ಸ್ಪೋರ್ಟ್ಸ್ ಕಾಂಪ್ಲೆಕ್ಸ್ ತೆರೆಯಲು, ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅನುಮತಿ

ಬೆಂಗಳೂರು: ಕೊರೊನಾವೈರಸ್ ಭೀತಿಯ ಬಳಿಕ ಮುಚ್ಚಲ್ಪಟ್ಟಿದ್ದ ಕ್ರೀಡಾ ಸಂಕೀರ್ಣ (ಸ್ಪೋರ್ಟ್ಸ್ ಕಾಂಪ್ಲೆಕ್ಸ್)ಗಳನ್ನು ಮತ್ತು ಕ್ರೀಡಾಂಗಣಗಳಲ್ಲಿ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಕರ್ನಾಟಕ ರಾಜ್ಯ ಸರ್ಕಾರ ಸೋಮವಾರ (ಆಗಸ್ಟ್ 24) ಅನುಮತಿ ನೀಡಿದೆ (ಚಿತ್ರಕೃಪೆ: ಐಎಸ್‌ಎಲ್).
ಕ್ರೀಡಾಂಗಣಗಳಲ್ಲಿ ಮತ್ತು ಕ್ರೀಡಾ ಸಂಕೀರ್ಣಗಳಲ್ಲಿ ಅಭ್ಯಾಸ ನಡೆಸಲು ಕ್ರೀಡಾಪಟುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ ಪ್ರೇಕ್ಷಕರು ಮೈದಾನದೊಳಗೆ ಪ್ರವೇಶಿಸಲು ಇನ್ನೂ ಅವಕಾಶ ನೀಡಲಾಗಿಲ್ಲ. ಕದ ಮುಚ್ಚಿದ ಸ್ಟೇಡಿಯಂಗಳಲ್ಲಿ ಅಥ್ಲೀಟ್‌ಗಳು ಮಾತ್ರ ಅಭ್ಯಾಸ ನಡೆಸಬಹುದಾಗಿದೆ.
ಕೋವಿಡ್ 19 ಪಿಡುಗಿನ ಅವಧಿಯಲ್ಲಿ ಸರಿಯಾದ ಅಭ್ಯಾಸ ನಡೆಸಲು ಸಾಧ್ಯವಾಗದೆ ಪರದಾಡುತ್ತಿರುವ ಪ್ರಮುಖ ಅಥ್ಲೀಟ್‌ಗಳ ಅಳಲನ್ನು ಗಮನಿಸಿ, ರಾಜ್ಯ ಸರ್ಕಾರ ನಿರ್ಬಂಧ ಸಡಿಲಿಸಿದೆ. ಕರ್ನಾಟಕದಲ್ಲಿ ಧೃಡಪಟ್ಟ ಪ್ರಕರಣಗಳು 283,665 ಇದೆ. ಇದರಲ್ಲಿ 197,625 ಗುಣಮುಖರಾದರೆ, 4,810 ಮಂದಿ ಸಾವನ್ನಪ್ಪಿದ್ದಾರೆ.
ಭಾರತದ ಕ್ರೀಡಾ ಪ್ರಾಧಿಕಾರವು ವಿವಿಧ ವಿಭಾಗಗಳಲ್ಲಿ ಒಳಾಂಗಣ ತರಬೇತಿಯನ್ನು ಪ್ರಾರಂಭಿಸಲು ಒಲಿಂಪಿಕ್ ಬೌಂಡ್ ಕ್ರೀಡಾಪಟುಗಳಿಗೆ ಹಸಿರು ಸಂಕೇತಗಳನ್ನು ನೀಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications