Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೀನಾ ವಿರುದ್ಧ ಸೆಣಸಾಡಲಿರುವ ಕನ್ನಡಿಗನಿಗೆ ಶುಭ ಕೋರಿದ ಸುದೀಪ್

 Kichcha Sudeep wishes to Kantharaj Agasa ahead of One championship

ಬೆಂಗಳೂರು ಮೂಲದ ಕಾಂತರಾಜ್ ಅಗಸ ಎಂಬ ಪ್ರತಿಭೆ ಸಿಂಗಾಪುರದ ಎಂಎಂಎ ಚಾಂಪಿಯನ್‍ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಮೇ 28ರಂದು ಚೀನಾದ ಕ್ಸಿ-ವೈ ವಿರುದ್ಧ ಕಾಂತರಾಜ್ ಅಗಸ ಸೆಣಸಾಡಲಿದ್ದಾರೆ.

ಹೀಗೆ ಬಹು ನಿರೀಕ್ಷಿತ ಒನ್ ಚಾಂಪಿಯನ್‍ಶಿಪ್‌ನಲ್ಲಿ ಭಾರತದ ಪರ ಕನ್ನಡಿಗ ಕಾಂತರಾಜ್ ಅಗಸ ಭಾಗವಹಿಸುತ್ತಿರುವುದಕ್ಕೆ ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. ಕಾಂತರಾಜ್ ಅಗಸಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿರುವ ಕಿಚ್ಚ ಸುದೀಪ್ 'ಸ್ಥಳೀಯ ಪ್ರತಿಭೆ ಕಾಂತರಾಜ್ ಅಗಸ ಸಿಂಗಾಪುರದ ಎಂಎಂಎ ಚಾಂಪಿಯನ್‍ಶಿಪ್‌ನಲ್ಲಿ ಚೀನಾದ ಕ್ಸಿ-ವೈ ವಿರುದ್ಧ ಸೆಣಸಾಡಲಿದ್ದು, ಅವರಿಗೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ. ಮೇ 28ಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ' ಎಂದು ಟ್ವಿಟ್ಟರ್‌ನಲ್ಲಿ ಸುದೀಪ್ ಬರೆದುಕೊಂಡಿದ್ದಾರೆ.

ಸುದೀಪ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂತರಾಜ್ 'ತುಂಬಾ ಧನ್ಯವಾದಗಳು ಸರ್, ನಿಮ್ಮ ಪ್ರೋತ್ಸಾಹ ಮತ್ತು ಪ್ರೀತಿ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ' ಎಂದು ಸಂತಸ ವ್ಯಕ್ತಪಡಿಸಿದರು.

ಸಿಂಗಾಪುರದ ಮೂಲದ ಎಂಎಂಎ ಒನ್ ಚಾಂಪಿಯನ್‌ಶಿಪ್‌ನಲ್ಲಿ ಮುಯ್‌ಥಾಯ್, ಕಿಕ್ ಬಾಕ್ಸಿಂಗ್ ಸೇರಿದಂತೆ ಸಮರ ಕಲೆಗಳ ಪರಿಣಿತಿ ಹೊಂದಿರುವ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಇದರಲ್ಲಿ ಭಾರತದ ಪರ ಕನ್ನಡಿಗ ಕಾಂತರಾಜ್ ಅಗಸ ಪಾಲ್ಗೊಳ್ಳುತ್ತಿದ್ದಾರೆ.

Story first published: Monday, May 24, 2021, 7:41 [IST]
Other articles published on May 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+