Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ದಂಪತಿ!?

ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಗುಸುಗುಸು ಮಾತುಗಳು ಕೇಳಿಬರುತ್ತಿವೆ.

ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕರ್ನಾಟಕ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಜನವರಿ 2023ರಲ್ಲಿ ಮುಂಬೈನ ಖಂಡಾಲಾದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಸ್ಟಾರ್ ದಂಪತಿ ಮದುವೆಗೂ ಮುನ್ನ ತಮ್ಮ ಸಂಬಂಧವನ್ನು ಖಾಸಗಿಯಾಗಿ ಕಾಯ್ದುಕೊಂಡಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಪರಸ್ಪರ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು.

KL Rahul And Athiya Shetty Are Expecting Their First baby Suniel Shetty Drops Hint

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜೋಡಿ ವಿವಾಹವಾಗುವುದರೊಂದಿಗೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಇದೀಗ ಅವರ ಅಭಿಮಾನಿಗಳಿಗೆ ಮೊತ್ತೊಂದು ರೋಚಕ ಸಿಹಿ ಸುದ್ದಿಯೊಂದು ಬಂದಿದೆ.

ತಮ್ಮ ಪುತ್ರಿ ಅಥಿಯಾ ಗರ್ಭಿಣಿಯಾಗಿದ್ದಾಳೆ ಮತ್ತು ಕೆಎಲ್ ರಾಹುಲ್ ದಂಪತಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಪ್ರಮುಖ ಸುಳಿವನ್ನು ಸುನೀಲ್ ಶೆಟ್ಟಿ ಬಹಿರಂಗಪಡಿಸಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸುನೀಲ್ ಶೆಟ್ಟಿ ತೀರ್ಪುಗಾರರಾಗಿದ್ದು, ಇತ್ತೀಚಿನ ಎಪಿಸೋಡ್ ಅಜ್ಜಿಯರ ವಿಶೇಷ ಕಾರ್ಯಕ್ರಮವಾಗಿತ್ತು.

KL Rahul And Athiya Shetty Are Expecting Their First baby Suniel Shetty Drops Hint

ಅತಿಥಿಯಾಗಿ ಬಂದಿದ್ದ ಭಾರತಿ ಸಿಂಗ್ ಅವರು ಸುನೀಲ್ ಶೆಟ್ಟಿ ಯಾವ ರೀತಿಯ ಅಜ್ಜ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಲಿವುಡ್ ನಟ, "ಹೌದು, ಮುಂದಿನ ಸೀಸನ್ ಬಂದಾಗ ನಾನು ಈ ವೇದಿಕೆಯ ಮೇಲೆ ಅದೇ ರೀತಿಯಲ್ಲಿ ಓಡಾಡುತ್ತೇನೆ," ಎಂದು ಹೇಳಿದರು.

ಈ ಮೂಲಕ ಅಥಿಯಾ ಮತ್ತು ಕೆಎಲ್ ರಾಹುಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುಳಿವವನ್ನು ನೀಡಿದ್ದಾರೆಯೇ? ಎಂಬುದು ಕುತೂಹಲಕಾರಿಯಾಗಿದೆ. ಈ ಬಗ್ಗೆ ದಂಪತಿ ಮತ್ತು ಕುಟುಂಬ ಅಧಿಕೃತವಾಗಿ ಸುದ್ದಿಯನ್ನು ಖಚಿತಪಡಿಸುವವರೆಗೂ ಕಾಯಬೇಕಿದೆ.

ಐಪಿಎಲ್ 2024ರಲ್ಲಿ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಇತ್ತೀಚಿಗೆ ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಪತಿ ಮತ್ತು ಲಕ್ನೋ ತಂಡವನ್ನು ಬೆಂಬಲಿಸಲು ಅಥಿಯಾ ಶೆಟ್ಟಿ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡರು.

ಸಿನಿಮಾ ಬಗ್ಗೆ ಹೇಳುವುದಾದರೆ, ಅಥಿಯಾ ಶೆಟ್ಟಿ 2015ರಲ್ಲಿ ಸೂರಜ್ ಪಾಂಚೋಲಿಯೊಂದಿಗೆ 'ಹೀರೋ' ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ನಟಿ 'ಮುಬಾರಕನ್'ನಲ್ಲಿ ಕಾಣಿಸಿಕೊಂಡಿದ್ದರು ಮತ್ತು ಕೊನೆಯದಾಗಿ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ 'ಮೋತಿಚೂರ್ ಚಕ್ನಾಚೂರ್'ನಲ್ಲಿ ಬೆಳ್ಳಿ ಪರದೆ ಹಂಚಿಕೊಂಡರು.

ಮತ್ತೊಂದೆಡೆ, ಕ್ರಿಕೆಟಿಗ ಕೆಎಲ್ ರಾಹುಲ್ ಐಪಿಎಲ್ 2024ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಗಮನ ಹರಿಸಿದ್ದಾರೆ.

Story first published: Sunday, March 31, 2024, 18:29 [IST]
Other articles published on Mar 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+