Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಯಶಸ್

ಭುವನೇಶ್ವರ್: 65ನೇ ರಾಷ್ಟ್ರೀಯ ಅಂತರ ರಾಜ್ಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಕರ್ನಾಟಕದ ಯಶಸ್ 400 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ವರ್ಷದ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಶನಿವಾರ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ಯಶಸ್ 400 ಮೀಟರ್ ಹರ್ಡಲ್ಸ್‌ ರೇಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ನಿಗದಿತ ದೂರವನ್ನು 49.14 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬಂಗಾರದ ನಗೆ ಬೀರಿದರು. ಇಷ್ಟೇ ಅಲ್ಲದೆ ಇವರು ಏಷ್ಯನ್‌ ಗೇಮ್ಸ್‌ ಅರ್ಹತಾ ಮಾರ್ಕ್ (49.41 ಸೆಕಂಡ್‌) ಒಳಗೆ ಈ ಸಾಧನೆ ಮಾಡಿದರು. ಈ ಸ್ಪರ್ಧೆಯ ಬೆಳ್ಳೆಯ ಸಾಧನೆ ಮಾಡಿದ ತಮಿಳುನಾಡಿನ ಸಂತೋಷ್‌ ಟಿ ಸಹ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ವಿಭಾಗದ ಕಂಚಿನ ಪದಕ ರ್ಯನ್ ಪ್ರಜ್ವಾಲ್ ಕಶ್ಯಪ್ ಅವರ ಪಾಲಾಗಿದೆ.

Karnataka s Yashas

ಇದೇ ಕ್ರೀಡಾಕೂಟದ ಮಹಿಳಾ 100 ಮೀಟರ್‌ ರೇಸ್‌ನಲ್ಲಿ ಕರ್ನಾಟಕದ ಸ್ನೇಹಾ ಎಸ್‌ಎಸ್‌ ಬೆಳ್ಳೆ ಸಾಧನೆ ಮಾಡಿದ್ದಾರೆ. ಇವರು ನಿಗದಿತಿ ದೂರವನ್ನು 11.65 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು. ಈ ವಿಭಾಗದ ಬಂಗಾರ ಮಹಾರಾಷ್ಟ್ರದ ಸುದೇಷ್ಣ ಶಿವಂಕರ್ ಬಂಗಾರ, ಅಮಾಶಾ ಡಿ ಸಿಲ್ವಾ ಕಂಚಿನ ಪದಕ ಗೆದ್ದಿದ್ದಾರೆ.

ಕರ್ನಾಟಕ ಅಥ್ಲೀಟ್ಸ್‌ಗಳ ಅಮೋಘ ಪ್ರದರ್ಶನ

ಪುರುಷರ ಹೈಜಂಪ್‌ನಲ್ಲಿ ಕರ್ನಾಟಕದ ಜೆಸ್ಸೆ ಸಂದೇಶ್ 2.19 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಹಾರಾಷ್ಟ್ರದ ಸರ್ವೇಶ್ ಕುಶಾರೆ, ಎರಡನೇ ಸ್ಥಾನ ತಮಿಳುನಾಡಿನ ಆದರ್ಶ್ ರಾಮ್ ಪಾಲಾಗಿದೆ.

ಮಹಿಳೆಯರ ಜಾವೆಲಿನ್‌ ವಿಭಾಗದಲ್ಲಿ ಕರ್ನಾಟಕದ ಕರಿಷ್ಮಾ ಸನಿಲ್ ಬೆಳ್ಳಿ ಸಾಧನೆ ಮಾಡಿದ್ದಾರೆ. ಇವರು 53.06 ಮೀಟರ್‌ ದೂರ ಜಾವೆಲಿನ್ ಎಸೆದು ಸಾಧನೆ ಮಾಡಿದ್ದಾರೆ. ಇನ್ನು ಉತ್ತರ ಪ್ರದೇಶದ ಅನ್ನು ರಾಣಿ (56.74 ಮೀ) ಪ್ರಥಮ, ರಾಜಸ್ಥಾನದ ಉಮಾ ಚೌಧರಿ (53.06 ಮೀ) ಮೂರನೇ ಸ್ಥಾನ ಪಡೆದಿದ್ದಾರೆ.

ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಸಿಂಚಲ್ 58.90 ಸೆಕೆಂಡ್‌ಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಈ ವಿಭಾಗದಲ್ಲಿ ತಮಿಳುನಾಡಿನ ಆರ್ ವಿತ್ಯ ರಾಮರಾಜ್ ಪ್ರಥಮ ಸ್ಥಾನ, ಕೇರಳದ ಅನು ಆರ್ ಎರಡನೇ ಸ್ಥಾನ ಪಡೆದಿದ್ದಾರೆ.

Story first published: Saturday, June 27, 2026, 23:06 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+