National Games: ಕರ್ನಾಟಕ ಮಹಿಳಾ ರಿಲೇ ತಂಡಕ್ಕೆ ಬಂಗಾರ
ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಪದಕದ ಬೇಟೆಯನ್ನು ನಡೆಸಿದ್ದಾರೆ. ಕರ್ನಾಟಕ ಮಹಿಳಾ 4x 100 ರಿಲೇ ತಂಡ ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಇನ್ನು ಮಹಿಳಾ ವಿಭಾಗದ ಜಾವೆಲಿನ್ ಥ್ರೋದಲ್ಲಿ ಕರ್ನಾಟಕ ಅಥ್ಲಿಟ್‌ಗಳು ಬೆಳ್ಳಿ ಹಾಗೂ ಕಂಚಿನ ಸಾಧನೆಯನ್ನು ಮಾಡಿದ್ದಾರೆ. ಇನ್ನು ಹೈಜಂಪ್‌ನಲ್ಲೂ ಕರ್ನಾಟಕದ ಪ್ರತಿಭೆ ಪದಕ ಸಾಧನೆಯನ್ನು ಮಾಡಿದ್ದಾರೆ.
ಭಾನುವಾರ ನಡೆದ ಮಹಿಳಾ 4x 100 ರಿಲೇಯಲ್ಲಿ ಕರ್ನಾಟಕದ ಕೀರ್ತನಾ ಎಸ್, ಜ್ಯೋತಿಕಾ, ಎನ್.ಕ್ರುನೆಲಿಯೊ, ಉನ್ನತಿ ಅಯ್ಯಪ್ಪ ಅವರನ್ನುಒಳಗೊಂಡ ತಂಡ 45.99 ಸೆಕೆಂಡ್‌ಗಳಲ್ಲಿ ಪೂರ್ಣ ಗೊಳಿಸಿದರು. ಇನ್ನು ಈ ವಿಭಾಗದ ಬೆಳ್ಳಿಯನ್ನು ಕೇರಳಾ ತಂಡ ತನ್ನದಾಗಿಸಿಕೊಂಡಿತು. ಇನ್ನು ಕಂಚಿನ ಸಾಧನೆಯನ್ನು ತೆಲಂಗಾಣ ತಂಡ ಪಡೆದು ಬೀಗಿದೆ.

ಕೂದಲೆಳೆಯ ಅಂತರದಲ್ಲಿ ಬಂಗಾರ ಮಿಸ್
ಮಹಿಳಾ ಜಾವೆಲಿನ್ ಥ್ರೋದಲ್ಲಿ ಹರಿಯಾಣದ ಜ್ಯೋತಿ ರಾಕೇಶ್ ಅವರು 55.55 ಮೀಟರ್ ದೂರ ಎಸೆದು ಬಂಗಾರ ತಮ್ಮದಾಗಿಸಿಕೊಂಡರು. ಇನ್ನು ಕರ್ನಾಟಕದ ಕರಿಷ್ಮಾ ಎಸ್ ಸನಿಲ್ ತಮ್ಮ ಮೊದಲ ಯತ್ನದಲ್ಲೇ 55.55 ಮೀಟರ್ ಎಸೆದು ಬೀಗಿದರು. ಆದರೆ ಮುಂದಿನ ಅವಕಾಶದಲ್ಲಿ ಈ ಮಾರ್ಕ್ ಮೀರಲು ಸಾಧ್ಯವೇ ಆಗಲಿಲ್ಲ. ಕರಿಷ್ಮಾ ಕೂದಲೆಳೆಯ ಅಂತರದಲ್ಲಿ ಬಂಗಾರದ ಪದಕವನ್ನು ವಂಚಿತರಾದರು. ಇನ್ನು ರಾಜ್ಯದವರೇ ಆದ ರಮ್ಯ ಶ್ರೀ 54.85 ಮೀಟರ್ ಜಾವೆಲಿನ್ ಎಸೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಪುರುಷರ ಹೈ ಜಂಪ್‌ನಲ್ಲಿ ಕರ್ನಾಟಕದ ಸುದೀಪ್ ಅಮೋಘ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ. ಇವರು 2.08 ಮೀಟರ್ ದೂರ ಜಿಗಿದು ಕಂಚಿನ ಸಾಧನೆ ಮಾಡಿದ್ದಾರೆ. ಇನ್ನು ಈ ವಿಭಾಗದ ಬಂಗಾರವನ್ನು ತಮಿಳುನಾಡಿನ ಆದರ್ಶ ರಾಮ್ ರಾಜ್ (2.14 ಮೀ.) ತಮ್ಮದಾಗಿಸಿಕೊಂಡರು. ಬೆಳ್ಳಿ ಪದಕವನ್ನು ಓಡಿಶಾದ ಸ್ವಾಧಿನ್ ಕುಮಾರ್ (2.11 ಮೀ) ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications