Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಮನು ಭಾಕರ್‌ಗೆ ಹ್ಯಾಟ್ರಿಕ್‌ ಪದಕ ಜಸ್ಟ್ ಮಿಸ್!

ಆಗಸ್ಟ್‌ 3 ಶನಿವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ 25 ಮೀಟರ್ ಮಹಿಳಾ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಮನು ಭಾಕರ್‌ 4ನೇ ಸ್ಥಾನ ಗಳಿಸಿದ್ದಾರೆ.

ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್‌ ಮೂರನೇ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಒಂದು ವೇಳೆ ಈ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದರೆ ಒಂದೇ ಒಲಿಂಪಿಕ್ಸ್‌ನಲ್ಲಿ 3 ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಳ್ಳುತ್ತಿದ್ದರು.

Manu Bhakar just misses the 3rd medal

ಇದಕ್ಕೂ ಮುನ್ನ ಪ್ಯಾರಿಸ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಮನು ಭಾಕರ್ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಮನುಗೆ ಹ್ಯಾಟ್ರಿಕ್‌ ಪದಕ ಜಸ್ಟ್‌ ಮಿಸ್‌

ಮನು ಭಾಕರ್‌ ಶನಿವಾರ ನಡೆದ ಮಹಿಳೆಯರ 25 ಮೀಟರ್‌ ಪಿಸ್ತೂಲ್‌ ಫೈನಲ್‌ನಲ್ಲಿ ಒಟ್ಟು 28 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿ ಅಲ್ಪ ಅಂತರದಿಂದ ಸ್ಪರ್ಧೆಯಲ್ಲಿ ಸ್ಥಾನ ಕಳೆದುಕೊಂಡರು. ಮಾಜಿ ಯೂತ್ ಒಲಿಂಪಿಕ್ ಚಾಂಪಿಯನ್ ಭಾಕರ್ ಮೊದಲ ಸುತ್ತಿನ ನಂತರ ಎರಡನೇ ಸ್ಥಾನದಲ್ಲಿದ್ದರು.

ನಂತರ 7ನೇ ಸರಣಿಯ ಅಂತ್ಯದ ವೇಳೆಗೂ ಮನು ಪದಕ ಗೆಲ್ಲುವ ತವಕದಲ್ಲಿದ್ದರು. 8ನೇ ಸರಣಿಯಲ್ಲಿ ತನ್ನ 5 ಹೊಡೆತಗಳಲ್ಲಿ ಎರಡನ್ನು ಮಾತ್ರ ಪರಿವರ್ತಿಸಿದ ನಂತರ (10.2 ಅಥವಾ ಹೆಚ್ಚಿನ ಸ್ಕೋರ್), ಭಾಕರ್ ಟಾಪ್-3 ನಲ್ಲಿ ಉಳಿಯಲು ಶೂಟ್-ಆಫ್‌ಗೆ ಹೋದರು.

ಅಲ್ಲಿ ಹಂಗೇರಿಯ ಶೂಟರ್ ವೆರೋನಿಕಾ ಮೇಜರ್ ಅವರು ಮನು ಭಾಕರ್‌ನನ್ನು ಹಿಂದಿಕ್ಕಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮಹಿಳೆಯರ 25 ಮೀಟರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಕೊರಿಯಾದ ಯಾಂಗ್‌ ಜಿನ್‌ 37 ಅಂಕ ಗಳಿಸಿ ಚಿನ್ನದ ಪದಕ ಗೆದ್ದರು.

ಆತಿಥೇಯ ಫ್ರಾನ್ಸ್‌ನ ಶೂಟರ್ ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ 10ನೇ ಸರಣಿ ಹಾಗು ಶೂಟ್-ಆಫ್ ನಂತರ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

Story first published: Saturday, August 3, 2024, 14:12 [IST]
Other articles published on Aug 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+