ಅಂತಾರಾಷ್ಟ್ರೀಯ ಪದಕಗಳ ಗೆದ್ದ ಅಪ್ರತಿಮ ಛಲಗಾರ ಮಲ್ಲಪ್ಪ ಪೂಜಾರ್

ಧಾರವಾಡ, ನವೆಂಬರ್ 17: ಗುರುವಿಲ್ಲದೇ ಸಾಧನೆ ಮಾಡಿ, ಇತಿಹಾಸ ಬರೆದ ಛಲಗಾರ ಏಕಲವ್ಯ. ಇಲ್ಲೊಬ್ಬ ಕಾರ್ಮಿಕನೂ ಕೂಡ ಗುರುವಿಲ್ಲದೇ ಹೊರ ದೇಶ ದುಬೈನಲ್ಲಿ ಭಾರತದ ಬಾವುಟ ಹಾರಿಸಿದ್ದಾರೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನ 5 ಕಿ.ಮೀ ಓಟದಲ್ಲಿ ಚಿನ್ನ, 10 ಕಿ.ಮೀ ಓಟದಲ್ಲಿ ಬೆಳ್ಳಿ ಪದಕ ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾನೆ.
ಧಾರವಾಡದಲ್ಲಿ ಟಾಟಾ ಮಾರ್ಕೊಪೊಲೊದಲ್ಲಿ ಕಾರ್ಮಿಕ ನಾಗಿ ಕೆಲಸ ಮಾಡುತ್ತಿರುವ ಜಿಲ್ಲೆಯ ನಿವಾಸಿ ಮಲ್ಲಪ್ಪ ಪೂಜಾರ್ ಅವರಿಗೆ, ಮೊದಲಿನಿಂದಲೂ ಅಥ್ಲೆಟಿಕ್ಸ್ ಅಂದ್ರೆ ಇಷ್ಟ. ಹೀಗಾಗಿ ಕೆಲಸದ ಒತ್ತಡದ ನಡುವೆಯೂ ಶ್ರಮವಹಿಸಿ ಅಥ್ಲೆಟಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ 3 ರಾಷ್ಟ್ರೀಯ ಹಾಗೂ 2 ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದಾರೆ.

ದುಬೈನಲ್ಲಿ ನವೆಂಬರ್ 8ರಂದು ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಡದ, ಪುರುಷರ 5 ಕಿ.ಮೀ. ಓಟದಲ್ಲಿ ಪ್ರಥಮ ಸ್ಥಾನ, 10 ಕಿ.ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರಮವಾಗಿ ಚಿನ್ನ, ಬೆಳ್ಳಿ ಪದಕಗಳನ್ನು ಮಲ್ಲಪ್ಪ ಕೊರಳಿಗೇರಿಸಿಕೊಂಡಿದ್ದಾರೆ. ಮಲ್ಲಪ್ಪ ಸಾಧನೆಗೆ ಅವರ ಜೊತೆ ದುಡಿಯೋ ಸಹ ಕಾರ್ಮಿಕರೂ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ (ಎಸ್‌ಬಿಕೆಎಫ್) ಸಹಯೋಗದೊಂದಿಗೆ ಜಾಮ್ ಸ್ಪೋರ್ಟ್ಸ್ ಆಯೋಜಿಸಿದ್ದ ಯುನೈಟೆಡ್ ಇಂಟರ್ ನ್ಯಾಷನಲ್ ಗೇಮ್ಸ್‌ನಲ್ಲಿ ವಿವಿಧ ದೇಶಗಳ ಅನೇಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ದೇಶಕ್ಕಾಗಿ ಪದಕ ಗೆದ್ದ ಬಡ ಕ್ರೀಡಾಪಟು ಮಲ್ಲಪ್ಪ ಅವರನ್ನು ಜಿಲ್ಲಾಡಳಿತ, ರಾಜ್ಯ ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications