For Quick Alerts
ALLOW NOTIFICATIONS  
For Daily Alerts

Kho-Kho World Cup 2025: ಖೋ-ಖೋ ವಿಶ್ವಕಪ್‌ಗೆ ವಿದ್ಯುಕ್ತ ಚಾಲನೆ

ಭಾರತದಲ್ಲಿ ಕ್ರಿಕೆಟ್‌ನ್ನು ಹೊರತು ಪಡಿಸಿ ಬೇರೆ ಕ್ರೀಡೆಗಳು ಸಹ ಬೆಳೆಯುತ್ತಿವೆ. ಈಗ ಭಾರತದಲ್ಲಿ ಮೊದಲ ಬಾರಿಗೆ ಖೋ-ಖೋ ವಿಶ್ವಕಪ್‌ ಆರಂಭವಾಗಿದೆ. ಈ ಟೂರ್ನಿ ಆಟಗಾರರಿಗೆ ಹೊಸ ಅವಕಾಶವನ್ನು ತೆರೆಯುತ್ತವೆ. ಈ ವಿಶ್ವಕಪ್‌ನ ಉದ್ಘಾಟನಾ ಸಮಾರಂಭ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಇದೇ ವೇಳೆ ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡಗಳ ಮೆರವಣಿಗೆ ಸಹ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಉದ್ಘಾಟಿಸಿದರು.

ಲೋಕಮಾನ್ಯ ತಿಲಕರು ಖೋ-ಖೋ ನಿಯಮಗಳನ್ನು ರಚಿಸಿದ್ದರು ಮತ್ತು ಖೋ-ಖೋವನ್ನು ಹೇಗೆ ಆಡಬೇಕೆಂದು ಸಹ ಹೇಳಿದ್ದರು. ನಮ್ಮ ನೆಲದಿಂದ ಹುಟ್ಟಿದ ಈ ಆಟವನ್ನು ವಿಶ್ವದ 50 ದೇಶಗಳಲ್ಲಿ ಆಡಲಾಗುತ್ತಿದೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ವಿವರಿಸಿದರು. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಖೋ-ಖೋ ಕ್ರೀಡೆಯನ್ನು ಏಷ್ಯನ್ ಗೇಮ್ಸ್‌ನಲ್ಲಿ ಸೇರಿಸಬೇಕು ಎಂಬ ಬೇಡಿಕೆಯನ್ನು ಸಹ ಇಟ್ಟರು. 1936ರ ಒಲಿಂಪಿಕ್ಸ್‌ ಭಾರತದಲ್ಲಿ ನಡೆಸಬೇಕು ಎಂಬುದು ನಮ್ಮ ಬಯಕೆ. ಈ ವೇಳೆಗೆ ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಬೇಕೆಂಬುದೇ ನಮ್ಮ ಮಹದಾಸೆ ಎಂದು ತಿಳಿಸಿದ್ದಾರೆ.

Kho-Kho World Cup 2025 India s Traditional Sport Shines on Global Stage

ದೇಶದಲ್ಲಿ ಖೋ-ಖೋ ಆಯೋಜಿಸಲಾಗುತ್ತಿರುವುದಕ್ಕೆ ನನಗೆ ತುಂಬ ಹೆಮ್ಮೆ ಇದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ದೇಶೀಯ ಕ್ರೀಡೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಸಚಿವರು ತಿಳಿಸಿದ್ದಾರೆ.

ಈ ಖೋ-ಖೋ ವಿಶ್ವಕಪ್ ಜನವರಿ 13 ರಿಂದ 19 ರವರೆಗೆ ನಡೆಯಲಿದೆ. ಇದರಲ್ಲಿ 20 ಪುರುಷ ತಂಡಗಳು ಮತ್ತು 19 ಮಹಿಳಾ ತಂಡಗಳು ಭಾಗವಹಿಸುತ್ತಿವೆ. ಪುರುಷರ ತಂಡಗಳನ್ನು ತಲಾ 4 ಗುಂಪುಗಾಳಿ ವಿಂಗಡಿಸಲಾಗಿದೆ. ಭಾರತ ಪುರುಷರ ತಂಡ ಜನವರಿ 13 ರಂದು ನೇಪಾಳ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಭಾರತೀಯ ಮಹಿಳಾ ತಂಡ ಜನವರಿ 14 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.

Kho-Kho World Cup 2025 India s Traditional Sport Shines on Global Stage

ಪುರುಷರ ಗುಂಪು

ಎ ಗ್ರುಪ್: ಭಾರತ, ನೇಪಾಳ, ಪೆರು, ಬ್ರೆಜಿಲ್, ಭೂತಾನ್
ಬಿ ಗ್ರುಪ್: ದಕ್ಷಿಣ ಆಫ್ರಿಕಾ, ಘಾನಾ, ಅರ್ಜೆಂಟೀನಾ, ನೆದರ್ಲ್ಯಾಂಡ್ಸ್, ಇರಾನ್
ಸಿ ಗ್ರುಪ್: ಬಾಂಗ್ಲಾದೇಶ, ಶ್ರೀಲಂಕಾ, ಕೊರಿಯಾ ಗಣರಾಜ್ಯ, ಅಮೆರಿಕ, ಪೋಲೆಂಡ್
ಡಿ ಗ್ರುಪ್: ಇಂಗ್ಲೆಂಡ್, ಜರ್ಮನಿ, ಮಲೇಷ್ಯಾ, ಆಸ್ಟ್ರೇಲಿಯಾ, ಕೀನ್ಯಾ

ಮಹಿಳಾ ಗುಂಪು

ಎ ಗ್ರುಪ್: ಭಾರತ, ಇರಾನ್, ಮಲೇಷ್ಯಾ, ಕೊರಿಯಾ ಗಣರಾಜ್ಯ
ಬಿ ಗ್ರುಪ್: ಇಂಗ್ಲೆಂಡ್, ಆಸ್ಟ್ರೇಲಿಯಾ, ಕೀನ್ಯಾ, ಉಗಾಂಡ, ನೆದರ್ಲ್ಯಾಂಡ್ಸ್
ಸಿ ಗ್ರುಪ್: ನೇಪಾಳ, ಭೂತಾನ್, ಶ್ರೀಲಂಕಾ, ಜರ್ಮನಿ, ಬಾಂಗ್ಲಾದೇಶ
ಡಿ ಗ್ರುಪ್: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪೋಲೆಂಡ್, ಪೆರು, ಇಂಡೋನೇಷ್ಯಾ

Story first published: Monday, January 13, 2025, 23:58 [IST]
Other articles published on Jan 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+