ರೋಚಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಪುರುಷರ ತಂಡವು ಖೋ ಖೋ ವಿಶ್ವಕಪ್ 2025ರ ತನ್ನ ಎರಡನೇ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ 64-34 ಅಂಕಗಳ ಭರ್ಜರಿ ಜಯ ದಾಖಲಿಸಿದೆ. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತ ಮತ್ತು ಬ್ರೆಜಿಲ್ ಪಂದ್ಯ ನಡೆಯಿತು. ಭಾರತದ ವಿರುದ್ಧ ಆಕ್ರಮಣಕಾರಿ ಆಟ ಆಡಿದ ಬ್ರೆಜಿಲ್ ಆರಂಭದಲ್ಲಿ16 ಅಂಕಗಳನ್ನು ಗಳಿಸಿತು. ಆದರೆ ಟೀಮ್ ಇಂಡಿಯಾ ಉತ್ತಮವಾಗಿ ಮರಳಿತು. ಡ್ರೀಮ್ ರನ್‌ನಲ್ಲಿ ಅವರು ಎರಡು ಅಂಕಗಳನ್ನು ಗಳಿಸಿದರು. ಇದು ಬ್ರೆಜಿಲ್ ತಂಡವನ್ನು ತುದಿಗಾಲಲ್ಲಿ ನಿಲ್ಲಿಸಿತು. ಇದು ಟರ್ನ್ 2 ರಲ್ಲಿ ಪಂದ್ಯವನ್ನು ಪ್ರಾರಂಭಿಸಲು ತಂಡಕ್ಕೆ ಉತ್ತಮ ಅವಕಾಶ ನೀಡಿತು.
ಬ್ರೆಜಿಲ್ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡಕ್ಕೆ 2ನೇ ತಿರುವು ಬಹಳ ಪ್ರಭಾವಶಾಲಿಯಾಗಿತ್ತು. ರೋಕೆಸನ್ ಸಿಂಗ್, ಪಬಾನಿ ಸಬರ್ ಮತ್ತು ಆದಿತ್ಯ ಗನ್ಪುಲೆ ಅವರು ಭಾರತದ ಪರ ಪ್ರಮುಖ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಅವರು ಟರ್ನ್ 2ರ ಕೊನೆಯಲ್ಲಿ ತಂಡವನ್ನು 36 ಅಂಕಗಳಿಗೆ ಮುನ್ನಡೆಸಿದರು. ಭಾರತ ಸ್ಥಿರ ಪ್ರದರ್ಶನ ಮುಂದುವರಿಸುತ್ತಿದ್ದಂತೆಯೇ ಎಚ್ಚೆತ್ತ ಬ್ರೆಜಿಲ್ ತಂಡವು ಟರ್ನ್ 3 ರಲ್ಲಿಪ್ರತಿ ಹೋರಾಟ ನಡೆಸಿತು.

ಮೌರೊ ಪಿಂಟೊ, ಜೋಯಲ್ ರೊಡ್ರಿಗಸ್ ಮತ್ತು ವಿಶೇಷವಾಗಿ ಮ್ಯಾಥ್ಯೂಸ್ ಕೋಸ್ಟಾ ಅವರಿಂದ ಆರು ಟಚ್ ಪಾಯಿಂಟ್‌ಗಳನ್ನು ಗಳಿಸಿದ ಬ್ರೆಜಿಲ್ 3ನೇ ನಿಮಿಷದಲ್ಲಿ ಭಾರತದ ಮೇಲೆ ಒತ್ತಡ ಹೇರಿತು. ಭಾರತದ 38 ಅಂಕಗಳಿಗೆ ಉತ್ತರವಾಗಿ 34 ಅಂಕಗಳನ್ನು ಗಳಿಸುವ ಮೂಲಕ ತಂಡವು ಕಠಿಣ ಪರಿಶ್ರಮ ಪಟ್ಟಿತು. ಅಂತಿಮವಾಗಿ ಹಿಂತಿರುಗುವ ಹಾದಿಯಲ್ಲಿ ಹೋರಾಡಿತು.
ನಿರೀಕ್ಷೆಯಂತೆ, ಆದಿತ್ಯ ಗನ್ಪುಲೆ ಮತ್ತು ನಾಯಕ ಪ್ರತೀಕ್ ವೈಕರ್ ನೇತೃತ್ವದ ಭಾರತ ತಂಡವು ಟರ್ನ್ 4 ರಲ್ಲಿ ಪುಟಿದೆದ್ದಿತು. ರೋಕೆಸನ್ ಸಿಂಗ್ ಸ್ಕೈ ಡೈವ್ಸ್ ಮೂಲಕ ನಾಲ್ಕು ಅಂಕಗಳನ್ನು ಗಳಿಸಿದರು. ಮೆಹುಲ್ ಎರಡು ಟಚ್ ಪಾಯಿಂಟ್‌ಗಳನ್ನು ಗಳಿಸಿದರು. ಆತಿಥೇಯ ತಂಡವು ಖೋ ಖೋ ವಿಶ್ವಕಪ್ 2025ರ 2ನೇ ದಿನವನ್ನು ಮುಕ್ತಾಯಗೊಳಿಸಲು ಅದ್ಭುತವಾಗಿ ಆಡುವ ಮೂಕಲ ಜಯದ ನಗೆ ಬೀರಿತು.

ಬ್ರೆಜಿಲ್ ವಿರುದ್ಧ ಭಾರತ ಪುರುಷರ ತಂಡ ಜಯಗಳಿಸುವ ಮೊದಲು, ಭಾರತದ ವನಿತೆಯರು ತಮ್ಮ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 175-18 ಅಂಕಗಳಿಂದ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ನಾಯಕಿ ಪ್ರಿಯಾಂಕಾ ಇಂಗಳೆ ನೇತೃತ್ವದ ತಂಡವು ಚೈತ್ರಾ ಬಿ ಮತ್ತು ಮೀರು ಅವರ ಸತತ ಡ್ರೀಮ್ ರನ್ ಗಳಿಸುವ ಮೂಲಕ ದಕ್ಷಿಣ ಕೊರಿಯಾದ ಆರಂಭಿಕ 10 ಟಚ್ ಪಾಯಿಂಟ್‌ಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸಿತು.
ನಸ್ರೀನ್ ಶೇಖ್, ಪ್ರಿಯಾಂಕಾ ಇಂಗಳೆ ಮತ್ತು ರೇಷ್ಮಾ ರಾಥೋಡ್ ನಿರಂತರ ದಾಳಿ ನಡೆಸಿದರು. ಎರಡು ನಿಮಿಷಗಳಲ್ಲಿ ನಾಲ್ಕು ಆಲ್‌ಔಟ್ ಮಾಡಿದ್ದು, ಭಾರತ ತಂಡದ ಗೆಲುವಿನ ಅಂತರವನ್ನು ವಿಸ್ತರಿಸಿತು. ರೇಷ್ಮಾ ರಾಥೋಡ್ ಆರು ಟಚ್ ಪಾಯಿಂಟ್‌ಗಳನ್ನು ಗಳಿಸಿದರೆ, ಮೀನು ಇತರ ಡೈವ್ಸ್ ಮೂಲಕ 12 ಅಂಕಗಳನ್ನು ಗಳಿಸಿದರು. 2ನೇ ತಿರುವಿನ ವೇಳೆಗೆ ಟೀಮ್ ಇಂಡಿಯಾ 16 ತಂಡಗಳನ್ನು ಮಣಿಸಿ 94-10 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.
ಟರ್ನ್ 3ರಲ್ಲಿ ಡ್ರೀಮ್ ರನ್ ಮೂಲಕ ಮೂರು ಅಂಕಗಳನ್ನು ಸೇರಿಸಿದ ಭಾರತ ಗೆಲುವಿನ ಅಂತರವನ್ನು ಕಾಯ್ದುಕೊಂಡಿತು. ಆದರೆ ದಕ್ಷಿಣ ಕೊರಿಯಾವನ್ನು ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಎಂಟು ಅಂಕಗಳಿಗೆ ಸೀಮಿತಗೊಳಿಸಿತು. ಅತ್ಯುತ್ತಮ ಆಟಗಾರ್ತಿ ನಸ್ರೀನ್ ಶೇಖ್ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.