ದೆಹಲಿ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಮೊದಲ ಉಪಕುಲಪತಿಯಾಗಿ ಕರ್ಣಂ ಮಲ್ಲೇಶ್ವರಿ ಆಯ್ಕೆ

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರನ್ನು ದೆಹಲಿ ಸರ್ಕಾರ ದೆಹಲಿ ಕ್ರೀಡಾ ವಿಶ್ವವಿದ್ಯಾನಿಯಲಯಕ್ಕೆ ಮೊದಲ ಉಪಕುಲಪತಿಯಾಗಿ ಆರಿಸಿದೆ. ಭಾರತಕ್ಕೆ ಒಲಿಂಪಿಕ್ಸ್ ಪದಕ ತಂದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಲ್ಲೇಶ್ವರಿ ಅವರದ್ದು.
'ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿಯಲ್ಲಿ ಚಾನ್ಸಲರ್ ಆಗಿರುವ ಲೆಫ್ಟಿನೆಂಟ್ ಗವರ್ನರ್ ಅವರು ಪದ್ಮಶ್ರೀ ಪ್ರಶಸ್ತಿ ವಿಜೇತ ಕರ್ಣಂ ಮಲ್ಲೇಶ್ವರಿ ಅವರನ್ನು ಯುನಿವರ್ಸಿಟಿಯ ಮೊದಲ ಉಪಕುಲಪತಿಯಾಗಿ ಆರಿಸಲು ಖುಷಿ ವ್ಯಕ್ತಪಡಿಸಿದ್ದಾರೆ,' ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಮಲ್ಲೇಶ್ವರಿ, ಮಹಿಳಾ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸ್ನ್ಯಾಚ್ ವಿಭಾಗದಲ್ಲಿ 110 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 130 ಕೆಜಿ ಭಾರ ಎತ್ತಿ ಇತಿಹಾಸ ನಿರ್ಮಿಸಿದ್ದರು. ಆವತ್ತು ಒಟ್ಟು 240 ಕೆಜಿ ಸಾಧನೆಯೊಂದಿಗೆ ಮಲ್ಲೇಶ್ವರಿ ಭಾರತಕ್ಕೆ ಕಂಚು ಗೆದ್ದಿದ್ದರು.
2019ರಲ್ಲಿ ದೆಹಲಿ ಅಸೆಂಬ್ಲಿ ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿಗೆ ಬಿಲ್ ಪಾಸ್ ಮಾಡಿತ್ತು. ಈ ವಿಶ್ವ ವಿದ್ಯಾನಿಯಲದಲ್ಲಿ ಸ್ನಾತಕೋತ್ತರ, ಪದವಿ, ಡಾಕ್ಟರೇಟ್ ಡಿಗ್ರೀಗಳನ್ನು ನೀಡಲಾಗುತ್ತದೆ. ಕ್ರಿಕೆಟ್, ಫುಟ್ಬಾಲ್, ಹಾಕಿ ಸೇರಿದಂತೆ ಇತರ ಕ್ರೀಡೆಗಳಲ್ಲಿ ಆಸಕ್ತಿ ಉಳ್ಳವರು ಈ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications