U-20 World Athletics Championships: ಲಾಂಗ್‌ ಜಂಪರ್ ಶೈಲಿ ಸಿಂಗ್‌ಗೆ ಬೆಳ್ಳಿ

ನೈರೋಬಿ: ಪ್ರತಿಭಾನ್ವಿತ ಲಾಂಗ್ ಜಂಪರ್ ಶೈಲಿ ಸಿಂಗ್ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದೇ ವಿಭಾಗದಲ್ಲಿ ಒಂದು ಸೆಂಟಿ ಮೀಟರ್ ಹೆಚ್ಚು ಜಿಗಿದ್ದರೂ ಭಾರತದ ಹೆಸರಿನಲ್ಲೊಂದು ಇತಿಹಾಸ ನಿರ್ಮಾಣವಾಗುತ್ತಿತ್ತು. ಆದರೆ ಶೈಲಿ ಬೆಳ್ಳಿಗೆ ತೃಪ್ತಿಪಟ್ಟರು.

ವಿಶ್ವಕಪ್‌ಗೆ ಪರ್ಯಾಯ ಪದವೇ ಭಾರತದ ಈ ಆಟಗಾರ: ದಿನೇಶ್ ಕಾರ್ತಿಕ್ ಹೀಗೆ ಹೊಗಳಿದ್ದು ಯಾರನ್ನು!ವಿಶ್ವಕಪ್‌ಗೆ ಪರ್ಯಾಯ ಪದವೇ ಭಾರತದ ಈ ಆಟಗಾರ: ದಿನೇಶ್ ಕಾರ್ತಿಕ್ ಹೀಗೆ ಹೊಗಳಿದ್ದು ಯಾರನ್ನು!

17ರ ಹರೆಯದ ಶೈಲಿ ಸಿಂಗ್‌ ಅವರ ವೈಯಕ್ತಿಕ ಅತ್ಯುತ್ತಮ ಸಾಧನೆ 6.59 ಮೀಟರ್. ಆದರೆ ಈ ದೂರ ಕೂಡ ಶೈಲಿಗೆ ಬಂಗಾರ ಗೆಲ್ಲಲು ನೆರವಾಗಲಿಲ್ಲ. ಈ ವಿಭಾಗದಲ್ಲಿ ಚಿನ್ನ ಸ್ವೀಡನ್‌ನ ಹಾಲಿ ಜೂನಿಯರ್ ಚಾಂಪಿಯನ್ ಮಾಜ ಅಸ್ಕಾಗ್‌ಗೆ ದೊರೆಯಿತು.

ಭಾನುವಾರ (ಆಗಸ್ಟ್ 22) ನಡೆದ ಫೈನಲ್ ಸ್ಪರ್ಧೆಯಲ್ಲಿ ಅಸ್ಕಾಗ್ 6.60 ಮೀ. ಸಾಧನೆಯೊಂದಿಗೆ ಬಂಗಾರ ತನ್ನದಾಗಿಸಿಕೊಂಡರು. ಉಕ್ರೇನ್‌ನ ಮಾರಿಯಾ ಹೋರಿಲೋವಾ ಅವರು 6.50 ಮೀಟರ್ ದೂರದ ಸಾಧನೆಯೊಂದಿಗೆ ಕಂಚು ಪಡೆದುಕೊಂಡರು. ಅಂದ್ಹಾಗೆ ಶೈಲಿ, ದಂತಕತೆ ಅಂಜು ಬಾಬಿ ಜಾರ್ಜ್ ಅವರ ಶಿಷ್ಯೆ.

ಐಪಿಎಲ್ 2021: ಉಳಿದ ಪಂದ್ಯಗಳಿಂದ ಹಿಂದಕ್ಕೆ ಸರಿದ ಸ್ಟಾರ್ ಆಟಗಾರರು ಇವರು!ಐಪಿಎಲ್ 2021: ಉಳಿದ ಪಂದ್ಯಗಳಿಂದ ಹಿಂದಕ್ಕೆ ಸರಿದ ಸ್ಟಾರ್ ಆಟಗಾರರು ಇವರು!

"6.59 ಮೀಟರ್‌ಗಿಂತ ದೂರ ಜಿಗಿದಿದ್ದರೆ ಬಹುಶಃ ನಾನು ಬಂಗಾರ ಗೆಲ್ಲುತ್ತಿದ್ದೆನೋ ಏನೋ. ಬಂಗಾರ ಗೆದ್ದು ರಾಷ್ಟ್ರಗೀತೆ ಮೊಳಗಿಸು ಎಂದು ನನ್ನ ತಾಯಿ ನನಗೆ ಹೇಳಿದ್ದರು. ಆದರೆ ಅದು ನನ್ನಿಂದ ಈ ಬಾರಿ ಸಾಧ್ಯವಾಗಲಿಲ್ಲ. ಮುಂದೆ ಕೊಲಂಬಿಯಾದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಖಂಡಿತಾ ಚಿನ್ನ ಗೆಲ್ಲುತ್ತೇನೆ," ಎಂದು ಸ್ಪರ್ಧೆಯ ಬಳಿಕ ಶೈಲಿ ಭಾವುಕರಾಗಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, August 23, 2021, 8:21 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X