ರಿಯೋ ಡಿ ಜನೈರೋ,ಆಗಸ್ಟ್.15: ರಿಯೋದಲ್ಲಿ ರಗ್ಬಿ ಸ್ಪರ್ಧಿಯ ಪ್ರೇಮ ನಿವೇದನೆ ಪ್ರಸಂಗದ ನಂತರ ಚೀನಿ ಈಜುಪಟುಗಳ ಪ್ರೇಮ ಕಥೆಗೆ ಒಲಿಂಪಿಕ್ಸ್ ವೇದಿಕೆ ಒದಗಿಸಿದೆ. ಡೈವಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಚೀನಿ ಹೀ ಝೀಗೆ ಪೋಡಿಯಂನಲ್ಲೇ ವಜ್ರದ ಉಂಗುರದ ಗಿಫ್ಟ್ ಸಿಕ್ಕಿದೆ. ಕಂಚಿನ ಪದಕ ಗೆದ್ದ ಕ್ವಿನ್ ಕಾಯ್ ಅವರು ಮದುವೆ ಪ್ರಪೋಸ್ ಮಾಡಿದ್ದಾರೆ.
ಒಲಿಂಪಿಕ್ಸ್ ನ ಮರಿಯಾ ಲೆಂಕ್ ಅಕ್ವಾಟಿಕ್ಸ್ ಸೆಂಟರ್ ನಲ್ಲಿ ಭಾನುವಾರದಂದು ಮಹಿಳೆಯರ 3 ಮೀಟರ್ ಸ್ಪ್ರಿಂಗ್ ಬೋರ್ಡ್ ಸ್ಪರ್ಧೆಯಲ್ಲಿ ಚೀನಾದ ಹೀ ಝೀ ಬೆಳ್ಳಿ ಪದಕ ಪಡೆದರು. ನಂತರ ಪದಕ ಪ್ರದಾನ ಸಮಾಂಭದಲ್ಲಿ ಇಂಥದ್ದೊಂದು ನೆನಪಿನ ಕಾಣಿಕೆ ಸಿಕ್ಕಿದೆ.[ರಗ್ಬಿ ಆಟಗಾರ್ತಿ ಮದ್ವೆಗೆ ಗೆಳತಿಯ ಚುಂಬನ ಮುದ್ರೆ]

ಆ ಕ್ಷಣ ಏನು ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೆ ನಾಚಿಕೆಯಿಂದ ಕಣ್ಣುಮುಚ್ಚಿಕೊಂದ ಹೀ ಝೀ ನಂತರ ಕ್ವಿನ್ ಅವರ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಾರೆ. [ರಿಯೋ ದಲ್ಲಿ ಮತ್ತೊಂದು ಸಲಿಂಗಿಗಳ ನಿಶ್ಚಿತಾರ್ಥ]
30 ವರ್ಷ ವಯಸ್ಸಿನ ಕ್ವಿನ್ ಕಾಯ್ ಅವರು 6 ವರ್ಷಗಳ ತಮ್ಮ ಗೆಳೆತನವನ್ನು ಪ್ರೇಮವಾಗಿ ಪರಿವರ್ತಿಸಲು ರಿಯೋ ಒಲಿಂಪಿಕ್ಸ್ ಸೂಕ್ತ ವೇದಿಕೆ ಎಂದು ನಿರ್ಧರಿಸಿ ಈ ರೀತಿ ಪ್ರಪೋಸ್ ಮಾಡಿದ್ದಾರೆ.