Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕರ್ನಾಟಕದ ರಿಲೇ ತಂಡಕ್ಕೆ ಬಂಗಾರ, ಕಿರ್ಪಾಲ್ ಸಿಂಗ್‌ಗೆ ಬಂಗಾರ

ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 4x100 ಮೀಟರ್ ರಿಲೇ ಫೈನಲ್‌ನಲ್ಲಿ ಕರ್ನಾಟಕ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ.

ಕರ್ನಾಟಕ ತಂಡವು 44.75 ಸೆಕೆಂಡುಗಳಲ್ಲಿ ರೇಸ್ ಅನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಭರ್ಜರಿ ಪ್ರದರ್ಶನದೊಂದಿಗೆ ಕರ್ನಾಟಕ ತಂಡವು ಏಷ್ಯನ್ ಗೇಮ್ಸ್ ಅರ್ಹತಾ ಸಮಯವನ್ನು (45.24 ಸೆಕೆಂಡುಗಳು) ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಕೃತಿ ರಾವ್ ಬಿ, ದಾನೇಶ್ವರಿ ಟಿ, ವಿ. ಸುಧೀಕ್ಷಾ ಮತ್ತು ಉನ್ನತಿ ಬೊಳ್ಳಂದ ತಂಡ ದೊಡ್ಡ ಸಾಧನೆ ಮಾಡಿದೆ.

Karnataka

ನಂದಿನಿ ಕೆ, ಸುಬಾ ಧರ್ಶಿನಿ ಎಸ್, ಕಿರುತಿಕಾ ಮತ್ತು ಜಿ. ರವಿಕುಮಾರ್. ಮುಂದಾಳತ್ವದ ತಮಿಳುನಾಡು ತಂಡವು 45.07 ಸೆಕೆಂಡುಗಳ ಕಾಲಾವಧಿಯೊಂದಿಗೆ ನಿಗದಿತ ದೂರವನ್ನು ಕ್ರಮಿಸಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ತಮಿಳುನಾಡು ತಂಡ ಕೂಡ ಏಷ್ಯನ್ ಗೇಮ್ಸ್ ಅರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರ ತಂಡವು 46.21 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನವನ್ನು ಅಲಂಕರಿಸಿತು.

ಇದೇ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್‌ ಡಿಸ್ಕಸ್ ಥ್ರೋ ಕ್ರೀಡಾಪಟು ಅದ್ಭುತ ಪ್ರದರ್ಶನ ನೀಡಿದ ಕಿರ್ಪಾಲ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ 57.37 ಮೀಟರ್ ದೂರ ಡಿಸ್ಕಸ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದರು. ಇದು ಈ ಕ್ರೀಡಾಋತುವಿನಲ್ಲಿ ಅವರ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ. ಆದರೆ, ಇವರು ಇವರು ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಏಷ್ಯನ್ ಗೇಮ್ಸ್‌ ಅರ್ಹತೆ ಪಡೆಯಲು 60.13 ಮೀಟರ್ ಮಾರ್ಕ್‌ನ್ನು ದಾಟುವಲ್ಲಿ ಕಿರ್ಪಾಲ್ ಸಿಂಗ್ ವಿಫಲರಾದರು.

ಏಷ್ಯನ್ ಗೇಮ್ಸ್ ಅರ್ಹತೆ ಕೈತಪ್ಪಿದ ನಿರಾಶೆಯ ನಡುವೆಯೂ, ಮೈದಾನದಲ್ಲಿ ಒಂದು ಹೃದಯಸ್ಪರ್ಶಿ ದೃಶ್ಯ ಕಂಡುಬಂದಿತು. ಚಿನ್ನದ ಪದಕ ಗೆದ್ದ ಸಂಭ್ರಮದಲ್ಲಿದ್ದ ಕಿರ್ಪಾಲ್ ಸಿಂಗ್, ತಮ್ಮ ಮುದ್ದಿನ ಮಗಳೊಂದಿಗೆ ಫೋಟೋಗೆ ಫೋಸ್ ನೀಡುವ ಮೂಲಕ ಈ ಜಯವನ್ನು ವಿಶೇಷವಾಗಿ ಆಚರಿಸಿಕೊಂಡರು.

ಮಹಾರಾಷ್ಟ್ರದ ತೇಜಸ್‌ಗೆ ಬಂಗಾರ

ಪುರುಷರ 110 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕದ ಕೃಷಿಕ್ ಎಂ. ಅವರು ಅತ್ಯದ್ಭುತ ಪ್ರದರ್ಶನ ನೀಡಿ ತೃತೀಯ ಸ್ಥಾನ ಪಡೆದಿದ್ದಾರೆ. ಜೂನ್ 26 ರಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಕೃಷಿಕ್ ಅವರು ನಿಗದಿತ ಮಾರ್ಕ್‌ನ್ನು ಕೇವಲ 13.69 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಸಾಧನೆ ಮಾಡಿದ್ದಾರೆ. ಇನ್ನು ಮಹಾರಾಷ್ಟ್ರದ ತೇಜಸ್ ಶೀರ್ಸೆ ಅವರು 13.61 ಸೆಕೆಂಡುಗಳ ನಿಗದಿತ ದೂರ ಕ್ರಮಿಸಿ, ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು. ತಮಿಳುನಾಡಿನ ಮಾನವ್ ಆರ್. (13.66 ಸೆಕೆಂಡ್) ಬೆಳ್ಳಿ ಪದಕ ಗಳಿಸಿದರು.

Story first published: Saturday, June 27, 2026, 3:00 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+