ರಗ್ಬಿ ವಿಶ್ವಕಪ್‌ನಲ್ಲಿ ಭಾರತದ ಹಾಜರಿ ಹಾಕಿದ ಟವೆಲ್
ಬೆಂಗಳೂರು, ಸೆಪ್ಟೆಂಬರ್. 23: ರಗ್ಬಿ ವಿಶ್ವಕಪ್ ನಲ್ಲಿ ಭಾರತ ತಂಡ ಕಾಣಿಸಿಕೊಳ್ಳಲು ಇನ್ನು ಕೆಲ ವರ್ಷಗಳೇ ಹಿಡಿಯಬಹುದು. ಆದರೆ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ರಗ್ಬಿ ವಿಶ್ವಕಪ್ ನಲ್ಲಿ ಭಾರತ ತನ್ನ ಇರುವಿಕೆಯನ್ನು ಸಾಬೀತು ಮಾಡುತ್ತಿದೆ.
ಸೆಪ್ಟೆಂಬರ್ 18 ರಿಂದ ಆರಂಭವಾಗಿರುವ ರಗ್ಬಿ ವಿಶ್ವಕಪ್ ಅಕ್ಟೊಬರ್ 31 ರಂದು ಕೊನೆಗೊಳ್ಳಲಿದೆ. ವಿಶ್ವಕಪ್ ನಲ್ಲಿ ಪಾಲ್ಗೊಂಡ ಆಟಗಾರರಿಗೆ ಭಾರತದಲ್ಲಿ ತಯಾರಾದ ಟವೆಲ್ ನೀಡಲಾಗುತ್ತಿದೆ. ವೆಲ್ಸಪನ್ ಇಂಡಿಯಾ ಲಿಮಿಟೆಡ್ ಗುಜರಾತ್ ನ ವಾಪಿ ಮತ್ತು ಅಂಜರ್ ನಲ್ಲಿ ತಯಾರು ಮಾಡಿದ ಟವೆಲ್ ಗಳನ್ನು ಆಟಗಾರರಿಗೆ ನೀಡಲಾಗುತ್ತಿದೆ.[ಭಾರತದಲ್ಲೇ ತಯಾರಾದ ಜಿಯೋಮಿ ಮೊಬೈಲ್]

2006ರ ವಿಂಬಲ್ಡನ್ ಗೂ ವೆಲ್ಸಪನ್ ಇಂಡಿಯಾ ಟವೆಲ್ ಗಳನ್ನು ಕೊಡಮಾಡಿತ್ತು. ಇಂಗ್ಲೆಂಡ್ ಮೂಲದ ಕಂಪನಿಯೊಂದನ್ನು 2006 ರಲ್ಲಿ ವೆಲ್ಸಪನ್ ತನ್ನ ವ್ಯಾಪ್ತಿಗೆ ತೆಗೆದುಕೊಂಡಿತ್ತು. 2500 ಘಟಕದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ನಮೂನೆಯ ಟವೆಲ್ ಗಳನ್ನು ತಯಾರು ಮಾಡಲಾಗುತ್ತಿದೆ.
3 ಬಿಲಿಯನ್ ಡಾಲರ್ ಗೂ ಅಧಿಕ ಬಂಡವಾಳವನ್ನು ಸಂಸ್ಥೆ ಹೊಂದಿದೆ. ವಿಶ್ವದ ಟಾಪ್ ಮೂರು ಟೆಕ್ಸ ಟೈಲ್ ಉದ್ಯಮದಲ್ಲಿ ಕಂಪನಿ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಏಷ್ಯಾದಲ್ಲಿ ಅತಿದೊಡ್ಡ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದ್ದೇವೆ ಎಂದು ಸಂಸ್ಥೆ ತನ್ನ ಈ ಬಗ್ಗೆ ತನ್ನ ವೆಬ್ ತಾಣದಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications