Paris Olympics 2024: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಔಟ್!
ಆಗಸ್ಟ್ 6 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ 11ನೇ ದಿನವೂ ಭಾರತ ಹಿನ್ನಡೆ ಅನುಭವಿಸಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಕಿಶೋರ್ ಜೆನಾ ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ.
ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಭಾರತೀಯರಲ್ಲಿತ್ತು ಆದರೆ, ನಿರೀಕ್ಷೆಗೆ ತಕ್ಕಂತೆ ಕಿಶೋರ್ ಜೆನಾ ಅವರು ಆರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದು ಭಾರತ ಒಂದು ಪದಕವನ್ನು ಕಳೆದುಕೊಳ್ಳವಂತಾಗಿದೆ.

ಇಂದು ಬೆಳಗ್ಗೆ ಆಕ್ಷನ್‌ನಲ್ಲಿದ್ದ ಕಿಶೋರ್ ಜೆನಾ ಅರ್ಹತಾ ಸುತ್ತಿನಲ್ಲಿ 80.73 ಮೀಟರ್‌ಗಳನ್ನು ಎಸೆದಿದ್ದರು. ಆದರೆ, ಈ ಎಸೆತವು ಕಿಶೋರ್ ಜೆನಾ ಅವರನ್ನು ಫೈನಲ್‌ಗೆ ಕರೆದ್ಯೊಯವಲ್ಲಿ ವಿಫಲವಾಯಿತು. ಹೀಗಾಗಿ ಗುರುವಾರ ನಡೆಯಲಿರುವ ಫೈನಲ್‌ನಿಂದ ಕಿಶೋರ್ ಜೆನಾ ಔಟಾಗಿದ್ದಾರೆ.
ಒಡಿಶಾದ ಈ ಅಥ್ಲೀಟ್ ಎ ಗುಂಪಿನಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಎ ಗುಂಪಿನಿಂದ ಜೂಲಿಯನ್ ವೆಬರ್ (ಜರ್ಮನಿ), ಜೂಲಿಯಸ್ ಯೆಗೊ (ಕೀನ್ಯಾ), ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) ಮತ್ತು ಟೋನಿ ಕೆರಾನೆನ್ (ಫಿನ್‌ಲ್ಯಾಂಡ್) ಫೈನಲ್‌ಗೆ ಪ್ರವೇಸಿದ್ದಾರೆ.
ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಎ ಗುಂಪಿನಿಂದ ಸ್ಪರ್ಧಿಸಿದರು. ಬಿ ಗುಂಪಿನ ಕ್ರೀಡಾಪಟುಗಳು ತಮ್ಮ ಉನ್ನತ ಪ್ರಯತ್ನಗಳಿಂದ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಜೆನಾ ಅಧಿಕೃತವಾಗಿ ಫೈನಲ್‌ಗೆ ಓಟದಿಂದ ಹೊರಗುಳಿದರು.
ಫೈನಲ್‌ಗೆ ಗೋಲ್ಡನ್ ಬಾಯ್
ಗುಂಪಿ ಬಿ ಯಿಂದ ಭಾರತದ ಗೋಲ್ಡನ್ ಬಾಯ್ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದರು. ಈ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 89.34 ಮೀಟರ್‌ಗಳ ಅದ್ಭುತ ಎಸೆತದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಇದರ ಫಲವಾಗಿ, ಅವರು ಸುಲಭವಾಗಿ ಅರ್ಹತಾ ಮಾರ್ಕ್ ಅನ್ನು ದಾಟಿದರು. ಇದರೊಂದಿಗೆ ಸತತ ಎರಡನೇ ಬಾರಿಗೆ ನೀರಜ್ ಒಲಿಂಪಿಕ್ ಫೈನಲ್‌ಗೆ ತಲುಪಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications