದ ಕಪಿಲ್ ಪರ್ಮಾರ್ ಪಾರಾ ಜೂಡೋದ 60 ಕೆಜಿ ಜೆ-1 ವಿಭಾಗದಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದರು. ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೇವಲ 33 ಸೆಕೆಂಡುಗಳಲ್ಲಿ ಪಂದ್ಯವನ್ನು ಗೆದ್ದರು.

ಹೋರಾಟದ ಹಾದಿ
ಕಪಿಲ್ ತಮ್ಮ ಬಾಲ್ಯದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಹೀಗಾಗಿ ಸುಮಾರು ಆರು ತಿಂಗಳ ಕಾಲ ಕೋಮಾದಲ್ಲಿದ್ದರು. ಪ್ರಜ್ಞೆ ಬಂದಾಗ ನನ್ನ ದೃಷ್ಟಿ ಕಡಿಮೆ ಆಗಿತ್ತು ಎಂದು ತಿಳಿದು ಬಂದಿದೆ. ಬಳಿಕ ಇವರು ಆಟದತ್ತ ವಾಲಿದರು.
ಇದಾದ ನಂತರ ಆತನ ಪೋಷಕರು ಇವರ ಆಟಕ್ಕೆ ಪ್ರೋತ್ಸಾಹವನ್ನು ನೀಡಿದರು. ಇವರಿಗೆ ಕೋಚ್ ಭಗವಾನ್ ದಾಸ್ ಅಂಧರ ಜೂಡೋ ಆಡಲು ಸಲಹೆ ನೀಡಿದರು. ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಕಪಿಲ್ ಕಿರಿಯ. ಅವರ ತಂದೆ ಟ್ಯಾಕ್ಸಿ ಡ್ರೈವರ್. ತಾಯಿ ಕೂಲಿ ಕಾರ್ಮಿಕರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications