ಕುಸ್ತಿ ಪಟು ಕವಿತಾ ಕನಸು ನನಸು, WWE ಸ್ಟಾರ್ ಆಗಲು ತಯಾರಿ
ನ್ಯೂಯಾರ್ಕ್, ಅಕ್ಟೋಬರ್ 16: ಭಾರತದ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ಅವರು WWE ರೆಸ್ಲಿಂಗ್ ಅಂಗಳಕ್ಕೆ ಅಧಿಕೃತವಾಗಿ ಧುಮುಕಲು ಸಿದ್ಧರಾಗುತ್ತಿದ್ದಾರೆ. ಕವಿತಾ ಅವರು WWE ಜತೆ ಒಪ್ಪಂದ ಮಾಡಿಕೊಂಡಿರುವುದನ್ನು ಭಾರತ ಮೂಲದ ಚಾಂಪಿಯನ್ ಜಿಂದರ್ ಮಹಲ್ ಘೋಷಿಸಿದ್ದಾರೆ.
WWEಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಪಟು ಎನಿಸಿಕೊಂಡಿರುವ 'ಮೇ ಯಂಗ್ ಕ್ಲಾಸಿಕ್' ಪಂದ್ಯಾವಳಿಯಲ್ಲಿ ಕವಿತಾ ಅವರು ಮೊದಲ ನಾಕೌಟ್ ಪಂದ್ಯದಲ್ಲೇ ನ್ಯೂಜಿಲೆಂಡ್ ನ ಡಕೋಟಾ ಕಾಯಿ ವಿರುದ್ಧ ಸೋತು ನಿರ್ಗಮಿಸಿದ್ದರು. ಇದರಿಂದ WWE ದಿವಾ ಆಗಲು ಹೊರಟ ಕವಿತಾಗೆ ನಿರಾಶೆಯಾಗಿತ್ತು. ಮೊದಲ ಪಂದ್ಯದಲ್ಲೇ ಕವಿತಾ ಸೋಲು ಕಂಡಿದ್ದು ಮುಂದಿನ ಹಾದಿ ಏನು ಎಂಬ ಪ್ರಶ್ನೆ ಎದುರಾಗಿತ್ತು.

ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಭಾರತದ ಪರ ಚಿನ್ನ ಗೆದ್ದಿರುವ ಮಾಜಿ ವೇಟ್ ಲಿಫ್ಟರ್ ಕವಿತಾ ದೇವಿ ಅವರು ಈಗ WWE ದಿವಾ ಆಗುವ ಕನಸು ಈಗ ನನಸಾಗಿದೆ.WWE ಜತೆ ಒಪ್ಪಂದಕ್ಕೆ ಕವಿತಾ ಸಹಿ ಹಾಕಿದ್ದಾರೆ.
ಹರಿಯಾಣ ಮೂಲದ ಕವಿತಾ ದೇವಿ ಅವರು WWE ಮಾಜಿ ವಿಶ್ವ ಚಾಂಪಿಯನ್, ಭಾರತ ಮೂಲದ 'ದಿ ಗ್ರೇಟ್ ಖಲಿ' ಅವರ ಅಕಾಡೆಮಿಯಲ್ಲಿ ಅಮೆರಿಕನ್ ಶೈಲಿಯ ರೆಸ್ಲಿಂಗ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ದುಬೈನಲ್ಲಿ ನಡೆದಿದ್ದ WWE ದುಬೈ ಟ್ರೈಔಟ್‌ನಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು.
ಒಮ್ಮೆ ಬಿಬಿ ಬುಲ್ ಬುಲ್ ಹೆಸರಿನ ಮಹಿಳಾ ರೆಸ್ಲರ್ ರೊಬ್ಬರು ಕುಸ್ತಿ ಅಂಗಳದಲ್ಲಿ ಓಪನ್ ಚಾಲೆಂಜ್ ಹಾಕುತ್ತಾರೆ. ಪಂದ್ಯ ನೋಡಲು ಬಂದ ಕವಿತಾ ಅವರು ರಿಂಗ್ ನೊಳಗೆ ನುಗ್ಗಿದ ಕವಿತಾ ಅವರು ಎರಡನೇ ಪ್ರಯತ್ನದಲ್ಲಿ ಬುಲ್ ಬುಲ್ ರನ್ನು ಕೆಳಗುರುಳಿಸಿದ್ದರು. ಹೀಗೆ ಕುಸ್ತಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಕವಿತಾರನ್ನು ಕುಸ್ತಿಪಟು ಮಾಡುವಲ್ಲಿ ಖಲಿ (ದಲಿಪ್ ಸಿಂಗ್ ರಾಣಾ) ಅವರು ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications