ಮ್ಯಾಗ್ನಸ್ ಕಾರ್ಲ್‌ಸನ್ ಮುಡಿಗೆ ಕ್ಲಚ್ ಚೆಸ್ ಇಂಟರ್ ನ್ಯಾಷನಲ್ ಕಿರೀಟ

ಚೆನ್ನೈ, ಜೂನ್ 15: ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಮುಡಿಗೆ ಕ್ಲಚ್ ಚೆಸ್ ಇಂಟರ್ ನ್ಯಾಷನಲ್ ಕಿರೀಟ ಏರಿದೆ. ರೋಚಕ ಫೈನಲ್ ಪಂದ್ಯದಲ್ಲಿ ನಾರ್ವೇಯನ್ ಗ್ರ್ಯಾಂಡ್ ಮಾಸ್ಟರ್ ಕಾರ್ಲ್‌ಸನ್ ಅವರು ಎದುರಾಳಿ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದರು.
ಭಾನುವಾರ ರಾತ್ರಿ ಕ್ಲಚ್ ಚೆಸ್ ಇಂಟರ್ ನ್ಯಾಷನಲ್ ರೋಚಕ ಫೈನಲ್ ಪಂದ್ಯ ಅಂತಿಮಗೊಂಡಿತು. 9.5-8.5ರ ಸ್ಕೋರ್‌ಲೈನ್‌ನಲ್ಲಿ ಕಾರ್ಲ್‌ಸನ್ ಅವರು ಅಮೆರಿಕನ್-ಇಟಾಲಿಯನ್ ಗ್ರ್ಯಾಂಡ್ ಮಾಸ್ಟರ್ ಕರುವಾನಾ ವಿರುದ್ಧ ಮೇಲುಗೈ ಸಾಧಿಸಿದರು.
ವಿಶ್ವ ನಂ.1 ಶ್ರೇಯಾಂಕಿತ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ವಿಶ್ವ ನಂ.2ನೇ ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಇಬ್ಬರ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಇಬ್ಬರೂ ಅದ್ಭುತ ಚೆಸ್ ಕೌಶಲವನ್ನು ಪ್ರದರ್ಶಿಸಿದರು. ಪಂದ್ಯದ ಬಳಿಕ ನಡೆದ ಸಂದರ್ಶನದ ವೇಳೆಯೂ ಇಬ್ಬರೂ ಪ್ರೌಢತೆ, ಕ್ರೀಡಾಸ್ಫೂರ್ತಿ ತೋರಿಕೊಂಡರು.
ಆಟದ ಆರಂಭದಿಂದಲೂ ಇಬ್ಬರ ಮಧ್ಯೆ ತೀವ್ರ ಪೈಪೋಟಿಯಿತ್ತಾದರೂ ಕಾರ್ಲ್‌ಸನ್ ಅವರು ಗೇಮ್ 11 ಅನ್ನು ಕಳೆದುಕೊಂಡಿದ್ದರಿಂದ ಅಪಾಯಕಾರಿ ಸ್ಥಾನದಲ್ಲಿದ್ದರು. ಆದರೆ 12ನೇ ಗೇಮ್‌ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಕಾರ್ಲ್‌ಸನ್ ಗೆಲುವು ತನ್ನದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications