Paris Olympics 2024 Table Tennis: ಒಲಿಂಪಿಕ್ ಅಭಿಯಾನ ಕೊನೆಗೊಳಿಸಿದ ಮನಿಕಾ ಬಾತ್ರಾ!
ಜುಲೈ 31 ಬುಧವಾರ, ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರ ಒಲಿಂಪಿಕ್ ಅಭಿಯಾನ ಕೊನೆಗೊಂಡಿದೆ. ಅದ್ಭುತ ಆಟದ ಹೊರತಾಗಿಯೂ ಮಹಿಳೆಯರ ವೈಯಕ್ತಿಕ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು.
ಇದರೊಂದಿಗೆ ಮನಿಕಾ ಬಾತ್ರಾ ಅವರ ಭಾರತ ಪರ ಸೆಮಿಫೈನಲ್ ಆಡುವ ಮತ್ತು ದೇಶಕ್ಕಾಗಿ ಪದಕ ಪಡೆಯುವ ಕನಸು ನನಸಾಗಿಯೇ ಉಳಿಯಿತು. ಮಹಿಳೆಯರ ವೈಯಕ್ತಿಕ ಸ್ಪರ್ಧೆಯ 16ರ ಸುತ್ತಿನ ಅಂದರೆ ಪ್ರೀ ಕಾರ್ಟರ್ ಫೈನಲ್ ಪಂದ್ಯದಲ್ಲಿ, ಮಣಿಕಾ ಬಾತ್ರಾ ಅಪಾಯಕಾರಿ ಜಪಾನ್‌ನ ಆಟಗಾರ್ತಿ ಮಿಯು ಹಿರಾನೊ ಅವರನ್ನು ಎದುರಿಸಿದರು.

ಈ ಪಂದ್ಯದಲ್ಲಿ ಮಿಯು ನಿರೀಕ್ಷೆಯಂತೆಯೇ ಪ್ರದರ್ಶನ ನೀಡಿ ಮೊದಲ ಎರಡೂ ಸೆಟ್‌ಗಳನ್ನು ಗೆದ್ದುಕೊಂಡರು. ಮಿಯು ಮೊದಲ ಸೆಟ್‌ನಲ್ಲಿ 6-11 ಮತ್ತು ಎರಡನೇ ಸೆಟ್‌ನಲ್ಲಿ 9-11 ರಿಂದ ಬಾತ್ರಾ ಅವರನ್ನು ಸೋಲಿಸಿದರು.
ಇದಾದ ನಂತರ ಮಣಿಕಾ ಬಾತ್ರಾ ಅದ್ಭುತ ಪುನರಾಗಮನ ಮಾಡಿ ಮೂರನೇ ಸೆಟ್‌ನಲ್ಲಿ ಮಿಯು ಅವರನ್ನು 14-12 ರಿಂದ ಸೋಲಿಸಿದರು. ಇದರೊಂದಿಗೆ ಮಣಿಕಾ ಬಾತ್ರಾ ಪಂದ್ಯದಲ್ಲಿ ತಮ್ಮ ಭರವಸೆಯನ್ನು ಜೀವಂತವಾಗಿರಿಸಿಕೊಂಡರು.
ನಾಲ್ಕನೇ ಸೆಟ್‌ನಲ್ಲಿ ಮಿಯು ತಿರುಗೇಟು ನೀಡಿ 11-8 ಸೆಟ್‌ಗಳಿಂದ ಗೆದ್ದರು. ಮಣಿಕಾ ಬಾತ್ರಾ ಐದನೇ ಸೆಟ್‌ನಲ್ಲಿ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಐದನೇ ಸೆಟ್ ಅನ್ನು 11-6 ರಲ್ಲಿ ಕಳೆದುಕೊಳ್ಳುವ ಮೂಲಕ 2024ರ ಒಲಿಂಪಿಕ್ಸ್‌ನಲ್ಲಿ ಮಣಿಕಾ ಅಭಿಯಾನ ಕೊನೆಗೊಂಡಿತು. ಜಪಾನ್‌ನ ಮಿಯು ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಪ್ಯಾರಿಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದ ಮಣಿಕಾ
ಈ ಹಿಂದೆ ಮಣಿಕಾ ಬಾತ್ರಾ ಟೇಬಲ್ ಟೆನಿಸ್‌ನ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ವಿಶ್ವದ 28ನೇ ಶ್ರೇಯಾಂಕದ ಮಣಿಕಾ ಭಾರತಕ್ಕೆ ಪದಕ ಗೆಲ್ಲುವ ಅವಕಾಶ ತಪ್ಪಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications