ವೈರಲ್ ಆದ ಕ್ರಿಕೆಟ್ ಕುರಿತ ಕೋಟ್ಯಧಿಪತಿ ಕಾರ್ಯಕ್ರಮದ ರಸಪ್ರಶ್ನೆ; ಪ್ರಶ್ನೆ ಯಾವುದು? ಉತ್ತರ ಏನು?
ಭಾರತೀಯ ದೂರದರ್ಶನ ಇತಿಹಾಸದಲ್ಲಿ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಪ್ರಸಾರಗೊಳ್ಳುತ್ತಿದ್ದು, ಭಾರತೀಯ ಚಿತ್ರರಂಗದ ದಂತಕಥೆ ಅಮಿತಾಭ್ ಬಚ್ಚನ್ ಅವರ ನಿರೂಪಣೆಯಿಂದ ಈ ಕಾರ್ಯಕ್ರಮವು ಯಾವಾಗಲೂ ದೂರದರ್ಶನ ರೇಟಿಂಗ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ.
ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವು ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರ ನಿರೂಪಣೆಯೊಂದಿಗೆ ಪ್ರಾರಂಭವಾಯಿತು. ಆ ಬಳಿಕ ವಿವಿಧ ಭಾಷೆಗಳಲ್ಲಿ ದೊಡ್ಡ ಸ್ಟಾರ್ ನಟರು ನಿರೂಪಕರಾಗಿ ಪ್ರಯೋಗಿಸಿತು. ಆದರೆ ಅವರ್ಯಾರು ಅಮಿತಾಭ್ ಬಚ್ಚನ್ ಅವರ ಕೆಬಿಸಿ ಕಾರ್ಯಕ್ರಮವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.
ಈ ಮೊದಲು ಕನ್ನಡ ಅವತರಣಿಕೆಯಲ್ಲಿ ಪ್ರಸಾರವಾಗುತ್ತಿದ್ದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಸ್ಟಾರ್ ನಟ ದಿವಂಗತ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿದ್ದರು. ಎರಡ್ಮೂರು ಸೀಸನ್ ನಡೆಸಿದ ನಂತರ, ಇತ್ತೀಚಿನ ವರ್ಷಗಳಲ್ಲಿ ಕಾರ್ಯಕ್ರಮ ನಿಂತು ಹೋಯಿತು.

ಇದೀಗ ಕೌನ್ ಬನೇಗಾ ಕರೋಡ್‌ಪತಿ ಹೊಸ ಸಂಚಿಕೆಯಲ್ಲಿ ಸ್ಪರ್ಧಿಯೊಬ್ಬರಿಗೆ ಅಮಿತಾಭ್ ಬಚ್ಚನ್ ಕೇಳಿದ 12.50 ಲಕ್ಷ ರೂಪಾಯಿ ಮೌಲ್ಯದ ಪ್ರಶ್ನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಕೆಂದರೆ ಕ್ರಿಕೆಟ್ ಸಂಬಂಧಿತ ಪ್ರಶ್ನೆಯನ್ನು ಕೇಳಲಾಗಿದ್ದು, ನಾಲ್ವರು ಕ್ರಿಕೆಟಿಗರ ಹೆಸರುಗಳನ್ನು ಆಯ್ಕೆಗಳಾಗಿ ನೀಡಲಾಗಿದೆ. ಪ್ರಶ್ನೆ ಏನೆಂದರೆ, ಈ ಆಟಗಾರರಲ್ಲಿ ಯಾರು ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿಲ್ಲ? ಎಂಬುದಾಗಿತ್ತು. ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೆ 12.50 ಲಕ್ಷ ರೂಪಾಯಿ ಬಹುಮಾನ ನಿಗದಿಯಾಗಿತ್ತು.
ಭಾರತದ ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಪ್ರಸ್ತುತ ಟೆಸ್ಟ್ ತಂಡದ ಅನುಭವಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಪ್ರಸ್ತುತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರುಗಳನ್ನು ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು.

ಈ ರಸಪ್ರಶ್ನೆಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ವೈರಲ್ ಮಾಡಿದ್ದಾರೆ. ಅವರಲ್ಲಿ ನಾಲ್ವರು ಉನ್ನತ ಶಿಕ್ಷಣ ಪಡೆದಿದ್ದಾರೆ ಎಂಬುದು ಅನೇಕರಿಗೆ ಗೊತ್ತೇ ಇದೆ.
ಹೀಗಾಗಿ, ಸರಿ ಉತ್ತರ ಯಾವುದು ಎಂದು ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ. ಈ ಗೊಂದಲದ ಪ್ರಶ್ನೆಗೆ ಉತ್ತರವೇನು ಎಂದು ಕೆಲ ಅಭಿಮಾನಿಗಳು ಕೇಳಿದ್ದಾರೆ.
ಇದೇ ವೇಳೆ ಇಂಜನಿಯರಿಂಗ್ ಪದವಿ ಪಡೆಯದ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ರಾಹುಲ್ ದ್ರಾವಿಡ್. ಅವರು ಇಂಜಿನಿಯರಿಂಗ್ ಪದವಿ ಪಡೆದಿಲ್ಲ. ರಾಹುಲ್ ದ್ರಾವಿಡ್ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಎಂಬಿಎ ಮಾಡುತ್ತಿರುವಾಗಲೇ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಇದೇ ವೇಳೆ ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್ ಮತ್ತು ಕೆ ಶ್ರೀಕಾಂತ್ ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಶ್ವಿನ್ ಅವರು ಚೆನ್ನೈನ ಎಸ್‌ಎಸ್‌ಎನ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
ಕೆ ಶ್ರೀಕಾಂತ್ ಅವರು ಚೆನ್ನೈನ ಗ್ವಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿದರು. ಅನಿಲ್ ಕುಂಬ್ಳೆ ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ರಾಷ್ಟ್ರೀಯ ವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರ್ಣಗೊಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications