ಮಲ್ಯರ 'ಏಂಜಲ್ ಡಸ್ಟ್' ಕುದುರೆಗೆ ಅನಿರೀಕ್ಷಿತ ಜಯ
ಬೆಂಗಳೂರು, ಜುಲೈ 13: 28ನೇ ಆವೃತ್ತಿಯ ಗ್ರೇಡ್ -1 ಕಿಂಗ್ ಫಿಷರ್ 'ಬೆಂಗಳೂರು ಡರ್ಬಿ 2000 ಮೀಟರ್ ರೇಸಿನಲ್ಲಿ ವಿಜಯ್ ಮಲ್ಯ ಸಹ ಮಾಲೀಕತ್ವದ ಏಂಜಲ್ ಡಸ್ಟ್ ಕುದುರೆ ಅನಿರೀಕ್ಷಿತ ಜಯ ದಾಖಲಿಸಿದೆ. ಎಲ್ಲರ ಕಣ್ಣು ಎಟರ್ನಲ್ ಫ್ಲೇಮ್ ಮೇಲಿದ್ದಾಗ ಏಂಜಲ್ ಡಸ್ಟ್ ಅಚ್ಚರಿ ಫಲಿತಾಂಶ ಹೊರ ಹಾಕಿದೆ.
ವಿಜಯ್ ಮಲ್ಯ ಒಡೆತನದ ಸುಲೈಮಾನ್ ಅಟ್ಟಾಲ್ಲಾಹಿ ತರಬೇತಿಯ 'ಏಂಜಲ್ ಡಸ್ಟ್' ಕುದುರೆ ಬಾಲಕ್ಕೆ ದುಡ್ಡು ಕಟ್ಟಿದ್ದವರು ಹುಚ್ಚಾಪಟ್ಟೆ ಕುಣಿದಾಡಿದ ದೃಶ್ಯ ಭಾನುವಾರ ಸಂಜೆ ರೇಸ್ ಕ್ಲಬ್ ನ ಸುತ್ತಾಮುತ್ತಾ ಕಂಡು ಬಂದಿತು.['ಫೆರಾ' ಉಲ್ಲಂಘನೆ ಮಲ್ಯ ವಿರುದ್ಧ 'ಇಡಿ' ತನಿಖೆಗೆ ಓಕೆ ]
ಬೆಂಗಳೂರು ಡರ್ಬಿಯ ಫೇವರಿಟ್ ಎನಿಸಿದ್ದ ಎಟರ್ನಲ್ ಫ್ಲೇಮ್ 10ನೇ ಸ್ಥಾನಕ್ಕೆ ಕುಸಿದು ನಿರಾಶೆ ಮೂಡಿಸಿತು. ಏಂಜಲ್ ಡಸ್ಟ್ ಕುದುರೆಗೆ 1.5 ಕೋಟಿ ರು ನಗದು ಬಹುಮಾನ, ಸಿಲ್ವರ್ ಹಾರ್ಸ್ ಪ್ರಶಸ್ತಿ ಲಭ್ಯವಾಯಿತು. ತರಬೇತುದಾರ ಎಸ್ ಎಸ್ ಅಟೋಲ್ಹಾಹಿ ಹಾಗೂ ಜಾಕಿ ಪಿ. ಟ್ರೆವರ್ ಅವರಿಗೆ ಅವರನ್ನು ಕೊಂಡಾಡಲಾಯಿತು.
ಡೆಸರ್ಟ್ ಗಾಡ್ ಎರಡನೇ ಸ್ಥಾನ(49.6 ಲಕ್ಷ ರು ನಗದು ಬಹುಮಾನ) ಪಡೆದರೆ, ಎಂಎಂ ರಾಮಸ್ವಾಮಿ ಮಾಲೀಕತ್ವದ ಅರಿಗಾ ಕುದುರೆ ಮೂರನೇ ಸ್ಥಾನ(24.8 ಲಕ್ಷ ರು) ಹಾಗೂ ಫ್ಲೇಯ್ ಬಾಯನ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡವು. ಡರ್ಬಿಯ ಒಂದಷ್ಟು ಚಿತ್ರಗಳು ನಿಮಗಾಗಿ ಮುಂದಿದೆ...

ಬೆಂಗಳೂರು ಡರ್ಬಿಯಲ್ಲಿ 9 ರೇಸ್
ಬೆಂಗಳೂರು ಟರ್ಫ್ ಕ್ಲಬಿನಲ್ಲಿ ನಡೆದ ಕಿಂಗ್ ಫಿಷರ್ ಡರ್ಬಿಯಲ್ಲಿ 9 ರೇಸ್ ಗಳಿತ್ತು, ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ದೇಶದ ಪ್ರತಿಷ್ಠಿತ ರೇಸ್ ಗಳಲ್ಲಿ ಇದು ಒಂದಾಗಿದೆ. ಚಿತ್ರದಲ್ಲಿ ಟ್ರೋಫಿಯೊಂದಿಗೆ ಕನ್ನಡ ನಟಿ ಸಂಜನಾ.

28ನೇ ಆವೃತ್ತಿಯ ರೇಸ್ ಫಲಿತಾಂಶ
ವಿಜಯ್ ಮಲ್ಯ ಅವರ ಯುಬಿ ಸಮೂಹ ಹಾಗೂ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್ ಒಡೆತನದ ಎಂಜಲ್ ಡಸ್ಟ್ ಮೊದಲ ಸ್ಥಾನ ಗಳಿಸಿತು. ಡೆಸಾರ್ಟ್ ಗಾರ್ಡ್, ಅರಿಗಾ ಹಾಗೂ ಫ್ಲೇಮ್ ಬೊಯಾನ್ಸ್ ಟಾಪ್ ಕುದುರೆಗಳಾಗಿತ್ತು.

ಸೆಲೆಬ್ರಿಟಿಗಳಿಂದ ತುಂಬಿದ್ದ ರೇಸ್ ಕ್ಲಬ್
ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಒಂದೆಡೆ ಕುದುರೆಗಳ ಓಟ ನಡೆಯುತ್ತಿದ್ದರೆ, ಇನ್ನೊಂದೆಡೆ ಸುಂದರ ಯುವತಿಯರ ಫ್ಯಾಷನ್ ಶೋ ನಡೆಯುವಂತೆ ಪರಿಸ್ಥಿತಿ ಇತ್ತು. ಎಂದಿನಂತೆ ರೆಬೆಲ್ ಸ್ಟಾರ್, ವಸತಿ ಸಚಿವ ಅಂಬರೀಷ್ ಅವರು ಡರ್ಬಿ ವೀಕ್ಷಿಸಿ ಆನಂದಿಸಿದರು. ಚಿತ್ರದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ.

ಕಿಂಗ್ ಆಫ್ ಆಲ್ ಡರ್ಬಿಸ್ ಗೆದ್ದ ಏಂಜಲ್
ಮಲ್ಯ ಆವರ ಕುದುರೆ ಏಂಜಲ್ ಡಸ್ಟ್ 1.5 ಕೋಟಿ ರು ನಗದು ಬಹುಮಾನ ಸೇರಿದಂತೆ ಒಟ್ಟಾರೆ 2.5 ಕೋಟಿ ರು ಗಳಿಸಿತು. ರೇಸ್ ಗೆಲ್ಲುವ ನಿರೀಕ್ಷೆ ಮೂಡಿಸಿದ ಎಟರ್ನಲ್ ಫ್ಲೇಮ್ ಕುದುರೆ 10ನೇ ಸ್ಥಾನಕ್ಕೆ ಕುಸಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications