For Quick Alerts
ALLOW NOTIFICATIONS  
For Daily Alerts

WTT contender: ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಮಣಿಕಾ ಬಾತ್ರಾ

Manika Batra reaches semi-final in womens singles in WTT contender

ಬುಡಾಪೆಸ್ಟ್: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಟೇಬಲ್‌ ಟೆನಿಸ್ (ಡಬ್ಲ್ಯೂಟಿಟಿ) ಕಂಟೆಂಡರ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದವರೇ ಆದ ಶ್ರೀಜಾ ಅಕುಲ ಅವರನ್ನು ಸೋಲಿಸುವ ಮೂಲಕ ಮಣಿಕಾ ಮುನ್ನಡೆ ಪಡೆದುಕೊಂಡಿದ್ದಾರೆ. ಅಲ್ಲದೆ, ಮಿಕ್ಸ್ಡ್ ಡಬಲ್ಸ್‌ನಲ್ಲಿ ಜಿ ಸತಿಯನ್ ಜೊತೆಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮಣಿಕಾ ಬಾತ್ರಾ ಅವರು ಶ್ರೀಜಾ ಅಕುಲ ಅವರನ್ನು 7-11, 11-1, 8-11, 13-11, 11-6ರ ಅಂತರದಲ್ಲಿ ಸೋಲಿಸಿದ್ದಾರೆ. ಪಂದ್ಯ ತುಂಬಾ ಜಿದ್ದಾಜಿದ್ದಿಯಿಂದ ಕೂಡಿತ್ತಾದರೂ ಅಂತಿಮವಾಗಿ ಫಲಿತಾಂಶ ಎರಡು ಬಾರಿಯ ಒಲಿಂಪಿಕ್ಸ್ ಸ್ಪರ್ಧಿ ಮಣಿಕಾ ಪರವಾಯ್ತು.

ಫೈನಲ್‌ ಸ್ಪರ್ಧೆಗೆ ಮಣಿಕಾ ಬಾತ್ರಾ-ಜಿ ಸತಿಯನ್ ಜೋಡಿ ಆಯ್ಕೆ

ಫೈನಲ್‌ ಸ್ಪರ್ಧೆಗೆ ಮಣಿಕಾ ಬಾತ್ರಾ-ಜಿ ಸತಿಯನ್ ಜೋಡಿ ಆಯ್ಕೆ

ಮಿಕ್ಸ್ಡ್‌ ಡಬಲ್ಸ್ ಸೆಮಿಫೈನಲ್‌ ಸ್ಪರ್ಧೆಯಲ್ಲಿ ಮಣಿಕಾ ಬಾತ್ರಾ ಮತ್ತು ಜಿ ಸತಿಯನ್ ಜೋಡಿ ಬೆಲಾರಸ್ ಜೋಡಿಯಾದ ಅಲಿಯಾಕ್ಸಾಂಡರ್ ಖಾನಿನ್ ಮತ್ತು ಡೇರಿಯಾ ಟ್ರಿಗೋಲೋಸ್ ವಿರುದ್ಧ 3-0ಯ ಅಂತರದಿಂದ ಜಯ ಗಳಿಸಿದೆ. ಭಾರತದ ಜೋಡಿ ಬೆಲಾರಸ್ ಜೋಡಿಯ ವಿರುದ್ಧ 11-6, 11-5, 11-4ರ ಅಂತರದಿಂದ ಗೆದ್ದಿತು. ಫೈನಲ್‌ನಲ್ಲಿ ಭಾರತೀಯ ಜೋಡಿ ಹಂಗೆರಿಯ ನಂದೋರ್ ಎಸೆಕಿ ಮತ್ತು ಡೋರಿಯಾ ಮದರಾಜ್ ಎದುರು ಸೆಣಸಾಡಲಿದೆ. ಹಂಗೆರಿಯನ್ ಜೋಡಿ ರಷ್ಯನ್ ಜೋಡಿಯಾದ ಕಿರಿಲ್ ಸ್ಕಾಚ್ಕೋವ್ ಮತ್ತು ವಿಕ್ಟೋರಿಯಾ ವೊರೊಬೆವಾ ಎದುರು 11-5 11-9 11-8ರ ಅಂತರದ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೇ ಆಗಸ್ಟ್ 8ರಂದು ಮುಕ್ತಾಯಗೊಂಡಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಣಿಕಾ ಪಾಲ್ಗೊಂಡಿದ್ದರು. ಪದಕ ಗೆಲ್ಲುವ ಅಥ್ಲೀಟ್‌ಗಳ ಸಾಲಿನಲ್ಲಿ ಮಣಿಕಾ ಇದ್ದರಾದರೂ ತನ್ನ ಮೊಂಡುತನದಿಂದ, ಹಠಮಾರಿತನದಿಂದ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಸೋತು ನಿರಾಸೆ ಅನುಭವಿಸಿದ್ದರು.

ದುರ್ವರ್ತನೆ ತೋರಿದ್ದ ಬಾತ್ರಾಗೆ ಟಿಟಿಎಫ್‌ಐ ಶೋಕಾಸ್ ನೋಟಿಸ್

ದುರ್ವರ್ತನೆ ತೋರಿದ್ದ ಬಾತ್ರಾಗೆ ಟಿಟಿಎಫ್‌ಐ ಶೋಕಾಸ್ ನೋಟಿಸ್

ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ಕೋಚ್ ಸೌಮ್ಯದೀಪ್‌ ರಾಯ್ ಸಹಾಯ ನಿರಾಕರಿಸಿದ ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಬುಧವಾರ (ಆಗಸ್ಟ್ 4) ಶೋಕಾಸ್ ನೋಟಿಸ್ ನೀಡಿತ್ತು. ಕಾರಣ, ಮಣಿಕಾ ಬಾತ್ರಾ ಅವರ ವೈಯಕ್ತಿಕ ಕೋಚ್ ಸನ್ಮಯ್ ಪರಂಜ್ಪೆ ಅವರಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಭ್ಯಾಸದ ವೇಳೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಪಂದ್ಯದ ವೇಳೆ ಕ್ರೀಡಾಂಗಣ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸ್ಪರ್ಧೆಯ ವೇಳೆ ಪರಂಜ್ಪೆಗೆ ಅವಕಾಶ ನೀಡಬೇಕೆಂದು ಮಣಿಕಾ ಒತ್ತಾಯಿಸಿದರಾದರೂ ಆಯೋಜಕರು ಇದಕ್ಕೆ ಸಮ್ಮತಿಸಲಿಲ್ಲ. ಯಾಕೆಂದರೆ ಒಲಿಂಪಿಕ್ಸ್‌ನಂತ ದೊಡ್ಡ ಕ್ರೀಡಾಕೂಟಗಳ ವೇಳೆ ರಾಷ್ಟ್ರೀಯ ಕೋಚ್‌ಗೆ ಸ್ಪರ್ಧೆ ನಡೆಯುತ್ತಿರುವ ವೇಳೆ ಪ್ಲೇಯರ್‌ಗೆ ಸಲಹೆ, ಮಾರ್ಗದರ್ಶನ ನೀಡಲು ಅವಕಾಶವಿದೆಯೇ ಹೊರತು ವೈಯಕ್ತಿಕ ಕೋಚ್‌ಗಳ ಸಹಾಯ ಪಡೆದುಕೊಳ್ಳಲು ಪ್ಲೇಯರ್‌ಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವಾಗ ವೈಯಕ್ತಿಕ ಕೋಚ್ ಪ್ರವೇಶಕ್ಕೆ ಹೆಚ್ಚಿನಸಾರಿ ಅವಕಾಶ ಮಾಡಿಕೊಡಲ್ಲ. ಆದರೆ ಇದರಿಂದ ಕೋಪಗೊಂಡ ಬಾತ್ರಾ ಸ್ಪರ್ಧೆಯ ವೇಳೆ ತನಗೆ ರಾಷ್ಟ್ರೀಯ ಕೋಚ್ ಸಹಾಯವೂ ಬೇಕಿಲ್ಲ ಎಂದಿದ್ದರು. ಅಲ್ಲದೆ ಮೂರನೇ ಸುತ್ತಿನಲ್ಲಿ ಪಂದ್ಯವೂ ಸೋತು ಕ್ರೀಡಾಕೂಟದಿಂದ ಹೊರ ಬಿದ್ದಿದ್ದರು.

ಟೋಕಿಯೋದಲ್ಲಿ ಹೆಚ್ಚು ಪದಕ ಗೆದ್ದು ಭಾರತ ದಾಖಲೆ

ಟೋಕಿಯೋದಲ್ಲಿ ಹೆಚ್ಚು ಪದಕ ಗೆದ್ದು ಭಾರತ ದಾಖಲೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತಕ್ಕೆ ದಾಖಲೆ ಸಂಖ್ಯೆಯ ಪದಕಗಳು ಲಭಿಸಿದ್ದವು. ಈ ಬಾರಿ ಭಾರತ ನಾಲ್ಕು ಕಂಚು, 2 ಬೆಳ್ಳಿ ಮತ್ತು 1 ಬಂಗಾರ ಸೇರಿ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧುಗೆ ಕಂಚು, ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್‌ಗೆ ಕಂಚಿನ ಪದಕ, ಪುರುಷರ ರಸ್ಲಿಂಗ್‌ನಲ್ಲಿ ರವಿ ಕುಮಾರ್ ದಹಿಯಾಗೆ ಬೆಳ್ಳಿ ಪದಕ, ಪುರುಷರ ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾಗೆ ಕಂಚಿನ ಪದಕ, ಪುರುಷರ ಹಾಕಿ ತಂಡಕ್ಕೆ ಕಂಚಿನ ಗೌರವ, ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಬಂಗಾರದ ಪದಕ ಸಿಕ್ಕಿತ್ತು. ಇದಕ್ಕೂ ಹಿಂದೆ ಒಲಿಂಪಿಕ್ಸ್‌ನಲ್ಲಿ 6 ಪದಕಗಳನ್ನು ಗೆದ್ದಿದ್ದೆ ದೊಡ್ಡ ದಾಖಲೆಯಾಗಿತ್ತು. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರು ಪದಕಗಳು ಬಂದಿದ್ದವು. ಟೋಕಿಯೋದಲ್ಲಿ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ತೀವ್ರ ನಿರಾಸೆಯಾಗಿತ್ತು.

Story first published: Friday, August 20, 2021, 8:22 [IST]
Other articles published on Aug 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+