Paris Olympics 2024: ಒಂದೇ ಆವೃತ್ತಿ 3ನೇ ಪದಕದ ಮೇಲೆ ಕಣ್ಣಿಟ್ಟ ಭಾರತದ ಸ್ಟಾರ್ ಶೂಟರ್!
ಆಗಸ್ಟ್ 2 ಶುಕ್ರವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಸ್ಟಾರ್ ಶೂಟರ್ ಮನು ಭಾಕರ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಮನು ಭಾಕರ್ ಅವರು 25 ಮೀಟರ್ ಪಿಸ್ತೂಲ್ ಮಹಿಳೆಯರ ಅರ್ಹತಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ.
ಮನು ಭಾಕರ್ ಒಟ್ಟು 590 ಅಂಕಗಳೊಂದಿಗೆ ಎರಡನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಮತ್ತೊರ್ವ ಶೂಟರ್ ಇಶಾ ಸಿಂಗ್ ಅವರು ಒಟ್ಟು 581 ಅಂಕಗಳೊಂದಿಗೆ 18ನೇ ಸ್ಥಾನ ಪಡೆದಿದ್ದಾರೆ.

ಈಗಾಗಲೇ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಮನು ಭಾಕರ್ ಗೆದ್ದಿದ್ದಾರೆ. ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದರೆ, ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇದೀಗ 25 ಮೀಟರ್ ಪಿಸ್ತೂಲ್ ಫೈನಲ್‌ನಲ್ಲಿ ಮೂರನೇ ಪದಕದ ಮೇಲೆ ಕಣ್ಣಿಟ್ಟಿರುವ ಮನು ಭಾಕರ್ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಮನು ಭಾಕರ್ ಮೂರನೇ ಪದಕ ಗೆಲ್ಲಲಿ ಎಂದು ಭಾರತೀಯ ಕ್ರೀಡಾಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಫೈನಲ್ ಯಾವಾಗ?
ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಮನು ಭಾಕರ್ ತಮ್ಮ ಮ್ಯಾಜಿಕ್ ತೋರಿಸಲು ರೆಡಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಮನು ಅವರು ಫೈನಲ್ ಆಡಲಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಈ ಫೈನಲ್‌ನಲ್ಲಿ ಮನು ಭಾಕರ್ ಅವರು ದೇಶಕ್ಕೆ ಮೂರನೇ ಪದಕ ಗೆದ್ದರೆ, ಒಂದೇ ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈವರೆಗೆ ಒಲಿಂಪಿಕ್ಸ್ ಇತಿಹಾಸದಲ್ಲಿ ಇಂತಹ ಅಪರೂಪ ಸಾಧನೆಯನ್ನು ಯಾವೊಬ್ಬ ಭಾರತೀಯ ಅಥ್ಲೀಟ್ ಕೂಡ ಮಾಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications