KL Rahul Marriage Date : ಕನ್ನಡಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹಕ್ಕೆ ಕೊನೆಗೂ ಮುಹೂರ್ತ ನಿಗದಿ

ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಜನವರಿ 21 ರಿಂದ 23 ರವರೆಗೆ ಈ ತಾರಾ ಜೋಡಿಯ ವಿವಾಹ ನಡೆಯಲಿದೆ.
ಕೆಎಲ್ ರಾಹುಲ್ ಬುಧವಾರ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತವನ್ನು ಮುನ್ನಡೆಸಲು ಸಿದ್ಧವಾಗುತ್ತಿದ್ದಂತೆ, ಈ ದೊಡ್ಡ ಸುದ್ದಿ ಹೊರಬಿದ್ದಿದೆ. ಪಿಂಕ್-ವಿಲ್ಲಾ ವರದಿ ಮಾಡಿರುವ ಪ್ರಕಾರ, ಎರಡೂ ಕಡೆಯ ಕುಟುಂಬಗಳು ರಾಹುಲ್ ಮತ್ತು ಅಥಿಯಾ ಮದುವೆಗೆ ಅತಿಥಿಗಳನ್ನು ಆಹ್ವಾನಿಸಲು ಪ್ರಾರಂಭಿಸಿದ್ದಾರೆ.
ಇದು 2023ರ ಮೊದಲ ತಾರಾ ಜೋಡಿಯ ವಿವಾಹವಾಗಲಿದ್ದು, ಅದ್ದೂರಿಯಾಗಿ ಮದುವೆಯನ್ನು ನಡೆಸಲು ನಿಶ್ಚಯಿಸಲಾಗಿದೆ. ಹಲ್ದಿ, ಮೆಹೆಂದಿ, ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಈ ಮದುವೆ ಸಂಭ್ರಮಕ್ಕೆ ಸುನೀಲ್ ಶೆಟ್ಟಿ ಮತ್ತು ಮನ ಶೆಟ್ಟಿಯವರ ಅದ್ದೂರಿ ಮನೆ ಖಂಡಾಲಾದ ಜಹಾನ್‌ನಲ್ಲಿ ಆಯೋಜಿಸಲಾಗಿದೆ.
ಅಥಿಯಾ ಶೆಟ್ಟಿಯವರ ತಂದೆ ಸುನಿಲ್ ಶೆಟ್ಟಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಸುನೀಲ್ ಮತ್ತು ಮನ ಶೆಟ್ಟಿ ಅವರ ಅದ್ದೂರಿ ಖಂಡಾಲಾ ಮನೆ ಜಹಾನ್‌ನಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮ ನಡೆಯುವುದಾಗಿ ಹೇಳಿದ್ದಾರೆ.
ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಕೆಎಲ್ ರಾಹುಲ್ ಮತ್ತು ಅಥಿಯಾ ಮದುವೆಯ ಬಟ್ಟೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮದುವೆಯ ಉಡುಪನ್ನು ವಿನ್ಯಾಸಗೊಳಿಸಲು ಸಿದ್ಧರಾಗಿದ್ದಾರೆ. ಅವರು ರಿಯಾದ್ ರಾಜಕುಮಾರಿ ಮತ್ತು ಅನೇಕ ಪ್ರಸಿದ್ಧ ಬಾಲಿವುಡ್ ನಟ/ನಟಿಯರ ಮದುವೆಯ ಬಟ್ಟೆಗಳನ್ನು ವಿನ್ಯಾಸಗೊಳಿಸಿದ ಅನುಭವ ಹೊಂದಿದ್ದಾರೆ.

ಬಿಸಿಸಿಐನಿಂದ ರಜೆ ಪಡೆದಿರುವ ಕೆಎಲ್ ರಾಹುಲ್
ಬಾಂಗ್ಲಾದೇಶದ ವಿರುದ್ಧದ ಸರಣಿಯ ನಂತರ ಕೆಎಲ್ ರಾಹುಲ್ ಸಂಪೂರ್ಣವಾಗಿ ಮದುವೆಯ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಬಿಸಿಸಿಐಗೆ ರಜೆಗಾಗಿ ಮನವಿಯನ್ನು ಸಲ್ಲಿಸಿರುವ ಅವರು, ಅನುಮತಿಯನ್ನು ಪಡೆದುಕೊಂಡಿದ್ದಾರೆ.
2023ರಲ್ಲಿ ಭಾರತ ಬಿಡುವಿಲ್ಲದ ಸರಣಿಗಳನ್ನು ಆಡಲಿದೆ. ಏಕದಿನ ವಿಶ್ವಕಪ್ ಕೂಡ ಇರುವುದರಿಂದ ನಂತರ ಸಮಯ ಸಿಗದ ಕಾರಣ ಜನವರಿಯಲ್ಲಿ ಮದುವೆಯಾಗಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಕೆಎಲ್ ರಾಹುಲ್ ಮೂಲತಃ ಮಂಗಳೂರಿನವರಾಗಿದ್ದಾರೆ. ಇನ್ನು ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಕೂಡ ಮಂಗಳೂರು ಮೂಲದವರು. ಈ ಜೋಡಿ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಮಗಳ ಮದುವೆಗೆ ಸುನಿಲ್ ಶೆಟ್ಟಿ ಸಂತೋಷದಿಂದಲೇ ಒಪ್ಪಿಗೆ ನೀಡಿದ್ದು, ಈ ಜೋಡಿಹಕ್ಕಿಗಳು ವಿವಾಹ ಬಂಧನದಲ್ಲಿ ಒಂದಾಗಲು ನಿರ್ಧರಿಸಿವೆ.
ಈ ತಾರಾ ಜೋಡಿಯ ಮದುವೆಗೆ ಬಾಲಿವುಡ್ ತಾರೆಗಳು, ಕ್ರಿಕೆಟಿಗರು, ಎರಡೂ ಕುಟುಂಬದ ಬಂಧುಗಳು ಸಾಕ್ಷಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications