For Quick Alerts
ALLOW NOTIFICATIONS  
For Daily Alerts

WWE ದಿವಾ ಆಗಲು ಹೊರಟ ಭಾರತದ ಮಾಜಿ ಪವರ್ ಲಿಫ್ಟರ್ ಕವಿತಾ

By ಕ್ರೀಡಾ ಡೆಸ್ಕ್

ಹರ್ಯಾಣ, ಜೂನ್ 23:ಭಾರತದ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ಅವರು ರೆಸ್ಲಿಂಗ್ ಅಂಗಳಕ್ಕೆ ಧುಮುಕುತ್ತಿದ್ದಾರೆ.
ದಕ್ಷಿಣ ಏಷ್ಯಾ ಗೇಮ್ಸ್‌ ನಲ್ಲಿ ಭಾರತದ ಪರ ಗೆ ದ್ದಿರುವ ಮಾಜಿ ವೇಟ್‌ಲಿಫ್ಟರ್‌ ಕವಿತಾ ದೇವಿ ಅವರು ಈಗ WWE ದಿವಾ ಆಗಲು ಹೊರಟ್ಟಿದ್ದಾರೆ.

ಹರಿಯಾಣ ಮೂಲದ ಕವಿತಾ ದೇವಿ ಅವರು WWE ಮಾಜಿ ವಿಶ್ವ ಚಾಂಪಿಯನ್‌, ಭಾರತ ಮೂಲದ 'ದಿ ಗ್ರೇಟ್‌ ಖಲಿ' ಅವರ ಅಕಾಡೆಮಿಯಲ್ಲಿ ಅಮೆರಿಕನ್ ಶೈಲಿಯ ರೆಸ್ಲಿಂಗ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಏಪ್ರಿಲ್‌ ತಿಂಗಳನಲ್ಲಿ ದುಬೈನಲ್ಲಿ ನಡೆದಿದ್ದ WWE ದುಬೈ ಟ್ರೈಔಟ್‌ನಲ್ಲಿ ಸ್ಪರ್ಧಿಸಿದ್ದ ಕವಿತಾದೇವಿ ಎಲ್ಲರ ಗಮನ ಸೆಳೆದಿದ್ದರು.

Kavita Devi becomes first Indian woman wrestler to compete in WWE

ಈ ಮೂಲಕ WWEಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಪಟು ಎನಿಸಿಕೊಂಡಿದ್ದಾರೆ. 'ಮೇ ಯಂಗ್‌ ಕ್ಲಾಸಿಕ್‌' ಪಂದ್ಯಾವಳಿಯಲ್ಲಿ ಕವಿತಾ ಅವರು ಸೆಣೆಸಲಿದ್ದಾರೆ.



ಕವಿತಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಆಯ್ಕೆಗೊಂಡಿರುವ 31 ಕುಸ್ತಿಪಟುಗಳು ಸೆಣಸಾಟ ನಡೆಸಲಿದ್ದಾರೆ. 'ಮೇ ಯಂಗ್‌ ಕ್ಲಾಸಿಕ್‌' ಜುಲೈ 13 ಹಾಗೂ 14ರಂದು ಅಮೆರಿಕದ ಫ್ಲೋರಿಡಾದಲ್ಲಿನ ಒರ್ಲಾಂಡೋ ನಗರದಲ್ಲಿ ನಡೆಯಲಿದೆ.

ವೇಯ್ಟ್ ಲಿಫ್ಟರ್ ಆಗಿದ್ದ ಕವಿತಾ ಅವರಿಗೆ WWE ನಲ್ಲಿ ಆಸಕ್ತಿ ಹುಟ್ಟಿದ್ದು, ಸ್ವಾರಸ್ಯಕರವಾಗಿದೆ. ಒಮ್ಮೆ ಬಿಬಿ ಬುಲ್ ಬುಲ್ ಹೆಸರಿನ ಮಹಿಳಾ ರೆಸ್ಲರ್ ರೊಬ್ಬರು ಕುಸ್ತಿ ಅಂಗಳದಲ್ಲಿ ಓಪನ್ ಚಾಲೆಂಜ್ ಹಾಕುತ್ತಾರೆ. ಪಂದ್ಯ ನೋಡಲು ಬಂದ ಕವಿತಾ ಅವರು ರಿಂಗ್ ನೊಳಗೆ ನುಗ್ಗಿದ ಕವಿತಾ ಅವರು ಎರಡನೇ ಪ್ರಯತ್ನದಲ್ಲಿ ಬುಲ್ ಬುಲ್ ರನ್ನು ಕೆಳಗುರುಳಿಸುತ್ತಾರೆ. ಹೀಗೆ ಕುಸ್ತಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಕವಿತಾರನ್ನು ಕುಸ್ತಿಪಟು ಮಾಡುವಲ್ಲಿ ಖಲಿ(ದಲಿಪ್ ಸಿಂಗ್ ರಾಣಾ) ಅವರು ಯಶಸ್ವಿಯಾಗಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+