WWE ಕುಸ್ತಿಪಟು ಕವಿತಾ ಹಾಕಿದ ಪಟ್ಟು ಸೂಪರ್ ಹಿಟ್
ಬೆಂಗಳೂರು, ಸೆ. 07: WWE ಮಹಿಳಾ ಕುಸ್ತಿಪಟುವಾಗಿ ಜನಪ್ರಿಯತೆ ಗಳಿಸುತ್ತಿರುವ ಕವಿತಾ ದೇವಿ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಎಂಎಇ ಯಂಗ್ ಚಾಲೆಂಜ್ ಸ್ಪರ್ಧೆಯಲ್ಲಿ ಕವಿತಾ ನಡೆಸಿದ ಮೊದಲ ಕುಸ್ತಿಯಾಟದ ವಿಡಿಯೋ ಸೂಪರ್ ಹಿಟ್ ಆಗಿದೆ.
ಸೆಲ್ವಾರ್ ಕಮೀಜ್ ಧರಿಸಿ ರಿಂಗ್ ಗೆ ಇಳಿದ ಕವಿತಾ ಹೊಸ ಟ್ರೆಂಡ್ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಡಬ್ಲೂಡಬ್ಲೂಇ ದಿವಾಗಳು ತುಂಡು ಬಟ್ಟೆ ಧರಿಸಿ ಪ್ರೇಕ್ಷಕರನ್ನು ರಂಜಿಸುವುದು ಮಾಮೂಲಿ. ಆದರೆ, ಸೆಲ್ವಾರ್ ತೊಟ್ಟು ಕವಿತಾ ಎದುರಾಳಿಯನ್ನು ಎತ್ತಿ ಕೆಳಗೆ ಹಾಕಿ ಪಟ್ಟುಗಳನ್ನು ಹಾಕುವುದು ಈ ಮಾದರಿಯ ಕುಸ್ತಿ ನೋಡುವವರಿಗೆ ಹೊಸತನ ನೀಡಿದೆ.

ಕವಿತಾ ಕುಸ್ತಿಯಾಟ ಐದಾರು ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಡಬ್ಲೂಡಬ್ಲೂಇ ಚಾಂಪಿಯನ್ ದ ಗ್ರೆಟ್ ಖಲಿ ಅವರ ಗರಡಿಯಲ್ಲಿ ಪಳಗಿದ ಕವಿತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
WWEಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಪಟು ಎನಿಸಿಕೊಂಡಿರುವ 'ಮೇ ಯಂಗ್ ಕ್ಲಾಸಿಕ್' ಪಂದ್ಯಾವಳಿಯಲ್ಲಿ ಕವಿತಾ ಅವರು ಮೊದಲ ನಾಕೌಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನ ಡಕೋಟಾ ಕಾಯಿ ವಿರುದ್ಧ ಸೋತು ನಿರ್ಗಮಿಸಿದರು.
ಮೇ ಯಂಗ್ ಟೂರ್ನಮೆಂಟ್ ನ ನಾಕೌಟ್ ಸ್ಪರ್ಧೆಯಿಂದ ಔಟಾದ ತಕ್ಷಣ WWE ಜರ್ನಿ ಮುಕ್ತಾಯವಾಯಿತು ಎಂದು ಕವಿತಾ ಬೇಸರಗೊಳ್ಳಬೇಕಿಲ್ಲ. ಹೊಸಬರಿಗೆ ಎರಡನೇ ಅವಕಾಶ ನೀಡುವ ಪರಿಪಾಠ ಬೆಳೆದುಕೊಂಡು ಬಂದಿದ್ದು, ಬಿಗ್ ರೆಸ್ಲಿಂಗ್ ಲೀಗ್ ನಲ್ಲಿ ಕವಿತಾಗೆ ಮತ್ತೆ ಅವಕಾಶ ಸಿಗುವ ಸಾಧ್ಯತೆಯಿದೆ. ಈ ಹಿಂದೆ ಜಿಂದರ್ ಮಹಲ್ ಗೂ ಈ ರೀತಿ ಅವಕಾಶ ನೀಡಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications