KL Rahul: ಹುಬ್ಬಳ್ಳಿಯ ಬಡ ಪ್ರತಿಭಾವಂತ ವಿದ್ಯಾರ್ಥಿಯ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾದ ಕೆಎಲ್ ರಾಹುಲ್!
ಭಾರತೀಯ ಕ್ರಿಕೆಟರ್ ಕೆಎಲ್ ರಾಹುಲ್ ಕೇವಲ ಕ್ರೀಡಾ ವ್ಯಕ್ತಿಯಾಗಿ ಮಾತ್ರವಲ್ಲದೆ, ಹೃದಯವೈಶಾಲ್ಯ ಹೊಂದಿರುವ ಕ್ರೀಡಾಳು ಆಗಿದ್ದಾರೆ. ಕರಾವಳಿ ನಗರ ಮಂಗಳೂರಿನ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭಿಸಿದವರು.
ವಿದ್ಯಾರ್ಥಿ ಹಂತದಲ್ಲಿ ಯುವಕರಿಗಿರುವ ಕಷ್ಟ ಮತ್ತು ಆ ವೇಳೆ ಅಗತ್ಯವಿರುವ ಬೆಂಬಲವನ್ನು ಅರ್ಥಮಾಡಿಕೊಂಡಿರುವ ಕೆಎಲ್ ರಾಹುಲ್, ಕರ್ನಾಟಕದ ಮಹಾಲಿಂಗಪುರದ ಪ್ರತಿಭಾವಂತ ಬಡ ವಿದ್ಯಾರ್ಥಿಯ ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಳ್ಳಲು ನೆರವಾಗಿದ್ದಾರೆ.

ಅಮೃತ್ ಮಾವಿನಕಟ್ಟಿ ಎಂಬ ಬಡ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್‌ಇ ಕಾಲೇಜಿನಲ್ಲಿ ಬಿ.ಕಾಂ ಕೋರ್ಸ್‌ಗೆ ದಾಖಲಿಸುವ ಮೂಲಕ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ವಿದ್ಯಾರ್ಥಿಯ ಬಾಳಿಗೆ ಬೆಳಕಾಗಿದ್ದಾರೆ.
ಸದ್ಯ ತೊಡೆಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅವರು ಪ್ರವೇಶ ಶುಲ್ಕ, ಆಹಾರ ಮತ್ತು ಪುಸ್ತಕಗಳನ್ನು ಒಳಗೊಂಡಂತೆ ತನ್ನ ಮೊದಲ ವರ್ಷದ ಪದವಿಗೆ ಬೇಕಾಗುವ ಅತ್ಯಗತ್ಯ ಸೌಕರ್ಯ ಒದಗಿಸುವ ಮೂಲಕ ವಿದ್ಯಾರ್ಥಿಗೆ ಸಹಾಯ ಮಾಡಿದರು.
ಆರ್ಥಿಕ ಸಂಕಷ್ಟದಿಂದ ಉನ್ನತ ವಿದ್ಯಾಭ್ಯಾಸಕ್ಕೆ ಕಷ್ಟಪಡುತ್ತಿದ್ದ ಹುಬ್ಬಳ್ಳಿಯ ಅಮೃತ್ ಮಾವಿನಕಟ್ಟೆಗೆ ಕ್ರಿಕೆಟಿಗ ಕೆಎಲ್ ರಾಹುಲ್ 75 ಸಾವಿರ ರೂಪಾಯಿ ನೀಡಿದ್ದಾರೆ. ವಿದ್ಯಾರ್ಥಿ 50 ಸಾವಿರ ರೂಪಾಯಿ ಕೇಳಿದ್ದರೂ, ಕೇಳಿದ್ದಕ್ಕಿಂತ 25 ಸಾವಿರ ರೂಪಾಯಿ ಹೆಚ್ಚಿಗೆ ನೀಡಿದ್ದಾರೆ. ಅಲ್ಲದೆ ಮುಂದಿನ ಮೂರು ವರ್ಷದ ಶುಲ್ಕವನ್ನು ಭರಿಸುವ ಭರವಸೆ ನೀಡಿದ್ದಾರೆ.
ಪಿಯುಸಿಯಲ್ಲಿ ಶೇ.95ರಷ್ಟು ಗಮನಾರ್ಹ ಶೈಕ್ಷಣಿಕ ಅಂಕಗಳೊಂದಿಗೆ ಅತ್ಯುತ್ತಮ ವಿದ್ಯಾರ್ಥಿಯಾಗಿರುವ ಅಮೃತ್ ಮಾವಿನಕಟ್ಟಿ ಅವರ ಕುಟುಂಬದ ನಿರ್ಣಾಯಕ ಸಮಯದಲ್ಲಿ ಕೆಎಲ್ ರಾಹುಲ್ ಸಹಾಯಹಸ್ತ ನೀಡಿ ಅಭಿನಂದನೆಗೆ ಅರ್ಹರಾಗಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ, ಕುಟುಂಬದ ಆರ್ಥಿಕ ಅಸ್ಥಿರತೆಯು ಅಮೃತ್ ಅವರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಲು ಅವರ ಕುಟುಂಬ ಹೆಣಗಾಡುತ್ತಿತ್ತು. ಈ ವೇಳೆ ಸಹಾಯಕ್ಕಾಗಿ ಅವರ ಸ್ನೇಹಿತನನ್ನು ಸಂಪರ್ಕಿಸಿದರು. ಅವರು ಸ್ಥಳೀಯ ಹುಬ್ಬಳ್ಳಿ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರ್ ಅವರನ್ನು ಸಂಪರ್ಕಿಸಿದ್ದಾರೆ.
ಅಮೃತ್ ಮಾವಿನಕಟ್ಟೆಯ ಕಥೆಯನ್ನು ಕೇಳಿದ ಕೆಎಲ್ ರಾಹುಲ್, ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕೆ ಆರ್ಥಿಕವಾಗಿ ನೆರವಾಗುವ ಮೂಲಕ ಮಾನವೀಯತೆ ಮೆರೆದರು.
ಭಾರತ ತಂಡದ ಈ ಸ್ಟಾರ್ ಕ್ರಿಕೆಟಿಗ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವುದು ಇದೇ ಮೊದಲೇನಲ್ಲ. ರಾಹುಲ್ ಈ ಹಿಂದೆ ಕೋವಿಡ್-19 ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ ಹಣಕಾಸಿನ ನೆರವನ್ನು ನೀಡಿದ್ದರು. ಕೇವಲ ಮೈದಾನದಲ್ಲಿ ಆಟಗಾರನಲ್ಲದೆ, ಮೈದಾನದ ಹೊರಗೂ ಮಾನವೀಯತೆ ವ್ಯಕ್ತಿತ್ವ ಹೊಂದಿದ್ದಾರೆಂದು ಸಾಬೀತುಪಡಿಸಿದ್ದಾರೆ.
ಇದೇ ವೇಳೆ ಈ ವರ್ಷದ ಅಕ್ಟೋಬರ್‌ನಲ್ಲಿ ಅರಂಭವಾಗುವ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಮುನ್ನ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯುವ ಏಷ್ಯಾ ಕಪ್ 2023ರ ವೇಳೆಗೆ ಹಿಂತಿರುಗಲು ಎದುರು ನೋಡುತ್ತಿರುವ ಕೆಎಲ್ ರಾಹುಲ್, ತೊಡೆಯ ಶಸ್ತ್ರಚಿಕಿತ್ಸೆಯ ನಂತರ ಪುನರ್ವಸತಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಚೆಕ್ ಇನ್ ಆಗಿದ್ದಾರೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ನಾಯಕನೂ ಆಗಿರುವ ಕೆಎಲ್ ರಾಹುಲ್, ಐಪಿಎಲ್ 2023ರ ಪಂದ್ಯದಲ್ಲಿ ಗಾಯಗೊಂಡರು. ತೊಡೆ ಶಸ್ತ್ರಚಿಕಿತ್ಸೆ ನಂತರ ಪಂದ್ಯಾವಳಿ ಮತ್ತು ನಂತರದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ಪಂದ್ಯದಿಂದ ಹೊರಗುಳಿಯಬೇಕಾಯಿತು.
ಕೆಎಲ್ ರಾಹುಲ್ ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಂಗಳವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ "ಮನೆ' ಎಂಬ ಟ್ವೀಟ್‌ನೊಂದಿಗೆ ಎನ್‌ಸಿಎ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications