For Quick Alerts
ALLOW NOTIFICATIONS  
For Daily Alerts

ನೀರಜ್ ಚೋಪ್ರ ಸಹಿತ 11 ಕ್ರೀಡಾಪಟುಗಳ ಹೆಸರು ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು

List of Indian athletes who have been recommended for the Khel Ratna and Arjuna Award 2021

ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ 11 ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರ ಸೇರಿದಂತೆ 11 ಕ್ರೀಡಾಪಟುಗಳ ಹೆಸರು ಈ ಪಟ್ಟಿಯಲ್ಲಿದೆ. ನೀರಜ್ ಚೋಪ್ರ ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ರವಿ ದಹಿಯಾ, ಪಿಆರ್ ಶ್ರೀಜೀಶ್ ಮತ್ತು ಲೋವ್ಲಿನಾ ಬಾರ್ಗೋಹೈ ಹೆಸರು ಕೂಡ ಈ ಪಟ್ಟಿಯಲ್ಲಿದೆ.

ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಹೆಸರು ಕೂಡ ಶಿಫಾರಸಿ ಮಾಡಲಾಗಿದ್ದು ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೇಟ್ರಿ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಈ ಮೂಲಕ ಸುನಿಲ್ ಛೇಟ್ರಿ ಈ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸಾದ ಮೊದಲ ಫುಟ್ಬಾಲ್ ಆಟಗಾರ ಎನಿಸಿದ್ದಾರೆ.

2021 ಭಾರತದ ಕ್ರೀಡಾ ಲೋಕದ ಪಾಲಿಗೆ ಅತ್ಯಂತ ಸ್ಮರಣೀಯ ವರ್ಷ. ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಡದಲ್ಲಿ ಭಾರತೀಯ ಕ್ರೀಡಾಪಟುಗಳು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಅವನಿ ಲೇಖಿರಾ ಎರಡು ಪದಕವನ್ನು ಪಡೆದ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು ಎನಿಸಿದ್ದಾರೆ. ಅವರ ಹೆಸರು ಕೂಡ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸಾಗಿದೆ. ಇನ್ನು ಇದೇ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸುಮಿತ್ ಅಂತಿಲ್ ಹೆಸರು ಕೂಡ ಈ ಪಟ್ಟಿಯಲ್ಲಿದೆ.

ಇನ್ನು ಖೇಲ್ ರತ್ನ ಪ್ರಶಸ್ತಿಯನ್ನು ಹೊರತು ಪಡಿಸಿ ಅರ್ಜುನ ಪ್ರಶಸ್ತಿಗೆ ಕೂಡ ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಇದರಲ್ಲಿ 35 ಕ್ರೀಡಾಪಟುಗಳು ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ:
ನೀರಜ್ ಚೋಪ್ರಾ (ಅಥ್ಲೆಟಿಕ್ಸ್)
ರವಿ ದಹಿಯಾ (ಕುಸ್ತಿ)
ಪಿಆರ್ ಶ್ರೀಜೇಶ್ (ಹಾಕಿ)
ಲೊವ್ಲಿನಾ ಬೊರ್ಗೊಹೈ (ಬಾಕ್ಸಿಂಗ್)
ಸುನಿಲ್ ಛೆಟ್ರಿ (ಫುಟ್‌ಬಾಲ್)
ಮಿಥಾಲಿ ರಾಜ್ (ಕ್ರಿಕೆಟ್)
ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)
ಸುಮಿತ್ ಆಂಟಿಲ್ (ಜಾವೆಲಿನ್)
ಅವನಿ ಲೇಖರ (ಶೂಟಿಂಗ್)
ಕೃಷ್ಣ ನಗರ (ಬ್ಯಾಡ್ಮಿಂಟನ್)
ಎಂ ನರ್ವಾಲ್ (ಶೂಟಿಂಗ್)

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಈ ಮೊದಲು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರಿತ್ತು. ಆದರೆ ಈ ಬಾರಿ ಭಾರತ ಸರ್ಕಾರ ಭಾರತ ಕಂಡ ಶ್ರೇಷ್ಠ ಕ್ರೀಡಾಪಟು ಹಾಕಿ ತಂಡದ ಮಾಜಿ ನಾಯಕ ಮೇಜರ್ ಧ್ಯಾನ್ ಚಂದ್ ಹೆಸರಿನೊಂದಿಗೆ ಬದಲಾವಣೆ ಮಾಡಿಕೊಂಡಿದೆ.

Story first published: Thursday, October 28, 2021, 10:08 [IST]
Other articles published on Oct 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+