ಮೀರಾಬಾಯ್ ಚಾನುಗೆ ಪೊಲೀಸ್ ಕೆಲಸ ಘೋಷಿಸಿದ ಮಣಿಪುರ ಸಿಎಂ

ಇಂಫಾಲ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿರುವ ಸಾಯ್‌ಕೋಮ್ ಮೀರಾಬಾಯ್ ಚಾನುಗೆ ಮಣಿಪುರ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಘೋಷಿಸಿದೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಅವರು ಮೀರಾಬಾಯಿಗೆ ಪೊಲೀಸ್ ಇಲಾಖೆಯಲ್ಲಿ ಅಡಿಶನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆ ನೀಡುವುದಾಗಿ ಘೋಷಿಸಿದ್ದಾರೆ.
ಇಂಪಾಲದಲ್ಲಿರುವ ಮುಖ್ಯಮಂತ್ರಿಗಳ ಕಾರ್ಯಾಲಯ ಈ ವಿಚಾರ ಸೋಮವಾರ (ಜುಲೈ 26) ಘೋಷಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದರು.
ಭಾನುವಾರ (ಜುಲೈ 25) ವೀಡಿಯೋ ಸಂವಾದದಲ್ಲಿ ಮಾತನಾಡಿದ್ದ ಬಿರೆನ್, "ನೀನಿನ್ನು ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಚೆಕಿಂಗ್ ಇನ್‌ಸ್ಪೆಕ್ಟರ್ ಆಗಿರಬೇಕಾಗಿಲ್ಲ. ನಿನಗಾಗಿ ಒಳ್ಳೆಯ ಹುದ್ದೆ ನೀಡಲಿದ್ದೇವೆ. ಇದಲ್ಲದೆ ನೀನು ಇಂಪಾಲಗೆ ಬರುತ್ತಲೇ ನಿನಗೆ ಒಂದು ಕೋಟಿ ರೂ. ನಗದು ಪುರಸ್ಕಾರ ಸಿಗಲಿದೆ," ಎಂದು ಹೇಳಿದ್ದಾರೆ.
ಮಣಿಪುರದವರೇ ಆದ ಖ್ಯಾತ ಬಾಕ್ಸರ್ ಮೇರಿ ಕೋಮ್ ಕೂಡ ದೇಶಕ್ಕೆ ಪದಕ ಗೆಲ್ಲಲಿದ್ದಾರೆ ಎಂದು ಬಿರೆನ್ ತಿಳಿಸಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಚಾನು ಬೆಳ್ಳಿ ಗೆದ್ದಿದ್ದರೆ ಚೀನಾದ ಹೌ ಝಿಹುಯ್ ಬಂಗಾರ ಜಯಿಸಿದ್ದರು. ಅಂದ್ಹಾಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದಿದ್ದೇ ಚಾನು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications